ಭಾರತ ವಿರುದ್ಧದ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ-ಜೋ ರೂಟ್ ಕಮ್‌ಬ್ಯಾಕ್

First Published Jun 19, 2018, 5:15 PM IST
Highlights

ಆಸ್ಟ್ರೇಲಿಯಾ ಹಾಗೂ ಭಾರತ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಇಂಗ್ಲೆಂಡ್ ಬಲಿಷ್ಠ ತಂಡವನ್ನ ಆಯ್ಕೆ ಮಾಡಿದೆ. ಒಂದು ವರ್ಷದಿಂದ ಚುಟುಕು ಕ್ರಿಕೆಟ್‌ನಿಂದ ದೂರ ಉಳಿದಿದ್ದ ಜೋ ರೂಟ್‌ಗೆ ಸ್ಥಾನ ನೀಡಿದ್ದರೆ, ಮತ್ತೊರ್ವ ಸ್ಟಾರ್ ಆಲ್‌ರೌಂಡರ್‌ಗೆ ಅವಕಾಶ ನೀಡಿಲ್ಲ.

ಇಂಗ್ಲೆಂಡ್(ಜೂ.19):  ಆಸ್ಟ್ರೇಲಿಯಾ ಹಾಗೂ ಭಾರತ ವಿರುದ್ಧದ ಟಿ-ಟ್ವೆಂಟಿ ಪಂದ್ಯದ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. 2017ರಿಂದ ಟಿ-ಟ್ವೆಂಟಿ ಮಾದರಿಯಿಂದ ದೂರವಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾದ ಬಳಿಕ ರೂಟ್, ಸೆಪ್ಟೆಂಬರ್ 2017ರಿಂದ ಟಿ-ಟ್ವೆಂಟಿ ತಂಡದಿಂದ ದೂರ ಉಳಿದಿದ್ದರು. ಇದೀಗ ಬರೋಬ್ಬರಿ 1 ವರ್ಷಗಳ ಬಳಿಕ ಚುಟುಕು ಕ್ರಿಕೆಟ್ ಆಡಲು ರೂಟ್ ಸಜ್ಜಾಗಿದ್ದಾರೆ.  ಈ ಮೂಲಕ ಭಾರತ ವಿರುದ್ಧ ಬಲಿಷ್ಠ ತಂಡವನ್ನೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯ್ಕೆಮಾಡಿದೆ.

ಇಯಾನ್ ಮಾರ್ಗನ್ ತಂಡವನ್ನ ಮುನ್ನಡೆಸಲಿದ್ದಾರೆ. ಆದರೆ ಗಾಯಗೊಂಡಿರುವ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಟೂರ್ನಿಯಿಂದ ರೂಲ್ಡ್ ಔಟ್ ಆಗಿದ್ದಾರೆ. ಸ್ಟೋಕ್ಸ್ ಬದಲು ಸ್ಯಾಮ್ ಕುರ್ರನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜುಲೈ 3 ರಿಂದ 8 ವರೆಗೆ ಭಾರತ ಹಾಗೂ ಇಂಗ್ಲೆಂಡ್ 3 ಟಿ-ಟ್ವೆಂಟಿ ಪಂದ್ಯ ಆಡಲಿದೆ. 

ಇಂಗ್ಲೆಂಡ್ ತಂಡ:
ಇಯಾನ್ ಮಾರ್ಗನ್(ನಾಯಕ),ಮೊಯಿನ್ ಆಲಿ, ಜಾನಿ ಬೈರಿಸ್ಟೋ, ಜೇಕ್ ಬಾಲ್, ಜಾನಿ ಬೈರಿಸ್ಟೋ, ಸ್ಯಾಮ್ ಕುರ್ರನ್, ಟಾಮ್ ಕುರ್ರನ್, ಆಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡನ್, ಲಿಯಾಮ್ ಪ್ಲೆಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್ ಹಾಗೂ ಡೇವಿಡ್ ವಿಲೆ

click me!