ಟಿ20ಯಲ್ಲಿ ಅತಿವೇಗದ ಶತಕದ ದಾಖಲೆ: ಗುಟ್ಟು ಬಿಚ್ಚಿಟ್ಟ ರೋಹಿತ್

By Suvarna Web DeskFirst Published Dec 24, 2017, 11:39 AM IST
Highlights

* ಟಿ20ಯಲ್ಲಿ ವೇಗದ ಶತಕ ದಾಖಲೆ ಬರೆದ ರೋಹಿತ್ ಶರ್ಮಾ

* ಬಾಲ್ಯದ ತುಂಟಾಟ ದಾಖಲೆ ಕಾರಣವೆಂದ ಕ್ರಿಕೆಟಿಗ.

ಮುಂಬೈ: ಟಿ20ಯಲ್ಲಿ ಅತಿವೇಗದ ಶತಕದ ದಾಖಲೆ ಬರೆದ ಬೆನ್ನಲ್ಲೇ ರೋಹಿತ್ ಶರ್ಮಾ, ತಾವು ನಿರಾಯಾಸವಾಗಿ ಸಿಕ್ಸರ್ ಸಿಡಿಸುವುದರ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. 

ಸಂದರ್ಶನವೊಂದರಲ್ಲಿ ರೋಹಿತ್, 'ಚಿಕ್ಕವನಿದ್ದಾಗಿನಿಂದಲೂ ನಾನು ದೊಡ್ಡ ಹೊಡೆತಗಳನ್ನು ಬಾರಿಸುತ್ತಿದ್ದೆ. ಕ್ರಿಕೆಟ್ ನಮ್ಮ ಕುಟುಂಬದಲ್ಲೇ ಇದೆ. ಬಹುತೇಕರು ಹಲವು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿದ್ದಾರೆ. ಏನಿಲ್ಲಾ ಅಂದರೂ ದಿನಕ್ಕೆ 16 ಗಂಟೆ ಕ್ರಿಕೆಟ್ ನೋಡುತ್ತಿದ್ದೆವು. ನಮ್ಮ ಮನೆ ಮುಂದೆ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದೆ. ಅಕ್ಕಪಕ್ಕದವರ ಮನೆ ಗಾಜುಗಳನ್ನು ಅನೇಕ ಬಾರಿ ಒಡೆದು ಹಾಕಿದ್ದಾನೆ. ಒಮ್ಮೆ ಪಕ್ಕದ ಮನೆಯವರು ದೂರು ದಾಖಲಿಸಿದ ಕಾರಣ, ಪೊಲೀಸರು ನನ್ನನ್ನು ಜೈಲಿಗೆ ಹಾಕುವುದಾಗಿ ಹೇಳಿ ಎಚ್ಚರಿಸಿದ್ದರು' ಎಂದು ರೋಹಿತ್ ಹೇಳಿದ್ದಾರೆ.

ಮತ್ತೆ ಕ್ರಿಕೆಟ್ ತಂಡದ ನಾಯಕನಾಗುವ ಅವಕಾಶ ಸಿಗುತ್ತೋ, ಇಲ್ಲವೋ, ಗೊತ್ತಿಲ್ಲ: ರೋಹಿತ್

ಇಂದೋರ್: ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ, ನಾಯಕತ್ವದ ಪ್ರತಿ ಕ್ಷಣವನ್ನೂ ಆನಂದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

'ಮೊದಲ ಬಾರಿಗೆ ನಾಯಕನಾಗಿರುವಕಾರಣ, ನನ್ನ ಮೇಲೆ ಒತ್ತಡವಿದೆ. ಇನ್ನೊಮ್ಮೆ ತಂಡವನ್ನು ಮುನ್ನಡೆಸುವ ಅವಕಾಶ ಯಾವಾಗ ಸಿಗಲಿದೆ ಎಂದು ನನಗೆ ತಿಳಿದಿಲ್ಲ. ಸದ್ಯಕ್ಕೆ ಪ್ರತಿ ನಿಮಿಷವನ್ನು ನಾನು ಆನಂದಿಸುತ್ತಿದ್ದೇನೆ. 140 ಕೋಟಿ ಭಾರತೀಯ 
 


 

click me!