ಆಸ್ಟ್ರೇಲಿಯನ್ ಓಪನ್: 4ನೇ ಸುತ್ತು ಪ್ರವೇಶಿಸಿದ ಫೆಡರರ್‌

By Web DeskFirst Published Jan 19, 2019, 10:10 AM IST
Highlights

3ನೇ ಸುತ್ತಿನ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ನ ಟೆನಿಸ್‌ ಮಾಂತ್ರಿಕ ಫೆಡರರ್‌, ಅಮೆರಿಕದ ಟೇಲರ್‌ ಫ್ರಿಟ್ಜ್ ವಿರುದ್ಧ 6-2, 7-5, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 88 ನಿಮಿಷಗಳಲ್ಲಿ ಪಂದ್ಯ ಜಯಿಸಿದ ಫೆಡರರ್‌, ಗ್ರ್ಯಾಂಡ್‌ಸ್ಲಾಂಗಳಲ್ಲಿ 63ನೇ ಬಾರಿಗೆ 4ನೇ ಸುತ್ತಿಗೇರಿದ ಸಾಧನೆಗೈದರು.

ಮೆಲ್ಬರ್ನ್‌[ಜ.19]: ಆಸ್ಪ್ರೇಲಿಯನ್‌ ಓಪನ್‌ ಪುರುಷರ ಸಿಂಗಲ್ಸ್‌ ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌ ಗೆಲುವಿನ ಓಟ ಮುಂದುವರಿಸಿದ್ದು, 4ನೇ ಸುತ್ತಿಗೆ ಪ್ರವೇಶ ಪಡೆದರೆ, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಕ್ಯಾರೋಲಿನ್‌ ವೋಜ್ನಿಯಾಕಿ 3ನೇ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ.

ಶುಕ್ರವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ನ ಟೆನಿಸ್‌ ಮಾಂತ್ರಿಕ ಫೆಡರರ್‌, ಅಮೆರಿಕದ ಟೇಲರ್‌ ಫ್ರಿಟ್ಜ್ ವಿರುದ್ಧ 6-2, 7-5, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 88 ನಿಮಿಷಗಳಲ್ಲಿ ಪಂದ್ಯ ಜಯಿಸಿದ ಫೆಡರರ್‌, ಗ್ರ್ಯಾಂಡ್‌ಸ್ಲಾಂಗಳಲ್ಲಿ 63ನೇ ಬಾರಿಗೆ 4ನೇ ಸುತ್ತಿಗೇರಿದ ಸಾಧನೆಗೈದರು. 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ರೋಜರ್‌, 4ನೇ ಸುತ್ತಿನಲ್ಲಿ ಗ್ರೀಸ್‌ನ ಸ್ಟೆಫಾನೋ ಟಿಟ್ಸಿಪಾಸ್‌ ವಿರುದ್ಧ ಸೆಣಸಲಿದ್ದಾರೆ.

ಇದೇ ವೇಳೆ ಪುರುಷರ ಸಿಂಗಲ್ಸ್‌ನ 4ನೇ ಸುತ್ತಿಗೆ 17 ಗ್ರ್ಯಾಂಡ್‌ಸ್ಲಾಂ ವಿಜೇತ ಸ್ಪೇನ್‌ನ ರಾಫೆಲ್‌ ನಡಾಲ್‌ ಸಹ ಲಗ್ಗೆಯಿಟ್ಟಿದ್ದಾರೆ. 3ನೇ ಸುತ್ತಿನಲ್ಲಿ ಆಸ್ಪ್ರೇಲಿಯಾದ 19 ವರ್ಷದ ಅಲೆಕ್ಸ್‌ ಡಿ ಮಿನಾರ್‌ ವಿರುದ್ಧ 6-1, 6-2, 6-4 ಸೆಟ್‌ಗಳಲ್ಲಿ ಗೆಲುವು ಪಡೆದರು. ಕ್ವಾರ್ಟರ್‌ ಫೈನಲ್‌ಗೇರಲು ನಡಾಲ್‌, ಚೆಕ್‌ ಗಣರಾಜ್ಯದ ಥಾಮಸ್‌ ಬರ್ಡಿಚ್‌ ವಿರುದ್ಧ ಸೆಣಸಲಿದ್ದಾರೆ.

ವೋಜ್ನಿ ಹೊರದಬ್ಬಿದ ಶೆರ್ಪಿ: ಪ್ರಚಂಡ ಲಯದಲ್ಲಿರುವ ರಷ್ಯಾದ ಮರಿಯಾ ಶರಪೋವಾ, 3ನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಡೆನ್ಮಾರ್ಕ್ನ ಕ್ಯಾರೋಲಿನ್‌ ವೋಜ್ನಿಯಾಕಿ ವಿರುದ್ಧ 6-4, 4-6, 6-3 ಸೆಟ್‌ಗಳಲ್ಲಿ ಗೆಲುವು ಪಡೆದರು. 4ನೇ ಸುತ್ತಲ್ಲಿ ಶರಪೋವಾಗೆ ಆಸ್ಪ್ರೇಲಿಯಾದ ಆ್ಯಶ್‌ ಬಾರ್ಟಿ ಎದುರಾಗಲಿದ್ದಾರೆ. ಇದೇ ವೇಳೆ 2ನೇ ಶ್ರೇಯಾಂಕಿತೆ ಜರ್ಮನಿಯ ಆ್ಯಂಜಿಲಿಕ್‌ ಕೆರ್ಬರ್‌, 8ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ, 5ನೇ ಶ್ರೇಯಾಂಕಿತೆ ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌ ಸಹ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

click me!