ವಾವ್ರಿಂಕಾ ಮನೆಗೆ, ಫೆಡರರ್ ಫೈನಲ್'ಗೆ

By Suvarna Web DeskFirst Published Jan 26, 2017, 3:47 PM IST
Highlights

ನಿರ್ಣಾಯಕ ಸೆಟ್‌ನಲ್ಲಿ ತನ್ನೆಲ್ಲಾ ಅನುಭವವನ್ನೂ ಧಾರೆ ಎರೆದ ಫೆಡರರ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದರು.

ಮೆಲ್ಬೋರ್ನ್(ಜ.26): ಹಿರಿಯ ಆಟಗಾರ ರೋಜರ್ ಫೆಡರರ್ ವಿಶ್ವ ದಾಖಲೆಯ 18ನೇ ಗ್ರಾಂಡ್‌'ಸ್ಲಾಮ್‌'ಗಾಗಿ ಸವೆಸಬೇಕಿರುವುದು ಇನ್ನೊಂದೇ ಹೆಜ್ಜೆಯನ್ನಾದರೆ, ಇತ್ತ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ವಿಲಿಯಮ್ಸ್ ಸೋದರಿಯರು ಮುಖಾಮುಖಿಯಾಗುತ್ತಿರುವುದು ಈ ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿಯ ವೈಶಿಷ್ಯತೆ ಎನಿಸಿದೆ.

ಇಲ್ಲಿನ ರಾಡ್ ಲೇವರ್ ಮೈದಾನದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಕಾದಾಟದಲ್ಲಿ ಸ್ವಿಟ್ಜರ್'ಲೆಂಡ್ ಆಟಗಾರ ರೋಜರ್ ಫೆಡರರ್, ತಮ್ಮ ದೇಶದವರೇ ಆದ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧದ ಐದು ಸೆಟ್‌'ಗಳ ರೋಚಕ ಸೆಣಸಾಟದಲ್ಲಿ 7-5, 6-3, 1-6, 4-6, 6-3 ಸೆಟ್‌'ಗಳಲ್ಲಿ ಗೆಲುವು ಪಡೆದರು.

35ರ ಹರೆಯದ ಫೆಡರರ್, ಮೂರು ತಾಸು ಹಾಗೂ ಐದು ನಿಮಿಷಗಳ ಕಾದಾಟದಲ್ಲಿ ಮೊದಲೆರಡು ಸೆಟ್‌'ಗಳನ್ನು ಕೈವಶಮಾಡಿಕೊಂಡು ದಿಟ್ಟ ಆರಂಭ ಪಡೆದರೂ, ಆನಂತರದ ಎರಡೂ ಸೆಟ್‌ಗಳಲ್ಲಿ ವಾವ್ರಿಂಕಾ ಪ್ರತಿರೋಧದಿಂದ ಹಿನ್ನಡೆ ಅನುಭವಿಸಿದರು. ಆದರೆ, ನಿರ್ಣಾಯಕ ಸೆಟ್‌ನಲ್ಲಿ ತನ್ನೆಲ್ಲಾ ಅನುಭವವನ್ನೂ ಧಾರೆ ಎರೆದ ಫೆಡರರ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದರು. ಶುಕ್ರವಾರ ನಡೆಯಲಿರುವ ಪುರುಷರ ಇನ್ನೊಂದು ಸೆಮಿಫೈನಲ್ ಹಣಾಹಣಿಯಲ್ಲಿ ನಡಾಲ್ ಹಾಗೂ ಡಿಮಿಟ್ರೋವ್ ಪರಸ್ಪರ ಕಾದಾಡಲಿದ್ದಾರೆ. ಈ ಪಂದ್ಯದಲ್ಲಿ ವಿಜಯಿಯಾದವರು ಫೆಡರರ್ ಅವರೊಂದಿಗೆ ಸೆಣಸಲಿದ್ದಾರೆ.

click me!