ಚಿನ್ನ ಗೆದ್ದ ಹಿಮಾ ದಾಸ್’ಗೆ ರೆಡ್ ಕಾರ್ಪೆಟ್ ಸ್ವಾಗತ

Published : Sep 08, 2018, 02:52 PM ISTUpdated : Sep 09, 2018, 09:40 PM IST
ಚಿನ್ನ ಗೆದ್ದ ಹಿಮಾ ದಾಸ್’ಗೆ ರೆಡ್ ಕಾರ್ಪೆಟ್ ಸ್ವಾಗತ

ಸಾರಾಂಶ

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಹಿಮಾರನ್ನು ಸ್ವಾಗತಿಸಲು ಸ್ವತಃ ಗುವಾಹಟಿ ಏರ್‌ಪೋರ್ಟ್‌ಗೆ ಬಂದಿದ್ದರು.

ನವದೆಹಲಿ(ಸೆ.08): ಏಷ್ಯನ್ ಗೇಮ್ಸ್‌ನಲ್ಲಿ 3 ಪದಕ ಗೆದ್ದಿರುವ ಹಿಮಾ ದಾಸ್‌ಗೆ, ಶುಕ್ರವಾರ ತವರಿನಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ ರೀತಿಯಲ್ಲೇ ಸಿದ್ಧಪಡಿಸಿದ್ದ ರೆಡ್ ಕಾರ್ಪೆಟ್ ಸ್ವಾಗತ ದೊರೆಯಿತು.

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಹಿಮಾರನ್ನು ಸ್ವಾಗತಿಸಲು ಸ್ವತಃ ಗುವಾಹಟಿ ಏರ್‌ಪೋರ್ಟ್‌ಗೆ ಬಂದಿದ್ದರು. ಏಷ್ಯನ್ ಗೇಮ್ಸ್ ಬಳಿಕ ಇದೇ ಮೊದಲ ಬಾರಿಗೆ ತವರಿಗೆ ಆಗಮಿಸುತ್ತಿರುವ ಹಿಮಾ ಅವರ ರೆಡ್ ಕಾರ್ಪೆಟ್ ಸ್ವಾಗತದ ಫೋಟೋಗಳನ್ನು ಟ್ವೀಟರ್‌ನಲ್ಲಿ ಹಾಕಲಾಗಿದೆ. 

ಕಿರಿಯರ ವಿಶ್ವಚಾಂಪಿಯನ್ ಹಿಮಾ, ಏಷ್ಯಾಡ್ 400 ಮೀ.ನಲ್ಲಿ ಬೆಳ್ಳಿ ಗೆದ್ದಿದ್ದರು. ಬಳಿಕ ಮಿಶ್ರ 4/400 ರಿಲೇಯಲ್ಲಿ ಬೆಳ್ಳಿ ಗೆದ್ದರೆ, ಮಹಿಳಾ 4/400 ರಿಲೇಯಲ್ಲಿ ಚಿನ್ನ ಜಯಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಭೇಟಿ ವೇಳೆ ಕೋಲ್ಕತಾದಲ್ಲಿ ರಾದ್ಧಾಂತ: ಆಟಗಾರನ ಕಣ್ತುಂಬಿಕೊಳ್ಳಲು ಆಗದ್ದಕ್ಕೆ ಅಭಿಮಾನಿಗಳ ಆಕ್ರೋಶ
ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ