
ಸೋಲು ಅಂದ್ರೆ ಅಲರ್ಜಿ ಅಂತಿದ್ದ ಟೀಂ ಇಂಡಿಯಾ ನಿನ್ನೆ ಸೋಲನ್ನೇ ಹಾಸಿಗೆಯನ್ನಾಗಿಸಿಕೊಂಡಿತ್ತು. ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡವೆನಿಸಿಕೊಂಡಿದ್ದ ಕೊಹ್ಲಿ ಹುಡುಗರು ದುರ್ಬಲ ಕೀವಿಸ್ ವಿರುದ್ಧ ಮಂಡಿ ಊರಿತ್ತು. ಸದ್ಯ ಸೋಲುಂಡಾಗಿದೆ ಈಗೇನಿದ್ರೂ ಸೋಲಿನ ಕಾರಣಗಳನ್ನ ಹುಡುಕುವ ಸಮಯ. ಅದನ್ನ ಹುಡುಕ ಹೋರಟ ನಮಗೆ ಕಂಡಿದ್ದು ನಿಜಕ್ಕು ದಂಗು ಬಡಿಸೋ ಅಂಶಗಳು.
ಮತ್ತೆ ಕಾಡಿದ ಎಡಗೈ ವೇಗಿಯ ಭಯ
ನಿನ್ನೆ ಟೀಂ ಇಂಡಿಯಾ ಹೀನಾಯ ಸೋಲಿಗೆ ಮೊದಲ ಕಾರಣವೇ ಎಡಗೈ ವೇಗಿ ಟ್ರೆಂಟ್ ಬೋಲ್ಟ್. ನಾವು ಸರಣಿ ಆರಂಭಕ್ಕೂ ಮುನ್ನವೇ ಹೇಳಿದ್ವಿ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ಸ್ ಅಂದ್ರೆ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಗಢ ಗಢ ಅಂತ ನಡಗುತ್ತಾರೆ ಅಂತ. ಆದ್ರೆ ಅದ್ರಿಂದ ಬುದ್ಧ ಕಲಿಯದ ಕೊಹ್ಲಿ ಹುಡುಗರು ಎಡಗೈ ವೇಗಿಗೆ ಪ್ರಿಪೇರ್ ಆಗದೇ ನಿನ್ನೆ ಟ್ರೆಂಟ್ ಬೋಲ್ಟ್ ಮ್ಯಾಜಿಕ್ಗೆ ಬಲಿಯಾದ್ರು. ಬ್ಯಾಟಿಂಗ್ ವೈಫಲ್ಯ ಕಾಣ್ತು.
ಮತ್ತೆ ಚೆಂಜ್ ಆಯ್ತು 4ನೇ ಕ್ರಮಾಂಕ
ನಿನ್ನೆಯ ಸೋಲಿಗೆ 2ನೇ ಕಾರಣವಂದ್ರೆ ಮತ್ತೆ 4ನೇ ಕ್ರಮಾಂಕವನ್ನ ಬದಲಿಸಿದ್ದು. ಉತ್ತಮ ಫಾರ್ಮ್ನಲ್ಲಿದ್ದ ಮನೀಶ್ ಪಾಂಡೆಯನ್ನ ಡ್ರಾಪ್ ಮಾಡಿದ್ದು. ಹೌದು, ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾಗೆ 4 ನೇ ಕ್ರಮಾಂಕ ಇನ್ನಿಲ್ಲದಂತೆ ಕಾಡಿದೆ. ಆ ಕ್ರಮಾಂಕಕ್ಕೆ ಕ್ಯಾಪ್ಟನ್ ಕೊಹ್ಲಿ ಮಾಡಿದ ಎಕ್ಸ್ಪಿರಿಮೆಂಟ್ಗಳು ಅಷ್ಟಿಷ್ಟಲ್ಲ. ನಿನ್ನೆಯೂ ಸಹ 4 ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಆಡ್ತಾರೆ ಅಂದುಕೊಂಡ್ರೆ ಕಣಕಿಳಿದಿದ್ದು ಫಿನಿಷರ್ ಕೇದರ್ ಜಾಧವ್. ಜಾಧವ್ ಗಳಿಸಿದ್ದು ಕೇವಲ 12 ರನ್.
ಇನ್ನೂ ಮನೀಶ್ ಪಾಂಡೆ ಆಸ್ಟ್ರೇಲಿಯಾ ವಿರುದ್ಧ ಒಂದೆರಡು ಪಂದ್ಯಗಳಲ್ಲಿ ಫ್ಲಾಪ್ ಆಗಿದ್ರೂ ಉತ್ತಮ ಲಯದಲ್ಲಿದ್ರು. ಆದ್ರೆ ಅವರನ್ನ ನಿನ್ನೆ ಕೊಹ್ಲಿ ಬೆಂಚ್ ಕಾಯಲು ಹೇಳಿದ್ರು. ಅವರ ಬದಲಿಗೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದ ದಿನೇಶ್ ಕಾರ್ತಿಕ್ಗೆ ಅವಕಾಶ ಕೊಟರು. ನಿನ್ನೆ ಮನೀಶ್ ಆಡಿದಿದ್ರೆ ಟೀಂ ಇಂಡಿಯಾ ಸ್ಕೋರ್ 300ರ ಗಡಿ ದಾಟುತ್ತಿತ್ತು.
ಜಾಧವ್ ಕ್ಯಾಚ್ ಡ್ರಾಪ್ ಮಾಡಿದ್ದು ದುಬಾರಿ ಆಯ್ತು
ಬ್ಯಾಟಿಂಗ್ನಲ್ಲಾದ ಎಡವಟ್ಟುಗಳು ತಿಳಿಯಿತು. ಆದರೆ ಬೌಲಿಂಗ್'ನಲ್ಲಿ ಟೀಂ ಇಂಡಿಯಾ ಬೌಲರ್'ಗಳು ವಿಕೆಟ್ ಪಡೆಯಲು ಪರದಾಡಿಬಿಟ್ಟರು. ಘಟಾನುಘಟಿ ಬೌಲರ್ಗಳು ದುಬಾರಿಯಾದ್ರು. ವೇಗಿಗಳು ಮಂಕಾದ್ರೆ ಸ್ಪಿನ್ನರ್ಗಳ ಮ್ಯಾಜಿಕ್ ನಡೆಯಲಿಲ್ಲ.
ಇನ್ನೂ ನಿನ್ನೆ ಟೀಂ ಇಂಡಿಯಾದ ಫೀಲ್ಡಿಂಗ್ ಕೂಡ ಹೇಳಿಕೊಳ್ಳುವಂತಿರಲಿಲ್ಲ. ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳು ಇಸಿಯಾಗಿ ರನ್ ಗಳಿಸುತ್ತಿದ್ರು. ಇನ್ನೂ ಕೇದರ್ ಜಾಧವ್ ಆರಂಭದಲ್ಲಿ ಮಾಡಿದ ಕ್ಯಾಚ್ ಡ್ರಾಪ್ ಟೀಂ ಇಂಡಿಯಾಗೆ ಭಾರಿ ಹಿನ್ನಡೆಯಾಯ್ತು.
ಇವಿಷ್ಟು ನಿನ್ನೆ ಕೊಹ್ಲಿ ಹುಡುಗರು ಮಂಡಿ ಊರಲು ಪ್ರಮುಖ ಕಾರಣಗಾಳದ್ವು. ಈಗ ಆಗಿದ್ದಾಯ್ತು. ಉಳಿದಿರೋ ಇನ್ನೆರಡೂ ಪಂದ್ಯಗಳು ಟೀಂ ಇಂಡಿಯಾಗೆ ಡು ಆರ್ ಡೈ ಮ್ಯಾಚ್. ಹೀಗಾಗಿ ನಿನ್ನೆಯ ತಪ್ಪುಗಳನ್ನ ತಿದ್ದಿಕೊಂಡ್ರೆ ಸರಣಿ ಜೀವಂತವಾಗಿರಲಿದೆ. ಇಲ್ಲವಾದ್ರೆ ವೈಟ್ ವಾಷ್ ಗ್ಯಾರೆಂಟಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.