ಕೆರಿಬಿಯನ್ ಪ್ರೀಮಿಯರ್ ಲೀಗ್ ಸೇರಿಕೊಂಡ ಆರ್‌ಸಿಬಿ ಕ್ರಿಕೆಟಿಗ

By Web DeskFirst Published Aug 26, 2018, 3:12 PM IST
Highlights

2018ರ ಐಪಿಎಲ್ ಟೂರ್ನಿಯಲ್ಲಿಆತ ಆರ್‌ಸಿಬಿ ತಂಡ ಆಲ್ರೌಂಡರ್ ಆಗಿ ಕಣಕ್ಕಿಳಿದಿದ್ದರು. ಹರಾಜಿನಲ್ಲಿ ಭಾರಿ ಮೊತ್ತ ನೀಡಿ ಫ್ರಾಂಚೈಸಿ ಈ ಆಲ್ರೌಂಡರ್‌ಗೆ ಮಣೆಹಾಕಲಾಗಿತ್ತು. ಆದರೆ ಕಳದೆ ಆವೃತ್ತಿಯಲ್ಲಿ ಈ ಕ್ರಿಕೆಟಿಗ ಆರ್‌ಸಿಬಿ ಪರ ಮಿಂಚಿ ಪ್ರದರ್ಶನ ನೀಡಲಿಲ್ಲ. ಇದೀಗ ಈ ಕ್ರಿಕೆಟಿಗೆ ವಿದೇಶಿ ಲೀಗ್ ಸೇರಿಕೊಂಡಿದ್ದಾರೆ.

ಪೋರ್ಟ್ ಆಫ್ ಸ್ಪೇನ್(ಆ.26): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಪರ ಕಳದೆ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆಲ್ರೌಂಡರ್ ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ ಇದೀಗ ಕೆರಿಬಿಯನ್ ಪ್ರೀಮಿಯರ್  ಲೀಗ್ ಸೇರಿಕೊಂಡಿದ್ದಾರೆ.

ಆಂಡ್ರೆ ರಸೆಲ್ ನಾಯಕತ್ವದ ಜಮೈಕನ್ ತಲ್ವಾಸ್ ತಂಡದ ದೊತೆ ಗ್ರ್ಯಾಂಡ್‌ಹೊಮ್ಮೆ ಒಪ್ಪಂದ ಮಾಡಿಕೊಂಡಿದ್ದಾರೆ. ತಲ್ವಾಸ್ ತಂಡದ ಪಾಕಿಸ್ತಾನ ಕ್ರಿಕೆಟಿಗ ಇಮಾದ್ ವಾಸಿಮ್ ಏಷ್ಯಾ ಕಪ್ ಟೂರ್ನಿಗಾಗಿ ಪಾಕಿಸ್ತಾನಕ್ಕೆ ವಾಪಾಸ್ಸಾಗಿದ್ದಾರೆ. ಹೀಗಾಗಿ ಇಮಾದ್ ವಾಸಿಮ್ ಬದಲು, ಗ್ರ್ಯಾಂಡ್‌ಹೊಮ್ಮೆ ತಂಡ  ಸೇರಿಕೊಂಡಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಗ್ರ್ಯಾಂಡ್‌ಹೊಮ್ಮೆ 167.43ರ ಸ್ಟ್ರೈಕ್ ರೇಟ್‌ನಲ್ಲಿ 2699 ರನ್ ಸಿಡಿಸಿದ್ದಾರೆ. ಇನ್ನು 61 ವಿಕೆಟ್ ಕೂಡ ಕಬಳಿಸಿದ್ದಾರೆ. ಈ ನ್ಯೂಜಿಲೆಂಡ್ ಕ್ರಿಕೆಟಿಗ ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದ್ದಾರೆ.

click me!