
ರಾಜ್ ಕೋಟ್(ನ.13): ಭಾರತ -ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 2ನೇ ಇನ್ನಿಂಗ್ಸ್`ನಲ್ಲಿ ಇಂಗ್ಲೆಂಡ್ ನೀಡಿದ್ದ 310 ರನ್`ಗಳ ಗುರಿ ಬೆನ್ನತ್ತಿದ್ದ ಭಾರತ 5ನೇ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಹೀಗಾಗಿ, ಪಂದ್ಯವನ್ನ ಡ್ರಾ ಎಂದು ಘೋಷಿಸಲಾಯ್ತು.
ನಿನ್ನೆ ಮೊದಲ ಇನ್ನಿಂಗ್ಸ್`ನಲ್ಲಿ 488 ರನ್`ಗಳಿಗೆ ಆಲೌಟ್ ಮಾಡಿದ್ದ ಕುಕ್ ಪಡೆ, ಇವತ್ತು 2ನೇ ಇನ್ನಿಂಗ್ಸ್`ನಲ್ಲಿ 3 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. 310 ರನ್`ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಆಂಗ್ಲ ಬೌಲರ್`ಗಳು ಆರಂಭದಲ್ಲೇ ಶಾಕ್ ನೀಡಿದರು. ಗಂಭೀರ್ ಶೂನ್ಯಕ್ಕೆ ನಿರ್ಗಮಿಸಿದರೆ, ವಿಜಯ್ 31 ಮತ್ತು ಪೂಜಾರ 18ಕ್ಕೆ ಸುಸ್ತಾದರು. ರಹಾನೆ 1 ಮತ್ತು ಸಹಾ 9 ರನ್`ಗೆ ಔಟಾದರು. ಅಜೇಯ 49 ರನ್ ಗಳಿಸಿದ ನಾಯಕ ವಿರಾಟ್ ಕೊಹ್ಲಿ ತಂಡ ಸೋಲಿನ ಸುಳಿಯಿಂದ ಬಚಾವ್ ಮಾಡುವಲ್ಲಿ ಯಶಸ್ವಿಯಾದರು. 5ನೇ ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 537 ಮತ್ತು 260/3 ಡಿಕ್ಲೇರ್
ಭಾರತ : 488 ಮತ್ತು 5ನೇ ದಿನದಾಟದಂತ್ಯಕ್ಕೆ 172?6
ಅಲಿಸ್ಟರ್ ಕುಕ್ : 136 ರನ್
ವಿರಾಟ್ ಕೊಹ್ಲಿ ಅಜೇಯ - 49 ರನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.