ಮಣ್ಣಿನಂಗಳದಲ್ಲಿ 50ನೇ ಪ್ರಶಸ್ತಿಗೆ ಮುತ್ತಿಕ್ಕಿದ ನಡಾಲ್

By Suvarna Web DeskFirst Published Apr 23, 2017, 5:59 PM IST
Highlights

ಒಂದೇ ಪಂದ್ಯಾವಳಿಯಲ್ಲಿ 10 ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆಗೆ ಎಡಗೈ ಆಟಗಾರ ಪಾತ್ರರಾದರು.

ಮೊನಾಕೊ(ಏ.23): ಸ್ಪೇನ್‌'ನ ರಾಫೆಲ್ ನಡಾಲ್ ಮಾಂಟೆ ಕಾರ್ಲೊ ಟೆನಿಸ್ ಮಾಸ್ಟರ್ಸ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ದಾಖಲೆಯ 10ನೇ ಬಾರಿಗೆ ಗೆದ್ದುಕೊಂಡಿದ್ದಾರೆ.

ಫೈನಲ್‌'ನಲ್ಲಿ ತಮ್ಮ ದೇಶದವರೇ ಆದ ಆಲ್ಬರ್ಟ್ ರಾಮೊಸ್ ವಿರುದ್ಧ 6-1,6-3 ಸುಲಭ ಸೆಟ್'ಗಳಿಂದ ಗೆಲುವು ಸಾಧಿಸಿದ ನಡಾಲ್, ಮಣ್ಣಿನಂಗಳದಲ್ಲಿ 50ನೇ ಪ್ರಶಸ್ತಿ ಗೆದ್ದುಕೊಂಡರು.

ಅವರ ವೃತ್ತಿಬದುಕಿನಲ್ಲಿ ಇದು ಒಟ್ಟಾರೆ 70ನೇ ಪ್ರಶಸ್ತಿ. ಒಂದೇ ಪಂದ್ಯಾವಳಿಯಲ್ಲಿ 10 ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆಗೆ ಎಡಗೈ ಆಟಗಾರ ಪಾತ್ರರಾದರು.

click me!