ರದ್ದಾಗುತ್ತಾ ಟೀಂ ಇಂಡಿಯಾದ ಯೋ-ಯೋ ಟೆಸ್ಟ್?

Published : Jun 24, 2018, 02:54 PM IST
ರದ್ದಾಗುತ್ತಾ ಟೀಂ ಇಂಡಿಯಾದ ಯೋ-ಯೋ ಟೆಸ್ಟ್?

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗರ ಯೋ-ಯೋ ಟೆಸ್ಟ್ ರದ್ದಾಗುತ್ತಾ? ಸದ್ಯ ತಂಡಕ್ಕೆ ಆಯ್ಕೆಯಾಗೋ ಕ್ರಿಕೆಟಿಗರು ಯೋ-ಯೋ ಟೆಸ್ಟ್ ಫಾಸ್ ಆದ್ರೆ ಮಾತ್ರ ತಂಡದಲ್ಲಿ ಅವಕಾಶ. ಆದರೆ ಇದೇ ಯೋ-ಯೋ ಟೆಸ್ಟ್ ರದ್ದುಗೊಳಿಸಲು ಸದ್ದಿಲ್ಲದೆ ಬಿಸಿಸಿಐನಲ್ಲಿ ಪ್ಲಾನ್ ನಡೆಯುತ್ತಿದೆ.

ಮುಂಬೈ(ಜೂ.24): ಟೀಂ ಇಂಡಿಯಾಗೆ ಆಯ್ಕೆಯಾಗೋ ಆಟಗಾರರು ಯೋ-ಯೋ ಫಿಟ್ನೆಸ್ ಪರೀಕ್ಷೆ ಪಾಸ್ ಆಗಲೇಬೇಕು. ಈಗಾಗಲೇ ಯೋ-ಯೋ ಟೆಸ್ಟ್‌ನಲ್ಲಿ ಫೈಲ್ ಆದ ಅಂಬಾಟಿ ರಾಯುಡು ಹಾಗೂ ಸಂಜು ಸಾಮ್ಸನ್ ತಂಡದಿಂದಲೇ ಹೊರಬಿದ್ದಿದ್ದಾರೆ. ಇದೀಗ ಯೋ-ಯೋ ಟೆಸ್ಟ್ ಏಷ್ಟು ಸೂಕ್ತ ಅನ್ನೋ ಪ್ರಶ್ನೆ ಎದ್ದಿದೆ.

ಆಟಗಾರರಿಗೆ ಯೋ-ಯೋ ಟೆಸ್ಟ್ ಖಡ್ಡಾಯಗೊಳಿಸಿರೋದನ್ನ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅನಿರುದ್ ಚೌಧರಿ ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಮುಖ್ಯಸ್ಥ ವಿನೋದ್ ರೈಗೆ ಪತ್ರ ಬರೆದಿರುವ  ಚೌಧರಿ ಯಾವ ಆಧಾರದಲ್ಲಿ ಯೋ-ಯೋ ಟೆಸ್ಟ್ ಖಡ್ಡಾಯಗೊಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಬಿಸಿಸಿಐ ಸಿಓಎ ವಿನೋದ್ ರೈ ಹಾಗೂ ಅಮಿತಾಬ್ ಚೌಧರಿ ಹಗ್ಗಜಗ್ಗಾಟ ಸದ್ಯಕ್ಕೆ ಮುಗಿಯೋ ಲಕ್ಷಣಗಳು ಕಾಣಿಸುತ್ತಿಲ್ಲ. ಟೀಂ ಇಂಡಿಯಾ ಆಟಗಾರರ ಆಯ್ಕೆ ಯಾವ ಮಾನದಂಡದಲ್ಲಿ ನಡೆಯುತ್ತಿದೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಯೋ-ಯೋ ಟೆಸ್ಟ್ ಪಾಸ್ ಮಾಡಿ ಆಡಿದ್ದಾರ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನ ಅಮಿತಾಬ್ ಚೌಧರಿ ಕೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಹಾಗೂ ಸಿಓಎ ಜಟಾಪಟಿಯಿಂದ ಯೋ-ಯೋ ಟೆಸ್ಟ್ ರದ್ದಾಗುತ್ತಾ? ಇಂತಹ ಪ್ರಶ್ನೆ ಇದೀಗ ಕ್ರಿಕಟ್ ವಲಯದಲ್ಲಿ ಹರಿದಾಡುತ್ತಿದೆ. ಆದರೆ ಯೋ-ಯೋ ಟೆಸ್ಟ್ ಖಡ್ಡಾಯ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಅನ್ನೋದು ಬಿಸಿಸಿಐ ಮಾತು. 

ಏನಿದು ಯೋ-ಯೋ ಟೆಸ್ಟ್: ಆಟಗಾರರ ದೈಹಿಕ ಕ್ಷಮತೆ ಅಳೆಯಲು ಯೋ-ಯೋ ಟೆಸ್ಟ್ ನಡೆಯಲಾಗುತ್ತೆ. ಕಳೆದ ವರ್ಷ ಬಿಸಿಸಿಐ ಎಲ್ಲಾ ಕ್ರಿಕೆಟಿಗರಿಗೆ ಯೋ-ಯೋ ಟೆಸ್ಟ್ ಕಡ್ಡಾಯಗೊಳಿಸಿದೆ. ಕೋಚ್ ಅನಿಲ್ ಕುಂಬ್ಳೆ ಅವಧಿಯಲ್ಲಿ ಯೋ -ಯೋ ಫಿಟ್ನೆಸ್ ಟೆಸ್ಟ್‌ನ್ನ ಟೀಮ್ಇಂಡಿಯಾದಲ್ಲಿ ಜಾರಿಗೊಳಿಸಲಾಯಿತು. ಇದು ಸಂಪೂರ್ಣವಾಗಿ ಆಟಗಾರರ ಫಿಟ್ನೆಸ್ ಕುರಿತ ಪರೀಕ್ಷೆಯಾಗಿರುತ್ತೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!