ಪ್ರೊ ಕುಸ್ತಿ ಹರಾಜು: ಭಜರಂಗ್, ವಿನೇಶ್’ಗೆ ಬಂಪರ್

By Web Desk  |  First Published Jan 5, 2019, 6:33 PM IST

ಹರಾಜಿನಲ್ಲಿ 2018ರ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಭಜರಂಗ್ ಪೂನಿಯಾ ₹30 ಲಕ್ಷಕ್ಕೆ ಪಂಜಾಬ್ ರಾಯಲ್ಸ್ ಪಾಲಾದರೆ, ಮಹಿಳಾ ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಚಿನ್ನ ವಿಜೇತೆ ವಿನೇಶ್ ಪೊಗಾಟ್ ₹25 ಲಕ್ಷಕ್ಕೆ ಮುಂಬೈ ಮಹರಾಠಿ ತಂಡ ಸೇರಿದರು.


ಗುರುಗ್ರಾಮ(ಜ.05): ಜ.14ರಿಂದ ಆರಂಭವಾಗಲಿರುವ ಪ್ರೊ ಕುಸ್ತಿ ಲೀಗ್ 4ನೇ ಆವೃತ್ತಿಗೆ ಶುಕ್ರವಾರ ಕುಸ್ತಿಪಟುಗಳ ಹರಾಜು ಪ್ರಕ್ರಿಯೆ ಭರ್ಜರಿಯಾಗಿಯೇ ನಡೆಯಿತು.

ಹರಾಜಿನಲ್ಲಿ 2018ರ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಭಜರಂಗ್ ಪೂನಿಯಾ ₹30 ಲಕ್ಷಕ್ಕೆ ಪಂಜಾಬ್ ರಾಯಲ್ಸ್ ಪಾಲಾದರೆ, ಮಹಿಳಾ ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಚಿನ್ನ ವಿಜೇತೆ ವಿನೇಶ್ ಪೊಗಾಟ್ ₹25 ಲಕ್ಷಕ್ಕೆ ಮುಂಬೈ ಮಹರಾಠಿ ತಂಡ ಸೇರಿದರು. ಸಾಕ್ಷಿ ಮಲಿಕ್, ಡೆಲ್ಲಿ ಸುಲ್ತಾನ್ಸ್‌ಗೆ ₹20 ಲಕ್ಷಕ್ಕೆ ಬಿಕರಿಯಾಗಿದ್ದಾರೆ. ವಿದೇಶಿ ಕುಸ್ತಿಪಟುಗಳಾದ ಬೆಲಾರಸ್‌ನ ವೆನೆಸಾ ಕಲಾಜಿನ್ಸ್ ಯುಪಿ ದಂಗಲ್ ಸೇರಿದರೆ, ರಷ್ಯಾದ ಖೇತಿಕ್ ₹25 ಲಕ್ಷಕ್ಕೆ ಡೆಲ್ಲಿ ಸುಲ್ತಾನ್ಸ್ ತಂಡಕ್ಕೆ ಬಿಕರಿಯಾದರು. ಹರಾಜಿನಲ್ಲಿ ಒಟ್ಟು 225 ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಅದರಲ್ಲಿ 6 ಫ್ರಾಂಚೈಸಿಗಳು 54 ಕುಸ್ತಿಪಟುಗಳನ್ನು ಖರೀದಿಸಿದವು. ಯೋಧಾ, ಲೀಗ್‌ನ ಹೊಸ ತಂಡವಾಗಿದೆ.

Latest Videos

ನಾಲ್ಕನೇ ಆವೃತ್ತಿಯ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯು ಜನವರಿ 14ರಿಂದ 31ರವರೆಗೆ ನಡೆಯಲಿದ್ದು, ಚಾಂಪಿಯನ್ ತಂಡವು 1.9 ಕೋಟಿ ಹಾಗೂ ರನ್ನರ್ ಅಪ್ ತಂಡವು 1.1 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳಲಿದೆ.

click me!