ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್'ಶಿಪ್: ಫೈನಲ್'ನಲ್ಲಿ ಪಿ.ವಿ.ಸಿಂಧುಗೆ ವೀರೋಚಿತ ಸೋಲು

Published : Aug 27, 2017, 09:31 PM ISTUpdated : Apr 11, 2018, 01:01 PM IST
ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್'ಶಿಪ್: ಫೈನಲ್'ನಲ್ಲಿ ಪಿ.ವಿ.ಸಿಂಧುಗೆ ವೀರೋಚಿತ ಸೋಲು

ಸಾರಾಂಶ

ಇಂದು ನಡೆದ ಫೈನಲ್'ನಲ್ಲಿ ಜಪಾನ್'ನ ನೊಝೋಮಿ ಒಕುಹಾರಾ ಅವರು 21-19, 20-22, 22-20 ಗೇಮ್'ಗಳಿಂದ ಭಾರತೀಯ ಆಟಗಾರ್ತಿಯನ್ನು ಮಣಿಸಿದ್ದಾರೆ. ಕ್ಷಣಕ್ಷಣವೂ ತೀವ್ರ ಪೈಪೋಟಿ ಕಂಡ ಈ ಪಂದ್ಯದಲ್ಲಿ ಒಂದೊಂದು ಪಾಯಿಂಟ್ ಗಳಿಸಲು ಇಬ್ಬರೂ ಆಟಗಾರ್ತಿಯರು ತೀವ್ರ ಪ್ರಯಾಸ ಹಾಕಬೇಕಾಯಿತು.

ಗ್ಲಾಸ್ಗೋ(ಆ. 27): ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೊಸ ಇತಿಹಾಸ ನಿರ್ಮಾಣ ಮಾಡುವುದರಿಂದ ವಂಚಿತರಾಗಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್'ಶಿಪ್'ನ ಫೈನಲ್'ನಲ್ಲಿ ಸಿಂಧು ಎಡವಿದ್ದಾರೆ. ಇಂದು ನಡೆದ ಫೈನಲ್'ನಲ್ಲಿ ಜಪಾನ್'ನ ನೊಝೋಮಿ ಒಕುಹಾರಾ ಅವರು 21-19, 20-22, 22-20 ಗೇಮ್'ಗಳಿಂದ ಭಾರತೀಯ ಆಟಗಾರ್ತಿಯನ್ನು ಮಣಿಸಿದ್ದಾರೆ. ಕ್ಷಣಕ್ಷಣವೂ ತೀವ್ರ ಪೈಪೋಟಿ ಕಂಡ ಈ ಪಂದ್ಯದಲ್ಲಿ ಒಂದೊಂದು ಪಾಯಿಂಟ್ ಗಳಿಸಲು ಇಬ್ಬರೂ ಆಟಗಾರ್ತಿಯರು ತೀವ್ರ ಪ್ರಯಾಸ ಹಾಕಬೇಕಾಯಿತು.

ಈ ಸೋಲಿನೊಂದಿಗೆ ಪಿ.ವಿ.ಸಿಂಧು ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ, ಸಿಂಧು ಅವರು ವಿಶ್ವಚಾಂಪಿಯನ್'ಶಿಪ್'ಗಳಲ್ಲಿ 3 ಪದಕ ಜಯಿಸಿದ ಏಕೈಕ ಭಾರತೀಯ ಆಟಗಾರ್ತಿ ಎನಿಸಿದ್ದಾರೆ. ಈ ಹಿಂದಿನ ಚಾಂಪಿಯನ್'ಶಿಪ್'ಗಳಲ್ಲಿ ಅವರು ಕಂಚಿನ ಪದಕಗಳನ್ನು ಜಯಿಸಿದ್ದರು. ಈ ಟೂರ್ನಿಯನ್ನು ಗೆದ್ದಿದ್ದರೆ ಸಿಂಧು ಅವರು ವಿಶ್ವಚಾಂಪಿಯನ್'ಶಿಪ್ ಜಯಿಸಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು.

ಇದೇ ಟೂರ್ನಿಯಲ್ಲಿ ಭಾರತದ ಮತ್ತೊಬ್ಬ ಟಾಪ್ ಆಟಗಾರ್ತಿ ಸೈನಾ ನೆಹ್ವಾಲ್ ಕಂಚಿನ ಪದಕ ಜಯಿಸಿದ್ದಾರೆ. ಸೈನಾ ನೆಹ್ವಾಲ್ ಈ ಹಿಂದೆ ಜಕಾರ್ತದಲ್ಲಿ ನಡೆದ ವಿಶ್ವ ಚಾಂಪಿಯನ್'ಶಿಪ್'ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ
U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು