PKL7: ಜೈಪುರ್ ವಿರುದ್ಧ ತವರಿನಲ್ಲಿ ಮುಗ್ಗರಿಸಿದ ಪಾಟ್ನಾ!

By Web Desk  |  First Published Aug 3, 2019, 8:39 PM IST

ತವರಿನ ಅಂಗಳದಲ್ಲಿ ಪಾಟ್ನಾ ಪೈರೇಟ್ಸ್‌ಗೆ ಹಿನ್ನಡೆಯಾಗಿದೆ. ಜೈಪುರ ಪಿಂಕ್‌ಪ್ಯಾಂಥರ್ಸ್ ವಿರುದ್ಧ ಕಠಿಣ ಹೋರಾಟ ನೀಡಿದ ಪಾಟ್ನಾ ಸೋಲು ಅನುಭವಿಸಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 


ಪಾಟಲೀಪುತ್ರ(ಆ.03): ಪರ್ದೀಪ್ ನರ್ವಾಲ್ ಮಿಂಚಿನ ಪ್ರದರ್ಶನ ನೀಡಿದರೂ ಪಾಟ್ನಾ ಪೈರೇಟ್ಸ್ ಗೆಲುವಿನ ನಗೆ ಬೀರಲಿಲ್ಲ. ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಾಟ್ನಾ ಮುಗ್ಗರಿಸಿದೆ. ಅಜಿಂಕ್ಯ ಪವಾರ್ ರೈಡ್‌ನಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ಅಂಕಗಳ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

Tap to resize

Latest Videos

ಮೊದಲಾರ್ಧದ ಆರಂಭದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್‌‌ಗೆ ದೀಪಕ್ ಹೂಡ ಅಂಕ ತಂದುಕೊಲಿಲ್ಲ. ಆದರೆ ಪಾಟ್ನಾಗೆ ಪರ್ದೀಪ್ ನರ್ವಾಲ್ ಶುಭಾರಂಭ ನೀಡಿದರು. ಎರಡನೇ ಪ್ರಯತ್ನದಲ್ಲೂ ಜೈಪುರ ಅಂಕಗಳಿಸಲಿಲ್ಲ. ಆರಂಭಿಕ ಹಂತದಲ್ಲಿ ಜೈಪುರ ಹಿನ್ನಡೆ ಅನುಭವಿಸಿದರೂ ಸಮಬಲದ ಹೋರಾಟ ನೀಡಿತು. ಪಂದ್ಯಗ 6ನೇ ನಿಮಿಷದಲ್ಲಿ ಜೈಪುರ 5-3 ಅಂಕಗಳ ಅಂತರದಲ್ಲಿ  ಮುನ್ನಡೆ ಸಾಧಿಸಿತು. ಇತ್ತ ಪಾಟ್ನಾಗೆ ಪರ್ದೀಪ್ ಹೊರತು ಪಡಿಸಿದರೆ ಇನ್ಯಾರು ನಿರೀಕ್ಷಿತ ಯಶಸ್ಸು ತಂದುಕೊಡಲಿಲ್ಲ.

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ಫಸ್ಟ್ ಹಾಫ್ ಅಂತ್ಯದ ವೇಳೆಗೆ ಜೈಪುರ ಪಿಂಕ್ ಪ್ಯಾಂಥರ್ಸ್ 15-9 ಅಂಕಗಳ ಮುನ್ನಡೆ ಪಡೆದುಕೊಂಡಿತು. ದ್ವಿತಿಯಾರ್ಧದಲ್ಲಿ ಜೈಪುರ ಅಂಕ ಬೇಟೆ ಮುಂದುವರಿಸಿತು. ಆದರೆ ಪಾಟ್ನಾ ಹಿನ್ನಡೆ  ಅಂತರ ಹೆಚ್ಚಾಯಿತು. ಅಂಕಕ್ಕಾಗಿ ಪ್ರಯತ್ನ ನಡೆಸಿದರೂ ಕೈಗೂಡಲಿಲ್ಲ. ಪಂದ್ಯ ಅಂತಿಮ ಘಟ್ಟ ತಲುಪುತ್ತಿದ್ದಂತೆ ಪಾಟ್ನಾ ಚುರುಕಿನ ಆಟ ಪ್ರದರ್ಶಿಸಿತು. ಅಷ್ಟರಲ್ಲಿ  ಜೈಪುರ ಬಹುದೂರ ಸಾಗಿತ್ತು. ಆದರೆ ತೀವ್ರ ಪೈಪೋಟಿ ನೀಡಿದ ಪಾಟ್ನಾಗೆ ಗೆಲುವು ಸಿಗಲಿಲ್ಲ. ಜೈಪುರ ಪಿಂಕ್‌ಪ್ಯಾಂಥರ್ಸ್ ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. 

click me!