ಮಹಾಮಳೆಗೆ ತತ್ತರಿಸಿ 12 ಕಿ.ಮೀ. ನಡೆದು ಹೋಟೆಲ್ ಸೇರಿದ ಬುಲ್ಸ್ ಪಡೆ

Published : Aug 31, 2017, 12:23 AM ISTUpdated : Apr 11, 2018, 01:05 PM IST
ಮಹಾಮಳೆಗೆ ತತ್ತರಿಸಿ 12 ಕಿ.ಮೀ. ನಡೆದು ಹೋಟೆಲ್ ಸೇರಿದ ಬುಲ್ಸ್ ಪಡೆ

ಸಾರಾಂಶ

ತಾವು ಉಳಿದುಕೊಂಡಿದ್ದ ತಾಜ್ ಹೋಟೆಲ್‌ನಿಂದ 16 ಕಿ.ಮೀ. ದೂರದಲ್ಲಿರುವ ಕ್ರೀಡಾಂಗಣದತ್ತ ಆಟಗಾರರು ಮಂಗಳವಾರ ಮಧ್ಯಾಹ್ನ ೪ರ ವೇಳೆಗೆ ಹೊರಟಿದ್ದರು. ಆದರೆ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡ ಕಾರಣ, ನಿಗದಿತ ಅವಧಿಯೊಳಗೆ ಆಟಗಾರರು ಕ್ರೀಡಾಂಗಣ ತಲುಪಲು ಸಾಧ್ಯವಾಗದ ಕಾರಣ ಪ್ರೊ ಕಬಡ್ಡಿ ಪಂದ್ಯಗಳನ್ನು ಮುಂದೂಡಲಾಯಿತು.

ಮುಂಬೈ(ಆ.31): ಮಂಗಳವಾರ ಸುರಿದ ಮಹಾಮಳೆಯಿಂದಾಗಿ ಅತ್ತ ಕ್ರೀಡಾಂಗಣ ತಲುಪಲು ಸಾಧ್ಯವಾಗದ ಬೆಂಗಳೂರು ಬುಲ್ಸ್ ಆಟಗಾರರು ಬಳಿಕ ಎರಡುವರೆ ತಾಸು ಮಳೆಯಲ್ಲಿಯೇ 12 ಕಿ.ಮೀ. ನಡೆದುಕೊಂಡು ಸಾಗಿ, ಮಧ್ಯರಾತ್ರಿ 2 ಗಂಟೆಗೆ ಹೋಟೆಲ್ ತಲುಪಿರುವ ಸುದ್ದಿ ಬೆಳಕಿಗೆ ಬಂದಿದೆ.

ತಾವು ಉಳಿದುಕೊಂಡಿದ್ದ ತಾಜ್ ಹೋಟೆಲ್‌ನಿಂದ 16 ಕಿ.ಮೀ. ದೂರದಲ್ಲಿರುವ ಕ್ರೀಡಾಂಗಣದತ್ತ ಆಟಗಾರರು ಮಂಗಳವಾರ ಮಧ್ಯಾಹ್ನ ೪ರ ವೇಳೆಗೆ ಹೊರಟಿದ್ದರು. ಆದರೆ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡ ಕಾರಣ, ನಿಗದಿತ ಅವಧಿಯೊಳಗೆ ಆಟಗಾರರು ಕ್ರೀಡಾಂಗಣ ತಲುಪಲು ಸಾಧ್ಯವಾಗದ ಕಾರಣ ಪ್ರೊ ಕಬಡ್ಡಿ ಪಂದ್ಯಗಳನ್ನು ಮುಂದೂಡಲಾಯಿತು.

ಈ ಹಿನ್ನೆಲೆಯಲ್ಲಿ ಬುಲ್ಸ್ ಆಟಗಾರರು ಹೋಟೆಲ್‌ಗೆ ಮರಳಲು ನಿರ್ಧರಿಸಿದರು. ಆದರೆ, ತಂಡ ತೆರಳುತ್ತಿದ್ದ ಬಸ್ ಬಿಕೆಸಿ (ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್)ಯಿಂದ ಮುಂದೆ ಹೋಗಲಿಲ್ಲ. ಅಲ್ಲಿಂದ 12 ಕಿ.ಮೀ. ದೂರದ ಸಾಂತ ಕ್ರೂಜ್‌ನಲ್ಲಿರುವ ತಾಜ್ ಹೋಟೆಲ್‌ಗೆ ಆಟಗಾರರು ಪಾದಯಾತ್ರೆ ನಡೆಸಿದ್ದಾರೆ. ಈ ಬಗ್ಗೆ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಂಡದ ಆಟಗಾರರು ಕೋಚ್ ರಣಧೀರ್ ಸಿಂಗ್ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನು ಬುಧವಾರ ಅಪ್‌ಲೋಡ್ ಮಾಡಲಾಗಿದೆ. ರದ್ದಾದ ಪಂದ್ಯಗಳು ನಡೆಯುವ ಕುರಿತು ಇನ್ನೂ ತೀರ್ಮಾನಗೊಂಡಿಲ್ಲ ಎಂದು ಮೂಲಗಳು ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?