2019ರ ವಿಶ್ವಕಪ್ ಟೂರ್ನಿಗೆ ಭಾರತದ ಮಧ್ಯಮ ಕ್ರಮಾಂಕ ಹೇಗಿದೆ ಗೊತ್ತಾ?

First Published May 31, 2018, 11:49 AM IST
Highlights

2019ರ ವಿಶ್ವಕಪ್ ಟೂರ್ನಿಗೆ ಬಹುತೇಕ ಎಲ್ಲಾ ಕ್ರಿಕೆಟ್ ತಂಡಗಳು ತಯಾರಿ ಆರಂಭಿಸಿವೆ. ಇದೀಗ ಟೀಮ್ಇಂಡಿಯೂ ಕೂಡ ಬಲಿಷ್ಠ ತಂಡವನ್ನ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದೆ. ವಿಶೇಷ ಅಂದರೆ ಭಾರತದ ಮಧ್ಯಮ ಕ್ರಮಾಂಕ ಇತರ ಎಲ್ಲಾ ತಂಡಗಳಿಗಿಂತ  ಬಲಿಷ್ಠವಾಗಿದೆ.
 

ಬೆಂಗಳೂರು (ಮೇ.31):  2019ರ ವಿಶ್ವಕಪ್ ಟೂರ್ನಿಗೆ ತಯಾರಿಗಳು ಆರಂಭಗೊಂಡಿದೆ. ಈ ಬಾರಿಯೂ ಕೂಡ ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದೆ. ಅದರಲ್ಲೂ ಭಾರತದ ಮಧ್ಯಮ ಕ್ರಮಾಂಕ ಎಲ್ಲರ ಗಮನಸೆಳೆದಿದೆ. 2019ರ ವಿಶ್ವಕಪ್ ಆಡೋ ಸಂಭಾವ್ಯ ಮಧ್ಯಮ ಕ್ರಮಾಂಕದ ವಿವರ ಇಲ್ಲಿದೆ.

3ನೇ ಕ್ರಮಾಂಕ: ವಿರಾಟ್ ಕೊಹ್ಲಿ
ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ವಿರಾಟ್ ಕೊಹ್ಲಿ ಈಗಾಗಲೇ ಟೀಮ್ಇಂಡಿಯಾವನ್ನ ನಂಬರ್.1 ತಂಡವನ್ನಾಗಿ ಮಾಡಿದ್ದಾರೆ. ಸೌತ್ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಸರಣಿಯಲ್ಲಿ 3 ಶತಕ ಸಿಡಿಸಿದ್ದಲ್ಲದೇ, 558 ರನ್ ಬಾರಿಸಿದ್ದರು. ನಾಯಕನಾಗಿ ಯಶಸ್ವಿಯಾಗಿ ತಂಡವನ್ನ ಮುನ್ನಡೆಸುತ್ತಿರುವ ಕೊಹ್ಲಿ, ನಂಬರ್.1 ಬ್ಯಾಟ್ಸ್‌ಮನ್ ಅನ್ನೋದು  ಕೂಡ ಇಲ್ಲಿ ಗಮನಾರ್ಹ.

4ನೇ ಕ್ರಮಾಂಕ: ಕೆಎಲ್ ರಾಹುಲ್
ಟೀಮ್ಇಂಡಿಯಾದ ಪ್ರತಿಭಾನ್ವಿತ ಆಟಗಾರನಾಗಿ ಗುರುತಿಸಿಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ಸಾಧ್ಯತೆ ಇದೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್, ಅದ್ಬುತ ಪ್ರದರ್ಶನ ನೀಡಿದ್ದರು. ಹೀಗಾಗಿ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದರೆ, ನಾಲ್ಕನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಆದರೆ ಇದು ಚರ್ಚಾ ವಿಚಾರ. ಸದ್ಯ ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್ ಅತ್ಯುತ್ತಮ ಆಯ್ಕೆ. ರಾಹುಲ್ ಸ್ಫೋಟಕ ಇನ್ನಿಂಗ್ಸ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

5ನೇ ಕ್ರಮಾಂಕ: ಎಮ್ ಎಸ್ ಧೋನಿ
3ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಐಪಿಎಲ್ ಚಾಂಪಿಯನ್ ಮಾಡಿಸಿದ ಎಮ್ ಎಸ್ ಧೋನಿ, ಟೀಮ್ಇಂಡಿಯಾದ ಬೆನ್ನೆಲುಬು. ಅದರಲ್ಲೂ 2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿಯೇ ಕಿಂಗ್ ಮೇಕರ್. ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ಧೋನಿ 75.83 ಸರಾಸರಿಯಲ್ಲಿ 455 ರನ್ ಸಿಡಿಸಿದ್ದಾರೆ.  ಧೋನಿ ಸ್ಟ್ರೈಕ್ ರೇಟ್ 150.  ಟೀಮ್ಇಂಡಿಯಾ ಪರ ಧೋನಿ 5ನೇ ಕ್ರಮಾಂಕದಲ್ಲಿ ಹೆಚ್ಚು ಯಶಸ್ಸು ಕಂಡಿದ್ದಾರೆ. 5ನೇ ಕ್ರಮಾಂಕದಲ್ಲಿ ಧೋನಿ 68 ಏಕದಿನ ಇನ್ನಿಂಗ್ಸ್‌ಗಳಲ್ಲಿ 2718 ರನ್ ಗಳಿಸಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಧೋನಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋದು ಸೂಕ್ತ.

6ನೇ ಕ್ರಮಾಂಕ : ದಿನೇಶ್ ಕಾರ್ತಿಕ್
ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಮಿಂಚಿದ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. 150ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್  498 ರನ್ ಸಿಡಿಸಿದ್ದಾರೆ. ಬ್ಯಾಕ್‌ಅಪ್ ವಿಕೆಟ್ ಕೀಪರ್ ಆಗಿರುವ ದಿನೇಶ್ ಕಾರ್ತಿಕ್ ಅನುಭವ ತಂಡಕ್ಕೆ ನೆರವಾಗಲಿದೆ.

7ನೇ ಕ್ರಮಾಂಕ : ಹಾರ್ದಿಕ್ ಪಾಂಡ್ಯ
ಟೀಮ್ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಬ್ಯಾಟಂಗ್‌ನಲ್ಲಿ 260 ರನ್ ಸಿಡಿಸಿದರೆ, 18 ವಿಕೆಟ್ ಪಡೆದು ಗಮನಸೆಳೆದಿದ್ದಾರೆ. ಟೀಮ್ಇಂಡಿಯಾದ ಖಾಯಂ ಸದಸ್ಯನಾಗಿರುವ ಪಾಂಡ್ಯ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

2019ರ ವಿಶ್ವಕಪ್ ಟೂರ್ನಿಗೆ ಸರಿಯಾಗಿ ಇನ್ನೊಂದು ವರ್ಷವಿದೆ.  ಅಷ್ಟರಲ್ಲೇ ತಂಡದಲ್ಲಿ ಕೆಲಬದಲಾವಣೆಗಳಾಗೋದು ಸಹಜ. ಆದರೆ ಸದ್ಯ ಟೀಮ್ಇಂಡಿಯಾ ಆಟಗಾರರ ಪ್ರದರ್ಶನ ಆಧರಿಸಿ ತಂಡವವನ್ನ ಆಯ್ಕೆ ಮಾಡಿದರೆ ಭಾರತದ ಮಧ್ಯಮ ಕ್ರಮಾಂಕ ತಂಡದ ಗೆಲುವಿನ ರೂವಾರಿಯಾಗೋದರಲ್ಲಿ ಅನುಮಾನವಿಲ್ಲ.

click me!