
ಸೂರತ್(ಆ.18): ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸಹೋದರರು ತಮ್ಮ ತಂದೆಗೆ ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ.
ಕೃನಾಲ್ ತಮ್ಮ ತಂದೆ ಹಿಮಾಂಶು ಪಾಂಡ್ಯರನ್ನು ಕಾರು ಮಾರಾಟ ಮಳಿಗೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ವಿಡಿಯೋ ಕಾಲ್ ಮುಖಾಂತರ ಲಂಕಾದಲ್ಲಿರುವ ಹಾರ್ದಿಕ್ ಸಹ ಜೊತೆಗೂಡಿದರು.
ನಿಮಗಿಷ್ಟವಾದ ಕಾರನ್ನು ಆಯ್ಕೆ ಮಾಡಿ ಎಂದು ತಂದೆಗೆ ಹೇಳಿದ್ದಾರೆ. ಕೊನೆಗೆ ಹಿಮಾಂಶು ಕೆಂಪು ಕಾರೊಂದನ್ನು ತೋರಿಸಿ ಇದು ಇಷ್ಟವಾಯಿತು ಎನ್ನುತ್ತಿದ್ದಂತೆ, ಶೋ ರೂಂ ವ್ಯವಸ್ಥಾಪಕ ಆಗಮಿಸಿ ಕೀಲಿ ನೀಡಿದ್ದಾರೆ.
ಮಕ್ಕಳ ಈ ಸರ್ಪ್ರೈಸ್ ಗಿಫ್ಟ್ ಕಂಡು ಹಿಮಾಂಶು ಪಾಂಡ್ಯ ಫುಲ್ ಖುಷ್ ಆಗಿದ್ದಾರೆ.. ಹೀಗಿತ್ತು ಆ ಕ್ಷಣ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.