ಸರ್ಫರಾಜ್ ಅಹ್ಮದ್ ಭರ್ಜರಿ ಆಟ; ಲಂಕನ್ನರಿಗೆ ಸೋಲು; ಸೆಮಿಸ್'ಗೆ ಪಾಕ್

Published : Jun 12, 2017, 11:04 PM ISTUpdated : Apr 11, 2018, 01:02 PM IST
ಸರ್ಫರಾಜ್ ಅಹ್ಮದ್ ಭರ್ಜರಿ ಆಟ; ಲಂಕನ್ನರಿಗೆ ಸೋಲು; ಸೆಮಿಸ್'ಗೆ ಪಾಕ್

ಸಾರಾಂಶ

ಪಂದ್ಯದ ಮೂರು ಪ್ರಮುಖ ಹಂತಗಳಲ್ಲಿ ಶ್ರೀಲಂಕಾ ಕ್ಯಾಚ್ ಮಿಸ್ ಮಾಡಿಕೊಂಡಿತು. ಎಲ್ಲಾ ಮೂರೂ ಕ್ಯಾಚ್ ಮಿಸ್ ಆಗಿದ್ದು ಲಸಿತ್ ಮಾಲಿಂಗ ಬೌಲಿಂಗ್'ನಲ್ಲೇ. ಮೊದಲ ಓವರ್, 39ನೇ ಓವರ್ ಮತ್ತು 41ನೇ ಓವರ್'ನಲ್ಲಿ ಕ್ಯಾಚ್ ಡ್ರಾಪ್ ಆದವು. ಪಾಕ್ ಗೆಲುವಿನ ರೂವಾರಿ ಸರ್ಫರಾಜ್ ಅಹ್ಮದ್'ಗೆ 2 ಜೀವದಾನ ಸಿಕ್ಕವು. ಈ ಮೂರು ಕ್ಯಾಚ್ ಡ್ರಾಪ್ ಆಗಿದ್ದು ಲಂಕಾ ಪಂದ್ಯವನ್ನೇ ಕಳೆದುಕೊಳ್ಳುವಂತಾಯಿತು.

ಕಾರ್ಡಿಫ್(ಜೂನ್ 12): ಸರ್ಫರಾಜ್ ಅಹ್ಮದ್ ಅವರ ಜವಾಬ್ದಾರಿಯುತ ಹಾಗೂ ಸಂಯಮದ ಬ್ಯಾಟಿಂಗ್ ಸಹಾಯದಿಂದ ಪಾಕಿಸ್ತಾನ ತಂಡ ಲಂಕನ್ನರನ್ನು ಸೋಲಿಸಿ ಸೆಮಿಫೈನಲ್'ಗೆ ಲಗ್ಗೆ ಹಾಕಿದೆ. ಇಂದು ನಡೆದ ಬಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 3 ವಿಕೆಟ್'ಗಳಿಂದ ರೋಚಕ ಗೆಲುವು ಸಾಧಿಸಿದೆ. ಗೆಲ್ಲಲು 237 ರನ್'ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ 45ನೇ ಓವರ್'ನಲ್ಲಿ ಜಯ ಸಾಧಿಸಿದೆ. ಸರ್ಫರಾಜ್ ಅಹ್ಮದ್ ಅಜೇಯ ಅರ್ಧಶತಕ ಗಳಿಸಿ ಪಾಕ್ ಗೆಲುವಿನ ರೂವಾರಿಯಾದರು. ಒಂದು ಹಂತದಲ್ಲಿ ಪಾಕಿಸ್ತಾನ 162 ರನ್'ಗೆ 7 ವಿಕೆಟ್ ಕಳೆದುಕೊಂಡಾಗ ಲಂಕನ್ನರು ಗೆಲ್ಲುವ ಸೂಚನೆ ಇತ್ತು. ಅಂಥ ಒತ್ತಡ ಸಂದರ್ಭದಲ್ಲಿ ದೃತಿಗೆಡದ ಸರ್ಫರಾಜ್ ಅಹ್ಮದ್ ಬಹಳ ಕೂಲಾಗಿ ಆಡಿದರು. ಮೊಹಮ್ಮದ್ ಅಮೀರ್ ಸರ್ಫರಾಜ್'ಗೆ ಸರಿಯಾಗಿ ಸಾಥ್ ನೀಡಿದರು.

ಸರ್ಫರಾಜ್ ಅಹ್ಮದ್ ಇನ್ನಿಂಗ್ಸ್'ಗೂ ಮುನ್ನ ಪಾಕಿಸ್ತಾನದ ಚೇಸಿಂಗ್'ಗೆ ಬುನಾದಿ ಹಾಕಿಕೊಟ್ಟಿದ್ದು ಫಕರ್ ಜಮಾನ್ ಮತ್ತು ಅಜರ್ ಅಲಿ ಅವರ ಆರಂಭಿಕ ಜೊತೆಯಾಟ. ಇವರಿಬ್ಬರು ಮೊದಲ ವಿಕೆಟ್'ಗೆ 74 ರನ್ ಸೇರಿಸಿದರು. ಅದಾದ ಬಳಿಕ ಸರ್ಫರಾಜ್ ಆಗಮಿಸುವವರೆಗೂ ಪಾಕಿಸ್ತಾನದ ಇನ್ನಿಂಗ್ಸ್ ಹಳಿತಪ್ಪಿತು. ಲಂಕನ್ನರ ಗೆಲುವಿನ ಹಾದಿಗೆ ಸರ್ಫರಾಜ್ ಅಡ್ಡಗಾಲಾಗಿ ನಿಂತರು.

ಕ್ಯಾಚ್ ಮಿಸ್, ಮ್ಯಾಚ್ ಮಿಸ್:
ಪಂದ್ಯದ ಮೂರು ಪ್ರಮುಖ ಹಂತಗಳಲ್ಲಿ ಶ್ರೀಲಂಕಾ ಕ್ಯಾಚ್ ಮಿಸ್ ಮಾಡಿಕೊಂಡಿತು. ಎಲ್ಲಾ ಮೂರೂ ಕ್ಯಾಚ್ ಮಿಸ್ ಆಗಿದ್ದು ಲಸಿತ್ ಮಾಲಿಂಗ ಬೌಲಿಂಗ್'ನಲ್ಲೇ. ಮೊದಲ ಓವರ್, 39ನೇ ಓವರ್ ಮತ್ತು 41ನೇ ಓವರ್'ನಲ್ಲಿ ಕ್ಯಾಚ್ ಡ್ರಾಪ್ ಆದವು. ಪಾಕ್ ಗೆಲುವಿನ ರೂವಾರಿ ಸರ್ಫರಾಜ್ ಅಹ್ಮದ್'ಗೆ 2 ಜೀವದಾನ ಸಿಕ್ಕವು. ಈ ಮೂರು ಕ್ಯಾಚ್ ಡ್ರಾಪ್ ಆಗಿದ್ದು ಲಂಕಾ ಪಂದ್ಯವನ್ನೇ ಕಳೆದುಕೊಳ್ಳುವಂತಾಯಿತು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್'ಗೆ ಆಹ್ವಾನಿಸಲ್ಪಟ್ಟ ಶ್ರೀಲಂಕಾ ತಂಡ ಸಾಧಾರಣ ಆರಂಭ ಪಡೆಯಿತು. ಆದರೆ, ನಿರೋಶನ್ ಡಿಕ್ವೆಲಾ, ಕುಸಾಲ್ ಮೆಂಡಿಸ್ ಮತ್ತು ಏಂಜೆಲೋ ಮ್ಯಾಥ್ಯೂಸ್ ಅವರ ಉತ್ತಮ ಬ್ಯಾಟಿಂಗ್'ನಿಂದ ಲಂಕಾ ಚೇತರಿಸಿಕೊಂಡಿತು. ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 160 ರನ್ ಗಡಿ ದಾಟಿದ್ದ ಲಂಕಾ 300 ರನ್ ಮುಟ್ಟಬಹುದೆಂದು ಎಣಿಸಲಾಗಿತ್ತು. ಆದರೆ, ಪಾಕ್ ಬೌಲರ್'ಗಳು ಈ ಹಂತದಲ್ಲಿ ಮೇಲುಗೈ ಸಾಧಿಸಿ ಲಂಕಾ ಬ್ಯಾಟುಗಾರರನ್ನು ಕಟ್ಟಿಹಾಕಿದರು. ಶ್ರೀಲಂಕಾ ಇನ್ನಿಂಗ್ಸ್ 236 ರನ್'ಗೆ ಅಂತ್ಯಗೊಂಡಿತು. ಪಾಕಿಸ್ತಾನದ ಜುನೇದ್ ಖಾನ್ ಮತ್ತು ಹಸನ್ ಅಲಿ ತಲಾ 3 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಆಮೀರ್ ಮತ್ತು ಫಾಹಿಮ್ ಅಶ್ರಫ್ ತಲಾ ಎರಡು ವಿಕೆಟ್ ಸಂಪಾದಿಸಿದರು.

ಸೆಮಿಫೈನಲ್'ನಲ್ಲಿ...
ಎ ಗುಂಪಿನಿಂದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಸೆಮಿಫೈನಲ್ ಪ್ರವೇಶಿಸಿವೆ. ಬಿ ಗುಂಪಿನಿಂದ ಭಾರತ ಮತ್ತು ಪಾಕ್ ನಾಕೌಟ್ ಹಂತಕ್ಕೇರಿವೆ. ಸೆಮಿಫೈನಲ್'ನಲ್ಲಿ ಇಂಗ್ಲೆಂಡ್'ಗೆ ಪಾಕ್ ಸವಾಲು ಹಾಕಿದರೆ, ಭಾರತ ಮತ್ತು ಬಾಂಗ್ಲಾದೇಶಗಳು ಮತ್ತೊಂದು ಸೆಮಿಸ್'ನಲ್ಲಿ ಮುಖಾಮುಖಿಯಾಗಲಿವೆ.

ಶ್ರೀಲಂಕಾ 49.2 ಓವರ್ 236 ರನ್ ಆಲೌಟ್
(ನಿಕ್ ಡಿಕ್ವೆಲಾ 73, ಏಂಜೆಲೋ ಮ್ಯಾಥ್ಯೂಸ್ 39, ಕುಸಾಲ್ ಮೆಂಡಿಸ್, ಅಸೆಲಾ ಗುಣರತ್ನೆ 27, ಸುರಂಗಾ ಲಕ್ಮಲ್ 26 ರನ್ - ಜುನೇದ್ ಖಾನ್ 40/3, ಹಸನ್ ಅಲಿ 43/3, ಫಾಹಿಮ್ ಅಶ್ರಫ್ 37/2, ಮೊಹಮ್ಮದ್ ಅಮೀರ್ 53/2)

ಪಾಕಿಸ್ತಾನ 44.5 ಓವರ್ 237/7
(ಸರ್ಫರಾಜ್ ಅಹ್ಮದ್ ಅಜೇಯ 61, ಫಕರ್ ಜಮಾನ್ 50, ಅಝರ್ ಅಲಿ 34, ಮೊಹಮ್ಮದ್ ಅಮಿರ್ ಅಜೇಯ 28 ರನ್ - ನುವಾನ್ ಪ್ರದೀಪ್ 60/3)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾದ ಟೀಂ ಇಂಡಿಯಾ!
ಕರ್ನಾಟಕದ ಅಭಿಮನ್ಯು ಮಿಥುನ್ ದಾಖಲೆ ಸರಿಗಟ್ಟಿದ ಬೌಲರ್‌, ಟಿ20ಯ ಒಂದೇ ಓವರ್‌ನಲ್ಲಿ ಐದು ವಿಕೆಟ್‌ ವಿಶ್ವದಾಖಲೆ!