
ಬರೋಬ್ಬರಿ 4 ವರ್ಷಗಳ ಬಳಿಕ ಏಕದಿನ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸ್ತಿದೆ. ವಿಪರ್ಯಾಸವೆಂದ್ರೆ 2013ರಲ್ಲಿ ಮುಖಾಮುಖಿಯಾಗಿದ್ದ ಭಾರತ-ಆಸ್ಟ್ರೇಲಿಯಾ ತಂಡಗಳೇ 2017ರಲ್ಲೂ ಮುಖಾಮುಖಿಯಾಗ್ತಿವೆ. ಆ ಪಂದ್ಯ ವೀಕ್ಷಿಸಿದ್ದ ಕರ್ನಾಟಕ ಕ್ರಿಕೆಟ್ ಅಭಿಮಾನಿಗಳು ಇನ್ನೊಂದು ಪಂದ್ಯ ವೀಕ್ಷಿಸಲು 4 ವರ್ಷ ಕಾಯಬೇಕಾಯ್ತು. ಜತನದಿಂದ ಕಾಯುತ್ತಿದ್ದ ಸಮಯಕ್ಕೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ಚಿನ್ನಸ್ವಾಮಿ ಸ್ಟೇಡಿಯಂ ಸಹ ಸಿದ್ದಗೊಂಡಿದೆ.
ಎಂದೂ ಮರೆಯಲಾಗದ ಆ ಪಂದ್ಯ: 95.1 ಓವರ್ನಲ್ಲಿ ಬಂದಿದ್ವು 709 ರನ್
2013 ಅಕ್ಟೋಬರ್ 2ರಂದು ನಡೆದ ಆ ಪಂದ್ಯವನ್ನ ಯಾರೋಬ್ಬರೂ ಮುರಿಯಲು ಸಾಧ್ಯವಿಲ್ಲ. ಯಾರೂ ಮರೆತ್ರೂ ರೋಹಿತ್ ಶರ್ಮಾ, ವಿನಯ್ ಕುಮಾರ್ ಮತ್ತು ಆಸೀಸ್ ಆಟಗಾರರು ಮರೆಯೋಲ್ಲ. ಅಂದು ಮುಂಬೈಕರ್ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಬೌಂಡ್ರಿ-ಸಿಕ್ಸರ್ಗಳ ರಸದೌತಣ ಬಡಿಸಿದ್ದರು. ಅದು ಯಾವ ಮಟ್ಟಕ್ಕೆ ಅಂದ್ರೆ ಅವರು ಹೊಡೆದಿದೆಲ್ಲಾ ಬರೀ ಬೌಂಡ್ರಿ-ಸಿಕ್ಸರ್ಗಳೇ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 383 ರನ್ ಕಲೆಹಾಕ್ತು. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿ ಸಂಭ್ರಮಿಸಿದ್ರು. 12 ಬೌಂಡರಿ ಮತ್ತು 16 ಸಿಕ್ಸ್ ಸಿಡಿಸಿದ್ರು. ಒಂದು ಇನ್ನಿಂಗ್ಸ್ನಲ್ಲಿ ಗರಿಷ್ಠ ಸಿಕ್ಸ್ ಸಿಡಿಸಿದ ವಿಶ್ವದಾಖಲೆಯನ್ನೂ ರೋಹಿತ್ ಮಾಡಿದ್ರು. ರೋಹಿತ್ಗೆ ಧವನ್, ರೈನಾ, ಧೋನಿ ಸಾಥ್ ನೀಡಿದ್ದರು.
ಕನ್ನಡಿಗ ವಿನಯ್ ಕೆರಿಯರ್ ಕ್ಲೋಸ್ ಮಾಡಿದ ಪಂದ್ಯ
384 ರನ್ ಬೆನ್ನಟ್ಟಿದ ಆಸ್ಟ್ರೇಲಿಯಾ ಸಹ ಭಾರತೀಯ ಬೌಲರ್ಗಳನ್ನ ಹಿಗ್ಗಾಮುಗ್ಗ ದಂಡಿಸಿದ್ದರು. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ವಿಫಲವಾದ್ರೂ ಆಲ್ರೌಂಡರ್ಸ್ ಮಾತ್ರ ನಮ್ಮ ಬೌಲರ್ಗಳನ್ನ ಸುಮ್ಮನೆ ಬಿಡಲಿಲ್ಲ. ಮ್ಯಾಕ್ಸ್'ವೆಲ್, ವ್ಯಾಟ್ಸನ್ ಮತ್ತು ಫಾಲ್ಕನರ್ ರನ್ ಹೊಳೆಯನ್ನೇ ಹರಿಸಿದ್ರು.
ಆದ್ರೂ 326 ರನ್ಗೆ ಆಸೀಸ್ ಆಲೌಟ್ ಆಗಿತ್ತು. ಅದೇ ಪಂದ್ಯ ಕನ್ನಡಿಗ ವಿನಯ್ ಕುಮಾರ್ ಕೆರಿಯರ್ ಹಾಳು ಮಾಡ್ತು. ಆ ಪಂದ್ಯದಲ್ಲಿ 9 ಓವರ್ ಬೌಲಿಂಗ್ ಮಾಡಿದ್ದ ವಿನಯ್, 102 ರನ್ ಬಿಟ್ಟುಕೊಟ್ಟಿದ್ದರು. ಅದೇ ಕೊನೆ ವಿನಯ್ ಮತ್ತೆ ಟೀಂ ಇಂಡಿಯಾ ಪರ ಆಡಲೇ ಇಲ್ಲ.
ಈ ಸಲವೂ ಹರಿಯುತ್ತಾ ರನ್ ಹೊಳೆ..?
4 ವರ್ಷಗಳ ಹಿಂದೆ ಆಡಿದ್ದ ಬಹುತೇಕ ಆಟಗಾರರು ಈ ಪಂದ್ಯದಲ್ಲೂ ಆಡ್ತಿದ್ದಾರೆ. ಅಂದು 709 ರನ್ ಹೊಡೆದಿದ್ದ ಉಭಯ ತಂಡಗಳು ಈ ಸಲವೂ ರನ್ ಹೊಳೆ ಹರಿಸ್ತಾವಾ..? 4 ವರ್ಷಗಳ ನಂತ್ರ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಅಂತಹದ್ದು ಕಿಕ್ ಸಿಗುತ್ತಾ..? ನೋಡಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.