
ಕ್ಯಾಂಡಿ(ಆ.30): ಶ್ರೀಲಂಕಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡ ದ್ವಿತೀಯ ಟೆಸ್ಟ್ ಪಂದ್ಯ ಗೆದ್ದು ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿದೆ. ಇದೀಗ 3 ಪಂದ್ಯದ ಟಿ20 ಸರಣಿಗೆ ತಯಾರಿ ಆರಂಭಿಸಿದೆ. ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾದ ಪರ್ವತ ಪ್ರದೇಶದಲ್ಲಿ ತೆರಳುತ್ತಿದ್ದ ಕಿವೀಸ್ ಆಟಗಾರರು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!
ಕ್ಯಾಂಡಿ ಸಮೀಪದ ಪರ್ವತ ಪ್ರದೇಶದಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗರನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಕ್ಲಚ್ ಪ್ಲೇಟ್ ಫೈಲ್ಯೂರ್ ಆಗಿದೆ. ತಕ್ಷಣವೇ ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಬಸ್ ನಿಲ್ಲಿಸಿದ್ದಾರೆ. ಆದರೆ ಕಾಡಿನ ನಡುವೆ ಬಸ್ ಕೆಟ್ಟು ನಿಂತ ಕಾರಣ ನ್ಯೂಜಿಲೆಂಡ್ ಕ್ರಿಕೆಟಿಗರು ಪ್ರಯಾಸ ಪಡುವಂತಾಯಿತು. ಬಳಿಕ ಆ್ಯಂಬುಲೆನ್ಸ್ ಹಾಗೂ ಸೇನಾ ಜೀಪ್ ಸಹಾಯದಿಂದ ಕ್ರಿಕೆಟಿಗರು ಹೊಟೆಲ್‌ಗೆ ಮರಳಿದರು.
ಇದನ್ನೂ ಓದಿ: ಅನುಮಾನಾಸ್ಪದ ಬೌಲಿಂಗ್ ಮಾಡಿದ ಇಬ್ಬರು ಕ್ರಿಕೆಟಿಗರು..!
ಪೊಲೀಸರ ಸಹಾಯದಿಂದ ಸೇನಾ ವಾಹನ ಹಾಗೂ ಆ್ಯಂಬುಲೆನ್ಸ್ ಹತ್ತಿ ಮತ್ತೆ ಹೊಟೆಲ್‌ಗೆ ಮರಳಿದೆವು ಎಂದು ನ್ಯೂಜಿಲೆಂಡ್ ತಂಡದ ಸಹಾಯಕ ಸಿಬ್ಬಂಧಿ ಹೇಳಿದ್ದಾರೆ. ಲಂಕಾ ವಿರುದ್ದದ ಅಭ್ಯಾಸ ಪಂದ್ಯ ಆಡಿ ಹೊಟೆಲ್‌ಗೆ ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.