ಅಭ್ಯಾಸ ಆರಂಭಿಸಿದ ಮುಂಬೈ ಇಂಡಿಯನ್ಸ್

By Suvarna Web DeskFirst Published Mar 25, 2017, 4:47 PM IST
Highlights

ಏಪ್ರಿಲ್ 6ರಂದು ಮುಂಬೈ ತಂಡ ರೈಸಿಂಗ್ ಪುಣೆ ಸೂಪರ್‌'ಜೈಂಟ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.

ಮುಂಬೈ(ಮಾ.25): ಎರಡು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 10ನೇ ಆವೃತ್ತಿಯ ಐಪಿಎಲ್‌'ಗೆ ಪ್ರಧಾನ ತರಬೇತುದಾರ ಮಹೇಲಾ ಜಯವರ್ಧನೆ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದೆ. 9 ದಿನಗಳ ಈ ಶಿಬಿರ ಏಪ್ರಿಲ್ 2 ವರೆಗೂ ನಡೆಯಲಿದೆ.

ವೆಸ್ಟ್‌ಇಂಡೀಸ್‌'ನ ನಿಕೊಲಾಸ್ ಪೂರನ್, ತಂಡ ಕೂಡಿಕೊಂಡಿರುವ ಮೊದಲ ವಿದೇಶಿ ಆಟಗಾರರಾಗಿದ್ದು, ಮುಂಬರುವ ದಿನಗಳಲ್ಲಿ ಮಿಚೆಲ್ ಜಾನ್ಸನ್, ಜಾಸ್ ಬಟ್ಲರ್, ಮಿಚೆಲ್ ಮೆಕ್ಲೆಂಗಾನ್, ಲಸಿತ್ ಮಲಿಂಗ, ಟಿಮ್ ಸೌಥಿ, ಕಿರಾನ್ ಪೊಲಾರ್ಡ್ ಹಾಗೂ ಲೆಂಡಲ್ ಸಿಮನ್ಸ್ ತಂಡಕ್ಕೆ ಆಗಮಿಸಲಿದ್ದಾರೆ ಎಂದು ಮುಂಬೈ ತಂಡ ತಿಳಿಸಿದೆ.

ವೇಗಿ ಜಸ್ಪ್ರೀತ್ ಬುಮ್ರಾ, ಆಲ್‌'ರೌಂಡರ್ ಹಾರ್ದಿಕ್ ಪಾಂಡ್ಯ, ಕರಣ್ ಶರ್ಮಾ, ಕರ್ನಾಟಕದ ಕೆ.ಗೌತಮ್, ಸೌರಭ್ ತಿವಾರಿ ಸೇರಿ ತಂಡ ಉಳಿಸಿಕೊಂಡಿದ್ದ ಜೆ.ಸುಚಿತ್, ವಿನಯ್ ಕುಮಾರ್, ನಿತೀಶ್ ರಾಣಾ, ದೀಪಕ್ ಪೂನಿಯಾ ಹಾಗೂ ಜಿತೇಶ್ ಶರ್ಮಾ ಮೊದಲ ದಿನದಿಂದಲೇ ಅಭ್ಯಾಸ ಶಿಬಿರಕ್ಕೆ ಹಾಜರಾದರು. ಬ್ಯಾಟಿಂಗ್ ಕೋಚ್ ರಾಬಿನ್ ಸಿಂಗ್, ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಹಾಗೂ ಬೌಲಿಂಗ್ ಕೋಚ್ ಶೇನ್ ಬಾಂಡ್ ಶಿಬಿರದಲ್ಲಿದ್ದಾರೆ.

ಏಪ್ರಿಲ್ 6ರಂದು ಮುಂಬೈ ತಂಡ ರೈಸಿಂಗ್ ಪುಣೆ ಸೂಪರ್‌'ಜೈಂಟ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.

click me!