
ಚೆನ್ನೈ(ಏ.12): ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ತಮಿಳುನಾಡಿನಲ್ಲಿ ಪ್ರತಿಭಟನೆ ಕಾವು ಜೋರಾಗಿರುವ ಹಿನ್ನಲೆಯಲ್ಲಿ ಚೆನ್ನೈನಲ್ಲಿ ನಡೆಯಬೇಕಿದ್ದ 6 ಪಂದ್ಯಗಳೀಗ ಪುಣೆಗೆ ಸ್ಥಳಾಂತರಗೊಂಡಿವೆ.
ಈಗಾಗಲೇ ಬಿಸಿಸಿಐ ಪುಣೆ ಜತೆಗೆ ವಿಶಾಖಪಟ್ಟಣ, ತಿರುವನಂತಪುರ ಹಾಗೂ ರಾಜ್'ಕೋಟ್ ಸೇರಿದಂತೆ ನಾಲ್ಕು ನಗರಗಳನ್ನು ಅಂತಿಮಗೊಳಿಸಿತ್ತು. ಇವುಗಳಲ್ಲಿ ಪುಣೆ ನಗರದ ಮೇಲೆ ಧೋನಿ ಒಲವು ತೋರಿದರು ಎಂದು ತಿಳಿದು ಬಂದಿದೆ. ಏಕೆಂದರೆ ಕಳೆದ 2 ಆವೃತ್ತಿಗಳಲ್ಲಿ ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರವಾಗಿ ಕಣಕ್ಕಿಳಿದಿದ್ದರು. ಆದಕಾರಣ ಅಲ್ಲಿನ ವಾತಾವರಣಕ್ಕೆ ಅವರು ಒಗ್ಗಿಕೊಂಡಿರುವ ಕಾರಣ ಚೆನ್ನೈ ತವರನ್ನು ಅಲ್ಲಿಗೆ ಸ್ಥಳಾಂತರಗೊಳಿಸಲು ಅವರ ಸಮ್ಮತಿ ಇದೆ ಎನ್ನಲಾಗಿದೆ.
‘ವಿಶಾಖಪಟ್ಟಣದಿಂದ ದೆಹಲಿಗೆ ಕೆಲವೇ ಕೆಲವು ನೇರ ವಿಮಾನಗಳಿದ್ದು, ಆಟಗಾರರು ದೆಹಲಿಗೆ ತೆರಳಬೇಕಿದ್ದರೆ ಇಂದೋರ್'ಗೆ ಹೋಗಿ ಅಲ್ಲಿಂದ ದೆಹಲಿಗೆ ತಲುಪಬೇಕಿತ್ತು. ಆದಕಾರಣ ಪುಣೆಯಿಂದ ಉತ್ತಮ ವಿಮಾನ ವ್ಯವಸ್ಥೆಯಿರುವುದು ಧೋನಿಗೆ ತಿಳಿದಿತ್ತು. ಇದೇ ಕಾರಣದಿಂದ ಚೆನ್ನೈ ತನ್ನ ತವರನ್ನು ಪುಣೆ ಸ್ಥಳಾಂತರಿಸಲು ಸಮ್ಮತಿ ಸೂಚಿಸಿತು’ ಎಂದು ಮೂಲಗಳು ತಿಳಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.