ಟೀಂ ಇಂಡಿಯಾ ಜೊತೆ ಎಂ ಎಸ್ ಧೋನಿ ಬರ್ತ್‌ಡೆ ಸಂಭ್ರಮ ಹೇಗಿತ್ತು?

Published : Jul 08, 2018, 10:59 AM ISTUpdated : Jul 08, 2018, 11:01 AM IST
ಟೀಂ ಇಂಡಿಯಾ ಜೊತೆ ಎಂ ಎಸ್ ಧೋನಿ ಬರ್ತ್‌ಡೆ ಸಂಭ್ರಮ ಹೇಗಿತ್ತು?

ಸಾರಾಂಶ

ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ 37ನೇ ವರ್ಷದ ಹುಟುಹಬ್ಬವನ್ನ ತಂಡದ ಜೊತೆ ಆಚರಿಸಿಕೊಂಡಿದ್ದಾರೆ. ಧೋನಿ ಬರ್ತ್‌ಡೇ ಸೆಲೆಬ್ರೇಷನ್ ಹೇಗಿತ್ತು? ಇಲ್ಲಿದೆ ವೀಡಿಯೋ.

ಬ್ರಿಸ್ಟಲ್(ಜು.08): ಇಂಗ್ಲೆಂಡ್ ಪ್ರವಾಸದಲ್ಲಿರುವ  ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ತಮ್ಮ ಹುಟ್ಟು ಹಬ್ಬವನ್ನ ತಂಡದ ಜೊತೆ ಆಚರಿಸಿಕೊಂಡಿದ್ದಾರೆ.  ತಂಡದ ಸಹ ಆಟಗಾರರು, ಪತ್ನಿ ಸಾಕ್ಷಿ ಧೋನಿ ಹಾಗೂ ಪುತ್ರಿ ಝಿವಾ ಧೋನಿ ಸಮ್ಮುಖದಲ್ಲಿ ಕೇಕ್ ಕತ್ತರಿಸೋ ಮೂಲಕ ಧೋನಿ ಹುಟ್ಟುಹಬ್ಬ ಆಚರಿಸಿಕೊಂಡರು.

ಧೋನಿ ಕೇಕ್ ಕತ್ತರಿಸುತ್ತಿದ್ದಂತೆ, ಟೀಂ ಇಂಡಿಯಾ ಕ್ರಿಕೆಟಿಗರು ಕೇಕ್ ಧೋನಿ ಮುಖಕ್ಕೆ ಹಚ್ಚಿ ಸಂಭ್ರಮಿಸಿದರು. ಕಳೆದ ಬಾರಿ ಧೋನಿ ತಾವೇ ಕೇಕ್ ಹಚ್ಚಿಕೊಂಡಿದ್ದರು. ಆದರೆ ಈ ಬಾರಿ ಕೇಕ್ ಹಚ್ಚಿದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚೆಹಾಲ್‌ಗೆ ಕೇಕ್ ಹಚ್ಚಿ ಸಂಭ್ರಮಿಸಿದರು.

 

 

‘ಹುಟ್ಟು ಹಬ್ಬದ ಶುಭಾಶಯಗಳು ಅಪ್ಪ, ನಿಮಗೆ ವಯಸ್ಸಾಗುತ್ತಿದೆ’ ಎಂದು ಝೀವಾ ಹಾಡು ಹೇಳಿದ್ದು ಎಲ್ಲರ ಗಮನ ಸೆಳೆಯಿತು. ಭಾರತ ತಂಡದ ನಾಯಕ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಸಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಧೋನಿಗೆ ಕೊಹ್ಲಿ ನೀಡಿದ ಸಂದೇಶ ಸಾಮಾಜಿಕ ತಾಣಗಳಲ್ಲಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20 World Cup 2026: ಭಾರತಕ್ಕೆ ಸೌತ್ ಆಫ್ರಿಕಾ ವಿರುದ್ಧ ಮೂರು ನಾಮ! ಟೀಂ ಇಂಡಿಯಾ ಎದುರು ಸೇಡು ತೀರಿಸಿಕೊಂಡ ಹರಿಣಗಳು!
T20 World Cup: ಗುಡುಗಿದ ಮಿಲ್ಲರ್, ಬ್ರೆವೀಸ್, ಸ್ಟಬ್ಸ್‌; ಭಾರತಕ್ಕೆ ಗೆಲ್ಲಲು ಕಠಿಣ ಟಾರ್ಗೆಟ್ ಕೊಟ್ಟ ಹರಿಣಗಳು