2017-18ರ ಸಾಲಿನಲ್ಲಿ ಎಂ ಎಸ್ ಧೋನಿ ಪಾವತಿಸಿದ ತೆರಿಗೆ ಎಷ್ಟು?

By Suvarna NewsFirst Published Jul 24, 2018, 3:28 PM IST
Highlights

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ ಎಸ್ ಧೋನಿ ಧೋನಿ ಆದಾಯ ಗೌಪ್ಯವಾಗಿ ಉಳಿದಿಲ್ಲ. ಧೋನಿ ಆದಾಯ ಈಗಾಗಲೇ ಹಲವು ಬಾರಿ ಬಹಿರಂಗವಾಗಿದೆ. ಆದರೆ ನೂರಾರು ಕೋಟಿ ಇನ್‌ಕಮ್ ಹೊಂದಿರೋ ಧೋನಿ ಎಷ್ಟು ಟ್ಯಾಕ್ಸ್ ಪಾವತಿಸುತ್ತಾರೆ? ಇಲ್ಲಿದೆ ಧೋನಿ ಆದಾಯ ತೆರಿಗೆ ಮಾಹಿತಿ.

ರಾಂಚಿ(ಜು.24): ಟೀಂ ಇಂಡಿಯಾ ಮಾಜಿ ಎಂ ಎಸ್ ಧೋನಿ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರೀಯರಾಗಿದ್ದರೂ, ಆದಾಯವೇನು ಕಡಿಮೆಯಾಗಿಲ್ಲ. ಧೋನಿ ಈಗಲೂ ಅತ್ಯಂತ ಜನಪ್ರೀಯ ಕ್ರಿಕೆಟಿಗ. ನೂರಾರು ಕೋಟಿ ಆದಾಯಗಳಿಸುತ್ತಿರುವ ಎಂ ಎಸ್ ಧೋನಿ 2017-18ರ ಸಾಲಿನ ತೆರಿಗೆ ಪಾವತಿಸಿ ದಾಖಲೆ ಬರೆದಿದ್ದಾರೆ.

2017-18ರ ಸಾಲಿನಲ್ಲಿ ಎಂ ಎಸ್ ಧೋನಿ ಬರೋಬ್ಬರಿ 12.17 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾರೆ. ಈ ಮೂಲಕ ಜಾರ್ಖಂಡ್‌ನಲ್ಲಿ ಗರಿಷ್ಠ ತೆರಿಗೆ ಕಟ್ಟಿದ ಮೊದಲಿಗೆ ಅನ್ನೋ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. 

12.17 ಕೋಟಿ ರೂಪಾಯಿ ತೆರಿಗೆ ಕಟ್ಟಿದ ಧೋನಿ, ಮುಂದಿನ ವರ್ಷಕ್ಕಾಗಿ 3 ಕೋಟಿ ರೂಪಾಯಿ ತೆರಿಗೆಯನ್ನ ಈಗಲೇ ಪಾವತಿಸಿದ್ದಾರೆ. ಈ ಮೂಲಕ ಜಾರ್ಖಂಡ್‌ನಲ್ಲಿ  ತೆರಿಗೆಯನ್ನ ಸರಿಯಾಗಿ ಪಾವತಿಸುತ್ತಿರುವ ಮೊದಲಿಗ ಅನ್ನೋ ಖ್ಯಾತಿಗೂ ಧೋನಿ ಪಾತ್ರರಾಗಿದ್ದಾರೆ.

2017-17ರ ಸಾಲಿನಲ್ಲಿ ಧೋನಿ 10.93 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದರು. ಈ ಬಾರಿ ಧೋನಿ ಆದಾಯ  ಹೆಚ್ಚಳವಾಗಿರೋ ಕಾರಣ ಸರಿ ಸುಮಾರು 1 ಕೋಟಿ ರೂಪಾಯಿ ಹೆಚ್ಚಿಗೆ ತೆರಿಗೆ ಪಾವತಿಸಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ವಾಪಾಸ್ಸಾಗಿರು ಧೋನಿ, ವಿಶ್ರಾಂತಿಯಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ ಬ್ಯಾಟಿಂಗ್‌ಗೆ ಟೀಕೆ ವ್ಯಕ್ತವಾಗಿತ್ತು. ಧೋನಿ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ನಿವೃತ್ತಿ ಸೂಕ್ತ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ನಾಯಕ ಸೌರವ್ ಗಂಗೂಲಿ, ಕೋಚ್ ರವಿ ಶಾಸ್ತ್ರಿ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿ, ಧೋನಿಗೆ ಬೆಂಬಲ ವ್ಯಕ್ತಪಡಿಸಿದ್ದರು.
 

click me!