ಕಾಮನ್‌ವೆಲ್ತ್ ಗೇಮ್ಸ್: 3 ವರ್ಷದ ಮಗುವಿನ ತಾಯಿ ಸೀಮಾಗೆ ಡಿಸ್ಕಸ್‌ ಥ್ರೋನಲ್ಲಿ ಕಂಚಿನ ಪದಕ

Kannadaprabha News   | Kannada Prabha
Published : Aug 01, 2026, 08:54 AM IST
who is seema kaliraman

ಸಾರಾಂಶ

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ಇದರೊಂದಿಗೆ, ಬಾಕ್ಸಿಂಗ್‌ನಲ್ಲಿ ಐವರು ಭಾರತೀಯ ಬಾಕ್ಸರ್‌ಗಳು ಫೈನಲ್‌ ಪ್ರವೇಶಿಸುವ ಮೂಲಕ ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮತ್ತೊಂದು ಪದಕ ಲಭಿಸಿದೆ. ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ಅವರು 58.65 ಮೀ. ದೂರ ದಾಖಲಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಒಟ್ಟು 6 ಪ್ರಯತ್ನಗಳ ಪೈಕಿ 4ರಲ್ಲಿ ಅವರಿಂದ ಫೌಲ್‌ ಆಯಿತು. 2ನೇ ಎಸೆತವನ್ನು 57.32 ಮೀ. ದೂರಕ್ಕೆಸೆದ ಅವರು, 3ನೇ ಪ್ರಯತ್ನದಲ್ಲಿ 58.65 ಮೀ. ದೂರ ದಾಖಲಿಸಿದರು. ಕೊನೆ 3 ಎಸೆತಗಳೂ ಫೌಲ್‌ ಆದವು. ಜಮೈಕಾದ ಸಮಂತಾ ಹಾಲ್‌(61.66 ಮೀ.) ಚಿನ್ನ ಗೆದ್ದರೆ, ಕೆನಡಾದ ಜೂಲಿಯಾ ಟಂಕ್ಸ್‌(60.67 ಮೀ.) ಪಡೆದರು.

ಪಿಎಚ್‌ಡಿ ನಿರೀಕ್ಷೆ:

3 ವರ್ಷದ ಮಗುವಿನ ತಾಯಿಯಾಗಿರುವ ಹರ್ಯಾಣದ ಸೀಮಾ ಅವರು ಈಗ ದೈಹಿಕ ಶಿಕ್ಷಣದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಮಾಜಿ ರಾಷ್ಟ್ರೀಯ ಮಟ್ಟದ ಡಿಸ್ಕಸ್‌ ಎಸೆತಗಾರ, ತಮ್ಮ ಪತಿ ರವೀಂದರ್‌ ಅವರೇ ಸೀಮಾಗೆ ಈಗ ಕೋಚ್‌ ಆಗಿದ್ದಾರೆ.

ಬಾಕ್ಸಿಂಗ್‌ನಲ್ಲಿ ಭಾರತ ಪಾರಮ್ಯ: ಐವರು ಫೈನಲ್‌ಗೆ, ಬೆಳ್ಳಿ ಖಚಿತ

ಗೇಮ್ಸ್‌ನ ಬಾಕ್ಸಿಂಗ್‌ನಲ್ಲಿ ಭಾರತೀಯರ ಅಧಿಪತ್ಯ ಮುಂದುವರಿದಿದೆ. ಶುಕ್ರವಾರ ಸಂಜೆ ಐದು ವಿಭಾಗಗಳಲ್ಲೂ ಭಾರತದ ಬಾಕ್ಸರ್‌ಗಳು ಫೈನಲ್‌ಗೇರಿದ್ದಾರೆ. ಇದರೊಂದಿಗೆ 5 ಕಂಚಿನ ಪದಕ ಖಚಿತವಾಗಿದೆ.

ವಿಶ್ವ ಚಾಂಪಿಯನ್‌ ಜಾಸ್ಮಿನ್‌ ಲಂಬೋರಿಯಾ ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಲೆಸೊಥೊ ದೇಶದ ರಪೆಲಾಂಗ್‌ ಮಸೆಲೆಲಾ ವಿರುದ್ಧ ಗೆದ್ದರೆ, ಅರುಂಧತಿ ಚೌಧರಿ 70 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ವೇಲ್ಸ್‌ನ ರೋಸಿ ಎಕ್ಲೆಸ್‌ ವಿರುದ್ಧ 4-0 ಅಂತರದಲ್ಲಿ ಜಯಗಳಿಸಿದರು. ಪ್ರೀತಿ ಪವಾರ್ 54 ಕೆ.ಜಿ. ವಿಭಾಗದಲ್ಲಿ ಝಾಂಬಿಯಾದ ಕ್ಯಾಥರಿನ್‌ ಎಂವಾಪೆ ವಿರುದ್ಧ 5-0 ಅಂತರದಲ್ಲಿ ಗೆದ್ದರು. ಪುರುಷರ 80 ಕೆ.ಜಿ. ವಿಭಾಗದಲ್ಲಿ ಅಂಕುಶ್‌ ಪಂಘಲ್‌ ಕೆನಡಾದ ಜೋಶುವಾ ಒಫೊರಿ ವಿರುದ್ಧ 5-0, ಪುರುಷರ 55 ಕೆ.ಜಿ. ವಿಭಾಗದಲ್ಲಿ ಜಾಡುಮನಿ ಸಿಂಗ್‌ ನಮೀಬಿಯಾದ ಹೊಸೇಬ್‌ ವಿರುದ್ಧ 5-0 ಅಂತರದಲ್ಲಿ ಜಯಗಳಿಸಿ ಫೈನಲ್‌ಗೇರಿದರು.

ಅಥ್ಲೆಟಿಕ್ಸ್‌: ಅನಿಮೇಶ್‌, ಪಾರುಲ್‌ಗೆ ಪದಕವಿಲ್ಲ, ರಿಲೇ ತಂಡ ಫೈನಲ್‌ಗೆ

ಗೇಮ್ಸ್‌ನ 4*400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತದ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ವಿಶಾಲ್‌, ರಾಜೇಶ್‌ ರಮೇಶ್‌, ರಶ್‌ದೀಪ್‌ ಕೌರ್‌ ಹಾಗೂ ನೀರೂ ಪಾಠಕ್‌ ಅವರನ್ನೊಳಗೊಂಡ ತಂಡ 3 ನಿಮಿಷ 20.98 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಒಟ್ಟಾರೆ 7ನೇ ಸ್ಥಾನಿಯಾಗಿ ಫೈನಲ್‌ಗೇರಿತು. ಆದರೆ ಪದಕ ನಿರೀಕ್ಷೆಯಲ್ಲಿದ್ದ ಅನಿಮೇಶ್‌ ಕುಜೂರ್‌ ಹಾಗೂ ಪಾರುಲ್‌ ಚೌಧರಿ ನಿರಾಸೆ ಅನುಭವಿಸಿದರು. ಪುರುಷರ 200 ಮೀ. ರೇಸ್‌ನ ಸೆಮಿಫೈನಲ್‌ನಲ್ಲಿ ಅನಿಮೇಶ್‌ 20.65 ಸೆಕೆಂಡ್‌ಗಳಲ್ಲಿ ಕ್ರಮಿಸಿ, 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಗ್ರ-8 ಮಂದಿ ಮಾತ್ರ ಫೈನಲ್‌ಗೇರಿದರು. ಮಹಿಳೆಯರ 5000 ಮೀ. ರೇಸ್‌ನಲ್ಲಿ ಪಾರುಲ್‌ ಚೌಧರಿ 15 ನಿಮಿಷ 08.56 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 13ನೇ ಸ್ಥಾನಿಯಾದರು. ಅವರು 3000 ಮೀ. ಸ್ಟೀಪಲ್‌ಚೇಸ್‌ನಲ್ಲೂ ಪದಕ ಗೆದ್ದಿರಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಮನ್‌ವೆಲ್ತ್ ಗೇಮ್ಸ್‌: ಜುಡೋದಲ್ಲಿ ಭಾರತಕ್ಕೆ ಐತಿಹಾಸಿಕ ಡಬಲ್ ಚಿನ್ನ, 36 ವರ್ಷಗಳ ಐತಿಹಾಸಿಕ ಸಾಧನೆ
ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆನೆಬಲ.. ಟೀಂ ಇಂಡಿಯಾದ ಬೌಲಿಂಗ್‌ ದೈತ್ಯ ತಂಡಕ್ಕೆ ಎಂಟ್ರಿ..!