ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾದ ಮಿಥಾಲಿಯ ಭಾವಚಿತ್ರ

By Suvarna Web DeskFirst Published Sep 7, 2017, 4:42 PM IST
Highlights

ನಿನ್ನೆ ಅಂದರೆ ಸೆ.6 ರಂದು ಸಮಾರಂಭವೊಂದರಲ್ಲಿ ಸ್ನೇಹಿತೆಯರೊಂದಿಗೆ ಭಾಗವಹಿಸಿದ್ದು, ಅಲ್ಲಿನ ಭಾವಚಿತ್ರವನ್ನು ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ್ದರು.

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಟ್ವಿಟರ್'ನಲ್ಲಿ ಪೋಸ್ಟ್ ಮಾಡಿರುವ ಒಂದು ಭಾವಚಿತ್ರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ನಿನ್ನೆ ಅಂದರೆ ಸೆ.6 ರಂದು ಸಮಾರಂಭವೊಂದರಲ್ಲಿ ಸ್ನೇಹಿತೆಯರೊಂದಿಗೆ ಭಾಗವಹಿಸಿದ್ದು, ಅಲ್ಲಿನ ಭಾವಚಿತ್ರವನ್ನು ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ್ದರು. ಮಿಥಾಲಿ ಫೋಟೊದಲ್ಲಿ ಧರಿಸಿರುವ ಮೇಲ್ಮೈ ಉಡುಪು ಭಾರತೀಯ ಸಂಸ್ಕೃತಿಗೆ ತಕ್ಕುದಾದುದ್ದಲ್ಲ. ನೀವು ಭಾರತೀಯ ಸಂಸ್ಕೃತಿಯನ್ನು ಮರೆತು ಈ ರೀತಿಯ ಉಡುಪು ಧರಿಸಿದ್ದೀರಿ ಎಂದು ಹಲವರು  ಟ್ವೀಟ್ ಮಾಡಿದ್ದರೆ.

ಮಿಥಾಲಿಗೆ ಬೆಂಬಲವಾಗಿ ಮತ್ತೂ ಹಲವರು ಭಾವಚಿತ್ರಕ್ಕೆ ಬೆಂಬಲ ಸೂಚಿಸಿ ಆಕೆ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮಹಿಳೆ. ತನ್ನ ಇಷ್ಟದಂತೆ ಉಡುಪು ಧರಿಸುವುದು ಆಕೆಯ ಸ್ವಂತ ವಿಷಯ. ಇದನ್ನು ಯಾರೂ ಪ್ರಶ್ನಿಸಿಲು ಬಾರದೂ. ಯಾರೂ ಧರಿಸದ ಉಡುಪನ್ನು ಆಕೆ ಧರಿಸಿಲ್ಲ. ವಿದೇಶಿ ಕ್ರೀಡಾಪಟುಗಳ ಧೃಇಸುಗಳು ಇದಕ್ಕಿಂತ ಕೆಟ್ಟದಾಗಿರುತ್ತವೆ. ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿ' ಎಂದು ವಿರೋಧಿಗಳಿಗೆ ಮರು ಟ್ವೀಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದಂಷ್ಟೆ ಕಂಕುಳಲ್ಲಿ ಬೆವರು ಕಾಣಿಸಿರುವುದನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಟ್ವಿಟರ್'ನಲ್ಲಿ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜರ್ಮನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ತುಂಡುಡುಗೆಯಲ್ಲಿ ಕುಳೀತು ಮಾತನಾಡಿದ್ದು ಕೂಡ ಟ್ರಾಲ್ ಆಗಿತ್ತು. ಆದರೆ ಇದನ್ನು ಪ್ರಶ್ನಿಸಿದವರಿಗೆ ಸರಿಯಾಗಿಯೇ ಉತ್ತರ ನೀಡಿದ್ದರು.

 

click me!