ಮಾಯಾಂಕ್ ಮತ್ತೆ ಶತಕ: ಕರ್ನಾಟಕಕ್ಕೆ ಬೃಹತ್ ಮುನ್ನಡೆ

Published : Nov 27, 2017, 05:45 PM ISTUpdated : Apr 11, 2018, 01:04 PM IST
ಮಾಯಾಂಕ್ ಮತ್ತೆ ಶತಕ: ಕರ್ನಾಟಕಕ್ಕೆ ಬೃಹತ್ ಮುನ್ನಡೆ

ಸಾರಾಂಶ

ಕೊನೆಯ ದಿನವಾದ ನಾಳೆ ರಾಜ್ಯ ತಂಡವೇ ಆಡುವ ಸಂಪೂರ್ಣ ಸಾಧ್ಯತೆಯಿದೆ. ಬ್ಯಾಟಿಂಗ್ ಕಾಯ್ದುಕೊಮಡಿರುವ ಅಗರ್'ವಾಲ್'ಗೆ ಇನ್ನೊಂದು ದಾಖಲೆ ಬರೆಯುವ ಅವಕಾಶವಿದೆ.

ನವದೆಹಲಿ(ನ.27): ರೈಲ್ವೇಸ್ ತಂಡವನ್ನು 333 ರನ್'ಗಳಿಗೆ ಆಲ್'ಔಟ್ ಮಾಡಿ 2ನೇ ಇನ್ನಿಂಗ್ಸ್ ಆರಂಭಿಸಿರುವ ರಾಜ್ಯ ತಂಡ ಉತ್ತಮ ಮೊತ್ತ 1 ವಿಕೇಟ್ ನಷ್ಟಕ್ಕೆ 208 ರನ್ ಗಳಿಸಿ 309 ರನ್'ಗಳ ಮುನ್ನಡೆ ಗಳಿಸಿದೆ. ಮೊದಲ ಇನ್ನಿಂಗ್ಸ್'ನಲ್ಲಿ 101 ರನ್ ಲೀಡ್ ಪಡೆದುಕೊಂಡಿತ್ತು.

ಮಯಾಂಕ್ ಮತ್ತೊಂದು ಶತಕ

ಈ ಋತುವಿನಲ್ಲಿ ಉತ್ತಮವಾಗಿ ಆಟವಾಡುತ್ತಿರುವ ಆರಂಭಿಕ ಆಟಗಾರ ಮಯಾಂಕ್ ಅಗರ್'ವಾಲ್ ಮೊದಲ ಇನ್ನಿಂಗ್ಸ್'ನಂತೆ 2ನೇ ಇನ್ನಿಂಗ್ಸ್'ನಲ್ಲಿಯೂ ಮತ್ತೊಂದು ಶತಕ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. 157 ಎಸೆತಗಳ ಅವರ ಆಟದಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸ್'ರ್'ಗಳಿದ್ದವು. ಸಮರ್ಥ್ ಅರ್ಧ ಶತಕ ದಾಖಲಿಸಿ ಎಲ್'ಬಿ ಬಲೆಗೆ ಬಿದ್ದರು. ಉದಯೋನ್ಮುಖ ಪ್ರತಿಭೆ ಡಿ. ನಿಶ್ಚಲ್ 5 ಬೌಂಡರಿಗಳೊಂದಿಗೆ 41 ರನ್'ನೊಂದಿಗೆ ಅಜೇಯರಾಗಿದ್ದಾರೆ. ಕೊನೆಯ ದಿನವಾದ ನಾಳೆ ರಾಜ್ಯ ತಂಡವೇ ಆಡುವ ಸಂಪೂರ್ಣ ಸಾಧ್ಯತೆಯಿದೆ. ಬ್ಯಾಟಿಂಗ್ ಕಾಯ್ದುಕೊಮಡಿರುವ ಅಗರ್'ವಾಲ್'ಗೆ ಇನ್ನೊಂದು ದಾಖಲೆ ಬರೆಯುವ ಅವಕಾಶವಿದೆ.

241/4 ರನ್ ಗಳಿಸಿ ಮೂರನೆ ದಿನದಾಟ ಆರಂಭಿಸಿದ ರೈಲ್ವೇಸ್ ಆಟಗಾರರು ಭೋಜನದ ವೇಳೆಗೆ ಆಲ್ ಔಟ್ ಆದರು.  79ನೇ ಓವರ್'ನಲ್ಲಿ 91 ರನ್ ಗಳಿಸಿದ್ದ  ಅರಿಂದಮ್ ಘೋಷ್ ಶ್ರೇಯಸ್ ಬೌಲಿಂಗ್'ನಲ್ಲಿ ಬೌಲ್ಡ್ ಆದರು. ಕ್ರೀಸ್'ಗಿಳಿದ ಮನೀಶ್ ರಾವ್ ಅದೇ ಓವರ್'ನ ನಂತರದ ಬೌಲಿಂಗ್'ನಲ್ಲಿ ಎಲ್'ಬಿ ಬಲೆಗೆ ಬಿದ್ದರು.  ವಿದ್ಯಾಧರ್ ಕಾಮತ್ ಜೊತೆ  ಮಹೇಶ್ ರಾವತ್ ಒಂದಷ್ಟು ಹೊತ್ತು ಆಟವಾಡಿ ಶತಕ ಪೂರೈಸಿದರು.

94ನೇ ಓವರ್'ನಲ್ಲಿ ಪುನಃ ದಾಳಿಗಿಳಿದ ಶ್ರೈಯಸ್, ಮಹೇಶ್ ರಾವತ್ ಅವರನ್ನು ಎಲ್'ಬಿ ಬಲೆಗೆ ಕೆಡಿವಿದರು. ಕೊನೆಯ ಇಬ್ಬರು ಆಟಗಾರಲ್ಲಿ ಒಬ್ಬರು ಗೌತಮ್'ಗೆ ಬಲಿಯಾದರೆ ಮತ್ತೊಬ್ಬರು ಶ್ರೇಯಸ್'ಗೆ ಔಟಾದರು.

ಶ್ರೇಯಸ್'ಗೆ 4 ವಿಕೇಟ್

2ನೇ ದಿನ ಒಂದೂ ವಿಕೇಟ್ ಪಡೆಯದ ಶ್ರೇಯಸ್ ಗೋಪಾಲ್ ಮೂರನೆ ದಿನ 102/4 ವಿಕೇಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಇನ್ನುಳಿದಂತೆ ಕೆ. ಗೌತಮ್ ಹಾಗೂ ಮಿಥುನ್ ತಲಾ 2 ವಿಕೇಟ್ ಕಿತ್ತರು.  

ಸ್ಕೋರ್

ಕರ್ನಾಟಕ 434 ಹಾಗೂ 208/1(58.1)

(ಮಾಯಾಂಕ್ ಅಜೇಯ 104, ಆರ್. ಸಮರ್ಥ್ 56, ಡಿ. ನಿಶ್ಚ'ಲ್ ಅಜೇಯ 41)

ರೈಲ್ವೇಸ್ 333/10(98.4)

 

    

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?