
ರಾಂಚಿ ಟೆಸ್ಟ್'ನ ಮೊದಲ ದಿನ ನೀರಸ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಎರಡನೇ ದಿನ ಭರ್ಜರಿಯಾಗಿಯೇ ಕಮ್'ಬ್ಯಾಕ್ ಮಾಡಿದೆ. ಮ್ಯಾಕ್ಸ್'ವೆಲ್ ಟೆಸ್ಟ್ ಕ್ರಿಕೆಟ್'ನಲ್ಲಿ ಚೊಚ್ಚಲ ಶತಕ ಸಿಡಿಸಿದರೆ, ಜಡೇಜಾ ಮತ್ತೊಮ್ಮೆ ಐದು ವಿಕೆಟ್'ಗಳ ಗೊಂಚಲನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.
ಇಂತಹ ಕೆಲವು ದಾಖಲೆಗಳು ನಿಮ್ಮ ಮುಂದೆ...
1. ಮೂರು ಪ್ರಕಾರದ ಕ್ರಿಕೆಟ್'ನಲ್ಲಿ ಶತಕ ಸಿಡಿಸಿದ ವಿಶ್ವದ 13ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಗ್ಲೇನ್ ಮ್ಯಾಕ್ಸ್'ವೆಲ್ ಪಾತ್ರರಾಗಿದ್ದಾರೆ. ಇನ್ನುಳಿದ ಆ 12 ಕ್ರಿಕೆಟಿಗರೆಂದರೆ; ತಿಲಕರತ್ನೆ ದಿಲ್ಯ್ಶಾನ್, ಫಾಪ್ ಡ್ಯುಪ್ಲಸಿಸ್, ಕ್ರಿಸ್ ಗೇಲ್, ಮಾರ್ಟಿನ್ ಗಪ್ಟೀಲ್, ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ಮಹೇಲಾ ಜಯವರ್ಧನೆ, ತಮೀಮ್ ಇಕ್ಬಾಲ್, ಬ್ರೆಂಡನ್ ಮೆಕ್ಲಮ್, ಅಹ್ಮದ್ ಶೆಹಜಾದ್ ಮತ್ತು ಶೇನ್ ವ್ಯಾಟ್ಸನ್.
2. ಸ್ಮಿತ್ ಸಿಡಿಸಿದ 178* ರನ್ ಭಾರತದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಸಿಡಿಸಿದ ಮೂರನೇ ಗರಿಷ್ಟ ವೈಯುಕ್ತಿಕ ಸ್ಕೋರ್ ಎನಿಸಿದೆ.
3. ಸಾಕಷ್ಟು ವನವಾಸದ ಬಳಿಕ ಆಸೀಸ್ ತಂಡಕ್ಕೆ ಕಮ್'ಬ್ಯಾಕ್ ಮಾಡಿ ಟೆಸ್ಟ್ ಕ್ರಿಕೆಟ್'ನಲ್ಲಿ 8ನೇ ವಿಕೆಟ್ ಪಡೆದ ಪ್ಯಾಟ್ ಕಮ್ಮಿನ್ಸ್. ಉಳಿದ 7 ವಿಕೆಟ್'ಗಳಲ್ಲಿ ಎರಡು ಆಟಗಾರರು ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ.
4. ಜಡೇಜಾ ಟೆಸ್ಟ್ ಕ್ರಿಕೆಟ್'ನಲ್ಲಿ 8ನೇ ಬಾರಿ 5 ವಿಕೆಟ್'ಗಳ ಗೊಂಚಲು ಪಡೆಯುವಲ್ಲಿ ಸಫಲರಾಗಿದ್ದಾರೆ.
5. ರಾಹುಲ್-ವಿಜಯ್ ಜೋಡಿ ಮೊದಲ ವಿಕೆಟ್'ಗೆ 91 ರನ್ ಕಲೆಹಾಕಿದ್ದು ಪ್ರಸಕ್ತ ಸರಣಿಯಲ್ಲಿನ ಗರಿಷ್ಠ ಜತೆಯಾಟವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.