ಬೇಕಿತ್ತಾ ಇದು..? ಮಂಜ್ರೇಕರ್‌ ಟ್ವೀಟ್‌ಗೆ ತಿವಾರಿ ಸಿಡಿಮಿಡಿ..!

By Web DeskFirst Published Oct 4, 2018, 4:33 PM IST
Highlights

‘ಬಂಗಾಳ ಹಾಗೂ ಜಾರ್ಖಂಡ್‌ ನಡುವಿನ ಪಂದ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಫಲಿತಾಂಶಕ್ಕೆ ವಿಜೆಡಿ ಮಾದರಿ ಅನುಸರಿಸಬೇಕಾಯಿತು. ಬೌಲಿಂಗ್‌ ತಂಡ 50 ಓವರ್‌ ಎಸೆಯಲು 4 ಗಂಟೆ 18 ನಿಮಿಷ ತೆಗೆದುಕೊಂಡಿತು’ ಎಂದು ಮಂಜ್ರೇಕರ್‌ ಟ್ವೀಟ್‌ ಮಾಡಿದ್ದರು. 

ಚೆನ್ನೈ[ಅ.04]: ವಿಜಯ್‌ ಹಜಾರೆ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‌ ವಿಚಾರವಾಗಿ ವೀಕ್ಷಕ ವಿವರಣೆಗಾರ ಸಂಜಯ್‌ ಮಂಜ್ರೇಕರ್‌ ಮಾಡಿದ ಟ್ವೀಟ್‌ಗೆ ಬಂಗಾಳ ಕ್ರಿಕೆಟ್‌ ತಂಡದ ನಾಯಕ ಮನೋಜ್‌ ತಿವಾರಿ ಕೆಂಡಾಮಂಡಲಗೊಂಡಿದ್ದಾರೆ. 

‘ಬಂಗಾಳ ಹಾಗೂ ಜಾರ್ಖಂಡ್‌ ನಡುವಿನ ಪಂದ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಫಲಿತಾಂಶಕ್ಕೆ ವಿಜೆಡಿ ಮಾದರಿ ಅನುಸರಿಸಬೇಕಾಯಿತು. ಬೌಲಿಂಗ್‌ ತಂಡ 50 ಓವರ್‌ ಎಸೆಯಲು 4 ಗಂಟೆ 18 ನಿಮಿಷ ತೆಗೆದುಕೊಂಡಿತು’ ಎಂದು ಮಂಜ್ರೇಕರ್‌ ಟ್ವೀಟ್‌ ಮಾಡಿದ್ದರು. 

Vijay Hazare match between Bengal & Jharkhand could not be completed. Had to be decided by VJD method. Why? Fading light. Why? Slow over rates! Bowling team took 4 hours 18 minutes to bowl their 50 overs!

— Sanjay Manjrekar (@sanjaymanjrekar)

ಇದಕ್ಕೆ ಉತ್ತರಿಸಿದ ತಿವಾರಿ,

Wud hav really appreciated if u cud had asked d team management from both d teams by Callin them up over d phone if u really want 2 know d reasons rather than posting in twitter and asking d followers. In my opinion it sends d wrong message 2 d people who follows u Sir.

— MANOJ TIWARY (@tiwarymanoj)

‘ವಿಷಯ ತಿಳಿದುಕೊಂಡು ಮಾತನಾಡಿ. ಸುಮ್ಮನೆ ಟ್ವೀಟ್‌ ಮಾಡಬೇಡಿ. ನಾವು ಆಡಿದ ಮೈದಾನದಲ್ಲಿ ಚೆಂಡು ಬೌಂಡರಿಯಿಂದ ಪಕ್ಕದ ತೋಪಿಗೆ ಹೋದರೆ ಚೆಂಡನ್ನು ಹುಡುಕಲು ಎಷ್ಟುಸಮಯ ಬೇಕು ಎನ್ನುವುದು ನಿಮಗೆ ತಿಳಿದಿದೆಯೇ?, ಸುಡು ಬಿಸಿಲಿನಲ್ಲಿ ಪಂದ್ಯ ನಡೆಯುತ್ತಿದೆ. ಬ್ಯಾಟ್ಸ್‌ಮನ್‌ ಒಬ್ಬ ಗಾಯಗೊಂಡು ಆತನನ್ನು ಮೈದಾನದಿಂದ ಹೊರ ಕೊಂಡೊಯ್ಯಲು ಸಾಕಷ್ಟುಸಮಯ ವ್ಯರ್ಥವಾಯಿತು. ಎದುರಾಳಿ ಆಟಗಾರ ಬ್ಯಾಟ್‌ ಗಾತ್ರದ ನಿಯಮ ಉಲ್ಲಂಘಿಸಿದ ಕಾರಣ, ರೆಫ್ರಿ ಪರಿಶೀಲನೆ ನಡೆಸಲು ಸಮಯ ಹಿಡಿಯಿತು. ವಾಸ್ತವ ತಿಳಿಯದೆ ಟೀಕಿಸುವುದು ಸರಿಯಲ್ಲ’ ಎಂದು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

 

click me!