
ಕೊಲಂಬೊ(ಡಿ.16): ಭಾರತ ವಿರುದ್ಧ ಡಿ.20ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟಗೊಂಡಿದ್ದು ಹಿರಿಯ ವೇಗಿ ಲಸಿತ್ ಮಾಲಿಂಗಾ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಳುಹಿಸಿದ್ದ 15 ಸದಸ್ಯರ ಪಟ್ಟಿಯನ್ನು ಕ್ರೀಡಾ ಸಚಿವ ದಯಶ್ರೀ ಜಯಶೇಖರ ಅಂಗೀಕರಿಸಿದ್ದಾರೆ. ಲಂಕಾ ಕ್ರಿಕೆಟ್ ಸಮಿತಿ ಪ್ರಕಟಣೆ ಪ್ರಕಾರ, ಮಾಲಿಂಗಾಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಇದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ. ಇನ್ನು ಸುರಂಗ ಲಕ್ಮಲ್, ಲಹಿರು ತಿರಿಮನ್ನೆಗೂ ಸಹ ವಿಶ್ರಾಂತಿ ನೀಡಲಾಗಿದೆ. ಕಟಕ್'ನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಡಿ.22ರಂದು ಇಂದೋರ್ ಹಾಗೂ ಡಿ.24ರಂದು ಮುಂಬೈನಲ್ಲಿ ಕ್ರಮವಾಗಿ 2 ಹಾಗೂ 3ನೇ ಟಿ20 ಪಂದ್ಯಗಳು ನಡೆಯಲಿವೆ.
ತಂಡ: ತಿಸಾರಾ ಪೆರೇರಾ (ನಾಯಕ), ಉಪುಲ್ ತರಂಗ, ಏಂಜೆಲೋ ಮ್ಯಾಥ್ಯೂಸ್, ಕುಸಾಲ್ ಪೆರೇರಾ, ದನುಷ್ಕಾ ಗುಣತಿಲಕ,ನಿರೋಶನ್ ಡಿಕ್'ವೆಲ್ಲಾ, ಅಸೆಲಾ ಗುಣರತ್ನೆ, ಸದೀರಾ
ಸಮರವಿಕ್ರಮ, ದಸುನ್ ಶನಕ, ಚತುರಂಗ ಡಿ ಸಿಲ್ವಾ, ಸಚಿತ್ ಪತಿರನ, ಧನಂಜಯ ಡಿ ಸಿಲ್ವಾ, ನುವಾನ್ ಪ್ರದೀಪ್, ವಿಶ್ವ ಫರ್ನಾಂಡೋ, ದುಷ್ಮಾಂತ ಚಮೀರಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.