ಒಪ್ಪಂದ ನವೀಕರಣಕ್ಕೆ ಹಿಂದೇಟು ಹಾಕಿದ ಮೆಸ್ಸಿ

Published : Nov 14, 2016, 04:44 PM ISTUpdated : Apr 11, 2018, 12:41 PM IST
ಒಪ್ಪಂದ ನವೀಕರಣಕ್ಕೆ ಹಿಂದೇಟು ಹಾಕಿದ ಮೆಸ್ಸಿ

ಸಾರಾಂಶ

ಇದೇ ವರ್ಷ ಜುಲೈ ತಿಂಗಳಲ್ಲಿ ತಮ್ಮ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ ಮೆಸ್ಸಿ, ತಮ್ಮ ತಂದೆಯ ಮೂಲಕ ತಮ್ಮ ಮನದ ಇಂಗಿತವನ್ನು ಬಾರ್ಸಿಲೋನಾದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಅದನ್ನು ಸುತ್ನಿಕ್ ಎಂಬ ಪತ್ರಿಕೆಯೂ ವರದಿ ಮಾಡಿದ್ದಾಗಿ ಮಾರ್ಕಾ ಹೇಳಿಕೊಂಡಿದೆ.

ಬಾರ್ಸಿಲೋನಾ(ನ.14): ಅರ್ಜೈಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರು ಸ್ಪಾನಿಶ್ ಫುಟ್ಬಾಲ್ ಲೀಗ್ ಚಾಂಪಿಯನ್ ತಂಡವಾದ ಬಾರ್ಸಿಲೋನಾದೊಂದಿಗೆ ತಾವು ಹೊಂದಿರುವ ಒಪ್ಪಂದವನ್ನು ಸದ್ಯಕ್ಕೆ ನವೀಕರಣಗೊಳಿಸದಿರಲು ನಿರ್ಧರಿಸಿದ್ದಾರೆಂದು ಅರ್ಜೆಂಟೀನಾದ ದಿನಪತ್ರಿಕೆ ಮಾರ್ಕಾ ವರದಿ ಮಾಡಿದೆ.

ವರದಿಯಲ್ಲಿರುವಂತೆ, ಇದೇ ವರ್ಷ ಜುಲೈ ತಿಂಗಳಲ್ಲಿ ತಮ್ಮ ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ ಮೆಸ್ಸಿ, ತಮ್ಮ ತಂದೆಯ ಮೂಲಕ ತಮ್ಮ ಮನದ ಇಂಗಿತವನ್ನು ಬಾರ್ಸಿಲೋನಾದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಅದನ್ನು ಸುತ್ನಿಕ್ ಎಂಬ ಪತ್ರಿಕೆಯೂ ವರದಿ ಮಾಡಿದ್ದಾಗಿ ಮಾರ್ಕಾ ಹೇಳಿಕೊಂಡಿದೆ.

ತಮ್ಮ 17ನೇ ವಯಸ್ಸಿಗೇ ಬಾರ್ಸಿಲೋನಾ ತಂಡಕ್ಕೆ ಕಾಲಿಟ್ಟಿದ್ದ ಮೆಸ್ಸಿಯವರು ಆಗಾಗ ತಮ್ಮ ಒಪ್ಪಂದವನ್ನು ನವೀಕರಣಗೊಳಿಸುತ್ತಲೇ ಇದ್ದಾರೆ. ಸದ್ಯಕ್ಕಿರುವ ಒಪ್ಪಂದ 2018ರ ಜೂನ್‌ನಲ್ಲಿ ಮುಕ್ತಾಯವಾಗಲಿರುವುದರಿಂದ ಬಾರ್ಸಿಲೋನಾ ಫುಟ್ಬಾಲ್ ಸಂಸ್ಥೆ ಈಗಾಗಲೇ ಮೆಸ್ಸಿಯವರ ಒಪ್ಪಂದ ಪ್ರಕ್ರಿಯೆ ಶುರು ಮಾಡಿತ್ತು. ಆದರೆ, ಈ ಪ್ರಕ್ರಿಯೆಗೆ ಸದ್ಯಕ್ಕೆ ತಡೆಯೊಡ್ಡಲು ಮೆಸ್ಸಿ ಹೇಳಿದ್ದಾರೆ.

ಕಾರಣವೇನು?: ಬಹುಕೋಟಿ ಮೊತ್ತದ ತೆರಿಗೆ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರ್ಜೆಂಟೀನಾ ನ್ಯಾಯಾಲಯದಲ್ಲಿ ಮೆಸ್ಸಿ ವಿರುದ್ಧ ವಿಚಾರಣೆ ನಡೆಯುತ್ತಿದೆ. ಅದರ ತೀರ್ಪು ಮುಂದಿನ ವರ್ಷ ಜನವರಿಯಲ್ಲಿ ಹೊರಬೀಳಬಹುದೆಂದು ನಿರೀಕ್ಷಿಸಲಾಗಿದೆ. ಆದರೆ, ವಿಚಾರಣೆ ಮತ್ತಷ್ಟು ದೀರ್ಘವಾಗಿ ನಡೆದರೆ ಜೂನ್ ಹೊತ್ತಿಗೆ ತೀರ್ಪು ಹೊರಬೀಳಬಹುದೆಂಬ ನಿರೀಕ್ಷೆಯಿದೆ. ಹಾಗಾಗಿಯೇ ಮೆಸ್ಸಿ, ಬಾರ್ಸಿಲೋನಾದೊಂದಿಗೆ ತಮ್ಮ ಒಪ್ಪಂದವನ್ನು ನವೀಕರಣಗೊಳಿಸದಿರಲು ನಿರ್ಧರಿಸಿದ್ದಾರೆನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಮತ್ತೆ ಘರ್ಜಿಸಲು ರೆಡಿಯಾದ RCB ಐದು ಹುಲಿಗಳಿವು!
14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದ ಆಟಗಾರನಿಗೆ ಸಿಕ್ತು 14 ಕೋಟಿ ನಗದು! ಇದು ಐಪಿಎಲ್ ಜಾದೂ