ಲೇ ಪಂಗಾ: ಐನಾಕ್ಸ್‌ನಲ್ಲಿ ಪ್ರೊ ಕಬ್ಬಡ್ಡಿ ಲೈವ್‌ಗಿಲ್ಲ ಭಂಗ!

By Web Desk  |  First Published Jul 18, 2019, 8:59 PM IST

ವಿಶ್ವಕಪ್ ಕ್ರಿಕೆಟ್ ಮುಕ್ತಾಯವಾದ ಬೆನ್ನಲ್ಲೇ ಕ್ರೀಡಾಭಿಮಾನಿಗಳನ್ನು ರಂಜಿಸಲು ಪ್ರೊ ಕಬಡ್ಡಿ ಇದೇ ತಿಂಗಳು 20ರಿಂದ ಆರಂಭವಾಗಲಿದೆ. ಇದೇ ವೇಳೆ ಐನಾಕ್ಸ್ ಮಲ್ಟಿಪ್ಲೆಕ್ಸ್ ಕೂಡಾ ನೂತನ ಪ್ರಯತ್ನಕ್ಕೆ ಕೈಹಾಕಿದ್ದು ಈ ಬಾರಿ ಆಯ್ದ ಕೆಲ ಕಬಡ್ಡಿ ಪಂದ್ಯಾಗಳನ್ನು ಸ್ಕ್ರೀನ್‌ನಲ್ಲಿ ಬಿತ್ತರಿಸಲು ಮುಂದಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Le Panga INOX Bengaluru to screen live matches of Pro Kabaddi League season 7

ಬೆಂಗಳೂರು[ಜು.18]: ಕ್ರಿಕೆಟ್ ವಿಶ್ವಕಪ್ ಮುಗಿದು ವಾರ ಕಳೆಯುವಷ್ಟರಲ್ಲಿ ಪ್ರೊ ಕಬಡ್ಡಿ ಕ್ರೀಡಾಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ಇದರ ಜತೆಗೆ ಮಲ್ಟಿಪ್ಲೆಕ್ಸ್ ದಿಗ್ಗಜ INOX(ಐನಾಕ್ಸ್) ಏಳನೇ ಆವೃತ್ತಿಯ ಆಯ್ದ ಕೆಲವು ಪ್ರೊ ಕಬಡ್ಡಿ ಪಂದ್ಯಗಳನ್ನು  ಸ್ಕ್ರೀನ್’ಗಳ ಮೇಲೆ ಬಿತ್ತರಿಸಲಿದ್ದು, ಸ್ಟೇಡಿಯಂನಲ್ಲಿ ಪಂದ್ಯ ನೋಡಲು ಟಿಕೆಟ್ ಸಿಗದಿದ್ದರೆ, ಐನಾಕ್ಸ್’ನಲ್ಲಿ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಬೆಂಗಳೂರು, ಮುಂಬೈ, ವಡೋದರ, ಪುಣೆ ಮತ್ತು ಸೂರತ್’ನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್’ಗಳಲ್ಲಿ ಕಬಡ್ಡಿ ವೀಕ್ಷಿಸಬಹುದಾಗಿದೆ.

ಬೆಂಗ್ಳೂರಲ್ಲಿ ಪ್ರೊ ಕಬಡ್ಡಿಗೆ ಕ್ರೀಡಾ ಇಲಾಖೆ ಗ್ರೀನ್‌ ಸಿಗ್ನಲ್‌!

Tap to resize

Latest Videos

ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಗಳು ಜುಲೈ 20ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಯು ಮುಂಬಾ ತಂಡಗಳು ಮುಖಾಮುಖಿಯಾದರೆ, ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಕಾದಾಡಲಿವೆ. ಇನ್ನು ಫೈನಲ್ ಪಂದ್ಯ ಅಕ್ಟೋಬರ್ 19ರಂದು ನಡೆಯಲಿದೆ. 

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ಪ್ರೊ ಕಬಡ್ಡಿ ಪಂದ್ಯಗಳನ್ನು ಬಿತ್ತರಿಸಲಿರುವ ಏಕೈಕ ಮಲ್ಟಿಪ್ಲೆಕ್ಸ್ ಎನಿಸಿರುವ ಐನಾಕ್ಸ್, ಫೈನಲ್ ಸೇರಿದಂತೆ ಆಯ್ದ ಕೆಲ ಪಂದ್ಯಗಳ ನೇರ ಪ್ರಸಾರ ಮಾಡಲಿದೆ. ಸ್ಕ್ರೀನಿಂಗ್ ದಿನಗಳಲ್ಲಿ ಒಂದೇ ಟಿಕೆಟ್’ನಲ್ಲಿ 7ರಿಂದ 10 ಗಂಟೆವರೆಗೆ ನಡೆಯಲಿರುವ ಎರಡು ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.  ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ವೀಕ್ಷಕರು ಐನಾಕ್ಸ್’ನಲ್ಲೇ ಸ್ಟೇಡಿಯಂ ಮಾದರಿಯ ಅನುಭವ ಪಡೆಯಲಿದ್ದಾರೆ.   

ಕಬಡ್ಡಿ ಇದೀಗ ಕೇವಲ ಭಾರತದ ಕ್ರೀಡೆಯಾಗಿ ಉಳಿದಿಲ್ಲ. ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಹಳೆಯ ಕ್ರೀಡೆಯಿದು. ಈ ಕ್ರೀಡೆಯನ್ನು ಸ್ಲ್ರೀನ್’ಗಳಲ್ಲಿ ಪ್ರದರ್ಶಿಸುವ ಮೂಲಕ ವೀಕ್ಷಕರಿಗೆ ಉತ್ತಮ ಅನುಭವ ಒದಗಿಸುವುದು ನಮ್ಮ ಸೌಭಾಗ್ಯ. ಕಬಡ್ಡಿಯ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದೀಗ ಪ್ರೊ ಕಬಡ್ಡಿ ಪಯಣದಲ್ಲಿ ತಾವು ಜೊತೆಗೂಡುತ್ತಿರುವುದು ರೋಮಾಂಚನವಾಗುತ್ತಿದೆ ಎಂದು ಐನಾಕ್ಸ್ ಸಿಇಓ ಅಲೋಕ್ ಟಂಡನ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ಪಂದ್ಯಾವಳಿಗಳನ್ನು ಐನಾಕ್ಸ್ ದೇಶದ 12 ನಗರಗಳಲ್ಲಿ ಸ್ಕ್ರೀನಿಂಗ್ ಮಾಡಿತ್ತು. 

vuukle one pixel image
click me!
vuukle one pixel image vuukle one pixel image