ಮೋದಿ ಸರ್ಕಾರದ ಬಳಿಕ ಲಡಾಖ್‌ಗೆ BCCI ಅಭಯ!

By Web Desk  |  First Published Aug 6, 2019, 3:24 PM IST

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾಗಿದೆ. ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ ದೇಶದ ರಾಜಕೀಯ ಇತಿಹಾಸದಲ್ಲೇ ಸ್ಮರಣೀಯವಾಗಿದೆ. ಆರ್ಟಿಕಲ್ 370 ರದ್ದು ಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಸರ್ಕಾರ ಘೋಷಿಸಿದೆ. ಇದರ ಬೆನ್ನಲ್ಲೇ, ಬಿಸಿಸಿಐ ಕೂಡ ಜಮ್ಮು ಕಾಶ್ಮೀರ ಹಾಗೂ ಲಡಾಕ್‌ಗೆ ಅಭಯ ನೀಡಿದೆ.


ಮುಂಬೈ(ಆ.06): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಈಗ ಎರಡು ಕೇಂದ್ರಾಡಳಿ ಪ್ರದೇಶವಾಗಿದೆ. ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರದ ಬೆನ್ನಲ್ಲೇ ಬಿಸಿಸಿಐ ಲಡಾಕ್‌ಗೆ ಅಭಯ ನೀಡಿದೆ.

ಇದನ್ನೂ ಓದಿ: ಆರ್ಟಿಕಲ್ 370 ರದ್ದು: ಕಾಶ್ಮೀರಿ ಪಂಡಿತ್ ಸುರೇಶ್ ರೈನಾ ಸಂತಸ!

Tap to resize

Latest Videos

undefined

ರಣಜಿ ಕ್ರಿಕೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಸಕ್ರಿಯವಾಗಿದೆ. ಆದರೆ ಇದೀಗ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿರೋ ಕಾರಣ, ಕ್ರಿಕೆಟ್‌ಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಲಡಾಕ್ ಪ್ರಾಂತ್ಯದ ಪ್ರತಿಭಾನ್ವಿತರು ಜಮ್ಮು ಮತ್ತು ಕಾಶ್ಮೀರ ತಂಡವನ್ನು ಸೇರಿಕೊಳ್ಳಬಹುದು. JK ತಂಡದಲ್ಲಿ ಆಡಲು ಲಡಾಕ್ ಪ್ರಾಂತ್ಯದ ಯುವಕರಿಗೆ ಅವಕಾಶವಿದೆ ಎಂದು COA(ಕ್ರಿತೆಟ್ ಆಡಳಿತ ಮಂಡಳಿ) ಮುಖ್ಯಸ್ಥ ವಿನೋದ್ ರೈ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!

ಸದ್ಯ ಎರಡು ರಣಜಿ ತಂಡದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕಾರಣ ಇದುವರೆಗೂ ಜಮ್ಮು ಕಾಶ್ಮೀರ ತಂಡದಲ್ಲಿ ಲಡಾಕ್ ಪ್ರಾಂತ್ಯದಿಂದ ಯಾರು ಪ್ರತಿನಿದಿಸುತ್ತಿಲ್ಲ. ಲಡಾಕ್‌ನಿಂದ ಹೆಚ್ಚಿನ ಯುವಕರು ಕ್ರಿಕೆಟ್‌ನಲ್ಲಿ ಆಸಕ್ತಿ ತೋರಿದರು ಎರಡು ರಣಜಿ ತಂಡದ ಕುರಿತು ಚಿಂತಿಸಲಾಗುವುದು ಎಂದಿದ್ದಾರೆ. ಆದರೆ ಸದ್ಯ ಎರಡು ಕೇಂದ್ರಾಡಳಿತ ಪ್ರದೇಶವಾದರೂ ಜಮ್ಮು ಮತ್ತು ಕಾಶ್ಮೀರ ತಂಡದಲ್ಲಿ ಆಡುವ ಅವಕಾಶ ನೀಡಲಾಗುವುದು ಎಂದು ವಿನೋದ್ ರೈ ಹೇಳಿದ್ದಾರೆ.

click me!