
ಕೋಲ್ಕತ್ತಾ(ಸೆ.21): ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ 2ನೇ ಪಂದ್ಯದಲ್ಲಿ 50 ರನ್'ಗಳಿಂದ ಬಗ್ಗು ಬಡಿದಿದ್ದಾರೆ. ಭಾರತ ನೀಡಿದ 252 ರನ್'ಗಳ ಸವಾಲಿಗೆ ಆಸಿಸ್ ಪಡೆ 202 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು.
ಈ ಗೆಲುವಿನಿಂದ ಭಾರತ ಭಾರತ ವೆಸ್ಟ್ ಇಂಡೀಸ್, ಶ್ರೀಲಂಕಾ ಸರಣಿಗಳ ಗೆಲುವಿನೊಂದಿಗೆ ಸತತ 8 ಪಂದ್ಯಗಳನ್ನು ಜಯಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡ್'ನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ತಂಡ ಆರಂಭದಲ್ಲಿಯೇ ರೋಹಿತ್ ಶರ್ಮಾ ವಿಕೇಟ್ ಕಳೆದುಕೊಂಡಿತು. ರಹಾನೆ ಹಾಗೂ ನಾಯಕ ಕೊಹ್ಲಿ ಜೊತೆಯಾಗಿ ಮೂರನೇ ವಿಕೇಟ್ ನಷ್ಟಕ್ಕೆ 102 ರನ್ ಬಾರಿಸಿದರು. ರಹಾನೆ 64 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 55 ರನ್ ದಾಖಲಿಸಿದರೆ ಸ್ಪೋಟಕ ಆಟಗಾರ ವಿರಾಟ್ ಕೊಹ್ಲಿ 107 ಚಂಡುಗಳಲ್ಲಿ 8 ಬೌಂಡರಿಯೊಂದಿಗೆ 92 ರನ್ ಚಚ್ಚಿದರು. ಕೇವಲ 8 ರನ್'ಗಳಲ್ಲಿ 31ನೇ ಏಕದಿನ ಶತಕವನ್ನು ತಪ್ಪಿಸಿಕೊಂಡರು. ನಂತರ ಭಾರತದ ಪರ ಜಾಧವ್(24), ಪಾಂಡ್ಯ(20) ಹಾಗೂ ಕುಲ್ದೀಪ್ ಯಾದವ್(20) ರನ್ ಗಳಿಸುವುದರೊಂದಿಗೆ ಭಾರತ 50 ಓವರ್'ಗಳಲ್ಲಿ 252 ರನ್ ಗಳಿಸಿತು.
ಕುಲ್ದೀಪ್ ಹ್ಯಾಟ್ರಿಕ್
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಆಸಿಸ್ ಪಡೆ ಮೊದಲ 5 ಒವರ್'ಗಳಲ್ಲಿ ಕೇವಲ 9 ರನ್'ಗಳಿಗೆ 2 ವಿಕೇಟ್ ಕಳೆದುಕೊಂಡಿತು. ನಂತರ ಇನ್ನಿಂಗ್ಸ್ ಆರಂಭಿಸಿದ ನಾಯಕ ಸ್ಟಿವನ್ ಸ್ಮಿತ್ ಹಾಗೂ ಟ್ರಿವಿಸ್ ಹೆಡ್ ಕೆಲ ಹೊತ್ತು ಭರವಸೆ ಮೂಡಿಸಿ ಮೂರನೇ ವಿಕೇಟ್ ನಷ್ಟಕ್ಕೆ 76 ರನ್ ದಾಖಲಿಸಿದರು. ಹೆಡ್ ಔಟಾದ ನಂತರ ಮ್ಯಾಕ್ಸ್'ವೆಲ್ ಕೇವಲ 14 ರನ್'ಗಳಿಸಿ ಚಹಾಲ್ ಔಟಾದರು. 30ನೇ ಓವರ್'ನಲ್ಲಿ ಸ್ಮಿತ್ ಔಟ್ ಆಗುವುದರೊಂದಿಗೆ ಆಸ್ಟ್ರೇಲಿಯಾಗಿದ್ದ ಗೆಲುವಿನ ಕನಸು ಕಮರಿ ಹೋಯಿತು.
32ನೇ ಓವರ್ ಬೌಲಿಂಗ್ ಮಾಡಿದ ಕುಲ್ದೀಪ್ ಯಾದವ್ ಸತತ ಮೂರು ಎಸತಗಳಲ್ಲಿ ವಾಡ್, ಆಗರ್ ಹಾಗೂ ಕಮ್ಮಿನ್ಸ್ ಅವರ ವಿಕೇಟ್ ಪಡೆಯುವುದರೊಂದಿಗೆ ಭಾರತದ ಪರ ಚೇತನ್ ಶರ್ಮಾ ಹಾಗೂ ಕಪಿಲ್ ದೇವ್ ನಂತರ ಹ್ಯಾಟ್ರಿಕ್ ಪಡೆದ ಮೂರನೇ ಬೌಲರ್ ಎನಿಸಿದರು. ಮರ್ಕಸ್ ಸ್ಟೋನಿಸ್(62 ಅಜೇಯ, 65 ಎಸೆತ, 6 ಬೌಂಡರಿ, 3 ಸಿಕ್ಸ್'ರ್) ಏಕಾಂಗಿ ಹೋರಾಟ ಕೊನೆಯ ಆಟಗಾರ ರಿಚರ್ಡ್'ಸನ್ ಔಟಾಗುವುದರೊಂದಿಗೆ ಮುಕ್ತಾಯವಾಯಿತು.
ಬಾರತದ ಪರ ಕುಲ್ದೀಪ್ ಯಾದವ್ 3, ಭುವನೇಶ್ವರ್ ಕುಮಾರ್ 3 ಹಾಗೂ ಪಾಂಡ್ಯ, ಚಹಾಲ್ ತಲಾ 2 ವಿಕೇಟ್ ಪಡೆದರು. 92 ರನ್ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಸ್ಕೋರ್
ಭಾರತ 50 ಓವರ್'ಗಳಲ್ಲಿ 252/10(ಕೊಹ್ಲಿ:92, ರಹಾನೆ: 55)
ಆಸ್ಟ್ರೇಲಿಯಾ 43.1 ಓವರ್'ಗಳಲ್ಲಿ 202/10(ಸ್ಮಿತ್:59, ಸ್ಟೋನಿಸ್:62, ಕುಲ್ದೀಪ್ ಯಾದವ್:54/3,ಬಿ.ಕುಮಾರ್: 9/3 )
ಫಲಿತಾಂಶ: ಭಾರತಕ್ಕೆ 50 ರನ್'ಗಳ ಜಯ
ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.