RCB ಪರ ಮಿಂಚು ಹರಿಸಿದ ಮೆಕ್ಲಮ್, ಎಬಿಡಿ

By Suvarna Web DeskFirst Published Apr 8, 2018, 9:54 PM IST
Highlights

ಮೂರನೇ ವಿಕೆಟ್'ಗೆ ಕೊಹ್ಲಿ-ಎಬಿಡಿ ಜೋಡಿ 64ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು, ಅದರಲ್ಲೂ ಮಿಂಚಿನ ಬ್ಯಾಟಿಂಗ್ ನಡೆಸಿದ ಎಬಿಡಿ ಕೇವಲ 23 ಎಸೆತಗಳಲ್ಲಿ 5 ಮುಗಿಲೆತ್ತರದ ಸಿಕ್ಸರ್ ಹಾಗೂ ಒಂದು ಬೌಂಡರಿಗಳ ಸಹಾಯದಿಂದ 44 ರನ್ ಬಾರಿಸಿದರು. ಇನ್ನು ಮತ್ತೊಂದೆಡೆ ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಕೊಹ್ಲಿ 33 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 31 ರನ್ ಗಳಿಸಿದರು.

ಕೋಲ್ಕತ(ಏ.08): ಬ್ರೆಂಡನ್ ಮೆಕ್ಲಮ್, ಎಬಿ ಡಿವಿಲಿಯರ್ಸ್ ಹಾಗೂ ಕೊನೆಯಲ್ಲಿ ಮನ್ದೀಪ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನೈಟ್'ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 176 ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್'ಸಿಬಿ ಎರಡನೇ ಓವರ್'ನಲ್ಲೇ ಡಿಕಾಕ್ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಮೆಕ್ಲಮ್ ಹಾಗೂ ಕೊಹ್ಲಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಕೇವಲ 27 ಎಸೆತಗಳಲ್ಲಿ ಮೆಕ್ಲಮ್ 6 ಬೌಂಡರಿ ಹಾಗೂ 2 ಸಿಕ್ಸರ್'ಗಳ ನೆರವಿನೊಂದಿಗೆ 43 ರನ್ ಬಾರಿಸಿ ನರೈನ್'ಗೆ ವಿಕೆಟ್ ಒಪ್ಪಿಸಿದರು.

ಮಿಂಚಿದ ಕೊಹ್ಲಿ-ಎಬಿಡಿ: ಮೂರನೇ ವಿಕೆಟ್'ಗೆ ಕೊಹ್ಲಿ-ಎಬಿಡಿ ಜೋಡಿ 64ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು, ಅದರಲ್ಲೂ ಮಿಂಚಿನ ಬ್ಯಾಟಿಂಗ್ ನಡೆಸಿದ ಎಬಿಡಿ ಕೇವಲ 23 ಎಸೆತಗಳಲ್ಲಿ 5 ಮುಗಿಲೆತ್ತರದ ಸಿಕ್ಸರ್ ಹಾಗೂ ಒಂದು ಬೌಂಡರಿಗಳ ಸಹಾಯದಿಂದ 44 ರನ್ ಬಾರಿಸಿದರು. ಇನ್ನು ಮತ್ತೊಂದೆಡೆ ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಕೊಹ್ಲಿ 33 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 31 ರನ್ ಗಳಿಸಿದರು. ಆದರೆ 15ನೇ ಓವರ್'ನಲ್ಲಿ ದಾಳಿಗಿಳಿದ ನಿತೀಶ್ ರಾಣಾ ಈ ಇಬ್ಬರು ಬ್ಯಾಟ್ಸ್'ಮನ್'ಗಳನ್ನು ಬಲಿ ಪಡೆಯುವ ಮೂಲಕ ಆರ್'ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಸಫಲವಾದರು.

ನಿರಾಸೆ ಮೂಡಿಸಿದ ಸರ್ಫರಾಜ್; ಸಿಡಿದ ಮನ್ದೀಪ್:

ಅಂತಿಮ ಓವರ್'ಗಳಲ್ಲಿ ಸರ್ಫರಾಜ್ ಸಿಡಿಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ 10 ಎಸೆತಗಳನ್ನು ಎದುರಿಸಿದ ಸರ್ಫರಾಜ್ ಕೇವಲ 6 ರನ್'ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮನ್ದೀಪ್ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್(18 ಎಸೆತ, 37 ರನ್) ನಡೆಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:

RCB: 176/7

ಎಬಿ ಡಿವಿಲಿಯರ್ಸ್: 44

ರಾಣಾ: 11/2

(* ವಿವರ ಅಪೂರ್ಣ)

click me!