ಧೋನಿ ಕೊಟ್ಟ ಪ್ರೋತ್ಸಾಹವನ್ನ ಶ್ಲಾಘಿಸಿದ ಕೊಹ್ಲಿ

Published : Jan 07, 2017, 09:10 AM ISTUpdated : Apr 11, 2018, 01:04 PM IST
ಧೋನಿ ಕೊಟ್ಟ ಪ್ರೋತ್ಸಾಹವನ್ನ ಶ್ಲಾಘಿಸಿದ ಕೊಹ್ಲಿ

ಸಾರಾಂಶ

2008ರಲ್ಲಿ ಏಕದಿನ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ ಬಳಿಕ ಇದುವರೆಗೆ ಕೊಹ್ಲಿ ಆಡಿರುವ ಎಲ್ಲ ಪಂದ್ಯಗಳೂ ಧೋನಿ ನಾಯಕತ್ವದಲ್ಲೇ ಆಡಿದ್ದಾರೆ.  ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರಲಿಲ್ಲ. ಈ ಸಂದರ್ಭ ಕೊಹ್ಲಿ ಸ್ಥಾನ ಭದ್ರವಿರಲಿಲ್ಲ. ಕೊಹ್ಲಿಯ ಟ್ಯಾಲೆಂಟ್ ಅರಿತಿದ್ದ ಧೋನಿ ಅವರನ್ನ ಉಳಿಸಿಕೊಂಡರಂತೆ.

ಮುಂಬೈ(ಜ.07): ಮಹೇಂದ್ರ ಸಿಂಗ್ ಧೋನಿ ಕೇವಲ ಯಶಸ್ವಿ ಕ್ಯಾಪ್ಟನ್ ಅಷ್ಟೇ ಅಲ್ಲ, ತನ್ನ ುತ್ತರಾಧಿಕಾರಿ ವಿರಾಟ್ ಕೊಹ್ಲಿಗೆ ಆಪತ್ಬಾಂಧವನೂ ಹೌದು. ಹಲವು ಬಾರಿ ತಾನು ತಂಡದಿಂದ ಹೊರಬೀಳುತ್ತಿದ್ದಾಗ ಧೋನಿ ತನ್ನನ್ನ ರಕ್ಷಿಸಿರುವುದಾಗಿ ಕೊಹ್ಲಿ ಹೇಳಿಕೊಂಡಿದ್ದಾರೆ.

2008ರಲ್ಲಿ ಏಕದಿನ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ ಬಳಿಕ ಇದುವರೆಗೆ ಕೊಹ್ಲಿ ಆಡಿರುವ ಎಲ್ಲ ಪಂದ್ಯಗಳೂ ಧೋನಿ ನಾಯಕತ್ವದಲ್ಲೇ ಆಡಿದ್ದಾರೆ.  ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರಲಿಲ್ಲ. ಈ ಸಂದರ್ಭ ಕೊಹ್ಲಿ ಸ್ಥಾನ ಭದ್ರವಿರಲಿಲ್ಲ. ಕೊಹ್ಲಿಯ ಟ್ಯಾಲೆಂಟ್ ಅರಿತಿದ್ದ ಧೋನಿ ಅವರನ್ನ ಉಳಿಸಿಕೊಂಡರಂತೆ.

`ಆರಂಭಿಕ ದಿನಗಳಲ್ಲಿ ಧೋನಿ ನನಗೆ ಮಾರ್ಗದರ್ಶಿಯಾಗಿದ್ದರು, ನನಗೆ ಅವಕಾಶ ಕೊಟ್ಟರು.  ಒಬ್ಬ ಕ್ರಿಕೆಟಿಗನಾಗಿ ಬೆಳೆಯಲು ಧೋನಿ ನನಗೆ ಸಾಕಷ್ಟು ಸಮಯ ಕೊಟ್ಟರು. ಹಲವು ಬಾರಿ ತಂಡದಿಂದ ಕೈಬಿಡುವ ಸಂದರ್ಭ ಬಂದಾಗಲೂ ನನ್ನನ್ನ ಉಳಿಸಿಕೊಂಡಿದ್ದಾರೆ' ಎಂದು ಕೊಹ್ಲಿ ಶ್ಲಾಘಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಆತ ಊಟಿಗೆ ಕರೆದುಕೊಂಡು ಹೋಗಿ..': ಅಪ್ರಾಪ್ತೆ ಮೇಲೆ ಆರ್‌ಸಿಬಿ ಆಟಗಾರ ಲೈಂಗಿಕ ದೌರ್ಜನ್ಯ, ಬೇಲ್ ಕ್ಯಾನ್ಸಲ್! ಶುರುವಾಯ್ತು ಬಂಧನ ಭೀತಿ
ವಿಜಯ್ ಹಜಾರೆ ಟ್ರೋಫಿ: ದೇಶಿ ಕ್ರಿಕೆಟಲ್ಲಿ ರನ್‌ ಮಳೆ, ದಾಖಲೆಗಳ ಪ್ರವಾಸ; ಮೊದಲ ದಿನವೇ 22 ಶತಕ ದಾಖಲು!