ಮಳೆ ತಂದ ಅವಾಂತರ : ಕ್ವಾಲಿಫೈಯರ್ ತಲುಪಿದ ಕೋಲ್ಕತ್ತಾ

By Suvarna web deskFirst Published May 18, 2017, 1:30 AM IST
Highlights

ಕೋಲ್ಕತ್ತಾ ತಂಡ ಫೈನಲ್ ತಲುಪ ಬೇಕಾದರೆ ಮೇ.19ರಂದು ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಬೇಕಿದೆ.

ಬೆಂಗಳೂರು(ಮೇ.18):  ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿದು ಕೋಲ್ಕತ್ತಾ ಗೆಲುವಿಗೆ ನೀರೆರೆಯಿತು. 2 ಗಂಟೆಗೂ ಹೆಚ್ಚು ಕಾಲ ಮಳೆ ಬಂದ ಕಾರಣ  ಪಂದ್ಯ ರಾತ್ರಿ 12.55 ಆರಂಭವಾಗಿ ಕೋಲ್ಕತ್ತಾಗೆ 6 ಓವರ್'ಗಳಲ್ಲಿ 48 ಗುರಿ ನೀಡಲಾಯಿತು. ಕಡಿಮೆ ಮೊತ್ತವಾದ ಕಾರಣ  3 ವಿಕೇಟ್ ಕಳೆದುಕೊಂಡ ಗಂಭೀರ್ ಪಡೆ 4.5 ಓವರ್'ಗಳಲ್ಲಿ  ಗೆಲುವು ಪಡೆದು ಕ್ವಾಲಿಫೈಯರ್ ಪ್ರವೇಶಿಸಿತು.

ಕೋಲ್ಕತ್ತಾ ತಂಡ ಫೈನಲ್ ತಲುಪ ಬೇಕಾದರೆ ಮೇ.19ರಂದು ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಬೇಕಿದೆ.

ಟಾಸ್ ಗೆದ್ದ ನೈಟ್ ರೈಡರ್ಸ್ ಪಡೆ ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿತು.ಮೊದಲು ಬ್ಯಾಟ್ ಬೀಸಿದ ಹೈದರಾಬಾದ್ 20 ಓವರ್'ಗಳಲ್ಲಿ  7 ವಿಕೇಟ್ 128 ಕಡಿಮೆ ಮೊತ್ತ ದಾಖಲಿಸಿತು. ವಾರ್ನರ್(37), ವಿಲಿಯಮ್ಸ್'ನ್(24) ಹಾಗೂ ಶಂಕರ್(22) ರನ್ ದಾಖಲಿಸಿದರು.  ಉಳಿದ ದಾಂಡಿಗರು ಬಾರಿಸಿದ್ದು ಒಂದಂಕಿಯ ಮೊತ್ತ ಮಾತ್ರ.

ಮಳೆಯಿಂದ 6 ಓವರ್'ಗಳಲ್ಲಿ 48 ರನ್ ಗುರಿ ಪಡೆದುಕೊಂಡು ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತಾ ತಂಡ 2 ಓವರ್'ಗಳಿಲ್ಲಿಯೇ 3 ವಿಕೇಟ್ ಕಳೆದು ಆತಂಕಕ್ಕೀಡಾದರೂ 4.5 ಓವರ್'ಗಳಲ್ಲಿ ಗೆಲುವಿನ ದಡ ಸೇರಿತು. 18 ಎಸೆತಗಳಲ್ಲಿ 31 ರನ್' ಗಳಿಸಿದ ಗಂಭೀರ್ ಗೆಲುವಿನ ರುವಾರಿಯಾದರು

ಸ್ಕೋರ್

ಸನ್ ರೈಸರ್ಸ್ ಹೈದರಾಬಾದ್ : 128/7(20/20)

ಕೋಲ್ಕತ್ತಾ ನೈಟ್ ರೈಡರ್ಸ್: 48/3(4.5/6)

ಕೋಲ್ಕತ್ತಾ'ಗೆ 7 ವಿಕೇಟ್ ಜಯ

click me!