
ಬಹುನಿರೀಕ್ಷಿತ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ತೆರೆಬಿದ್ದಿದ್ದು, 8 ಪ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಂಡಕ್ಕೆ ಖರೀದಿಸಿದ್ದಾರೆ. ಹರಾಜಿನಲ್ಲಿ ಈ ಬಾರಿ ಸಾಕಷ್ಟು ಗಮನ ಸೆಳೆದಿದ್ದು, ಪ್ರೀತಿ ಜಿಂಟಾ, ನೆಸ್ ವಾಡಿಯಾ ಸಹ ಒಡೆತನದ ಕಿಂಗ್ಸ್ XI ಪಂಜಾಬ್.
ಹರಾಜಿಗೂ ಮುನ್ನ ಅಕ್ಷರ್ ಪಟೇಲ್ ಅವರನ್ನು ರೀಟೈನ್ ಮಾಡಿಕೊಂಡಿದ್ದ ಪಂಜಾಬ್, ಹರಾಜಿನಲ್ಲಿ RTM ಕಾರ್ಡ್ ಬಳಸಿ ಡೇವಿಡ್ ಮಿಲ್ಲರ್, ಮಾರ್ಕ್ಸ್ ಸ್ಟೋನಿಸ್ ಹಾಗೂ ಮೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡಿತು. ಮೂರನೇ ಬಿಡ್ಡಿಂಗ್'ನಲ್ಲಿ ಕ್ರಿಸ್ ಗೇಲ್ ಖರೀದಿಸಿದ ಪ್ರೀತಿ ಪಡೆ ಒಂದು ವಿಚಾರದಲ್ಲಿ ಎಡವಿದಂತಿದೆ. ಬಹುತೇಕ ಎಲ್ಲಾ ಆಟಗಾರರ ಹರಾಜಿನಲ್ಲಿ ಜಿದ್ದಿಗೆ ಬಿದ್ದಂತೆ ಉಳಿದ ಪ್ರಾಂಚೈಸಿಗಳಿಗೆ ಫೈಟ್ ಕೊಟ್ಟ ಪಂಜಾಬ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಒಂದು ಯಡವಟ್ಟು ಮಾಡಿಕೊಂಡಿದೆ.
ಹೌದು, ವಿರೇಂದ್ರ ಸೆಹ್ವಾಗ್ ಕೋಚ್ ಆಗಿರುವ ಪಂಜಾಬ್ ತಂಡವು ಹರಾಜಿನಲ್ಲಿ ಸ್ಪೆಷಲಿಸ್ಟ್ ಕೀಪರ್'ನನ್ನು ಖರೀದಿಸುವುದನ್ನೇ ಮರೆತಿದೆ. ಒಟ್ಟು 9 ಬ್ಯಾಟ್ಸ್'ಮನ್, 8 ಬೌಲರ್ ಹಾಗೂ 4 ಆಲ್ರೌಂಡರ್'ಗಳನ್ನು ಖರೀದಿಸಿದ ಪಂಜಾಬ್, ಒಬ್ಬ ಪರಿಣಿತ ಕೀಪರ್'ನನ್ನು ಖರೀದಿಸಿಲ್ಲ.
ಹೀಗಾಗಿ ಕನ್ನಡಿಗ ಕೆ.ಎಲ್ ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್'ಕೀಪಿಂಗ್ ಕೂಡಾ ಮಾಡುವ ಸಾಧ್ಯತೆಯಿದೆ. ಆದರೆ ರಾಹುಲ್ ಕೂಡ ತಜ್ಞ ವಿಕೆಟ್'ಕೀಪರ್ ಅಲ್ಲ. ಹಠಕ್ಕೆ ಬಿದ್ದು ಆಟಗಾರರನ್ನು ಖರೀದಿಸುವ ಭರಾಟೆಯಲ್ಲಿ ಪಂಜಾಬ್ ಯಡವಿತೇನೋ ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದರೆ ಅಚ್ಚರಿಯಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.