ಬಿಸಿಸಿಐಗೆ ಹೈಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ ಶ್ರೀಶಾಂತ್

By Suvarna Web DeskFirst Published Mar 4, 2017, 7:15 AM IST
Highlights

. 2013 ರಲ್ಲಿ ಐಪಿಎಲ್ 6ನೇ ಆವೃತ್ತಿಯಲ್ಲಿ ಶ್ರೀಶಾಂತ್ ಸೇರಿದಂತೆ 36 ಮಂದಿ ಆರೋಪಿಗಳು ಸ್ಪಾಟ್ ಫಿಕ್ಸಿಂಗ್'ನಲ್ಲಿ ಭಾಗಿಯಾಗಿಲ್ಲ ಎಂದು ಜುಲೈ 2015 ರಲ್ಲಿ ಪಾಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿತ್ತು.

ಕೊಚ್ಚಿ(ಮಾ.04): ಐಪಿಎಲ್'ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ಅಜೀವ ನಿಷೇಧಕ್ಕೊಳಗಾಗಿರುವ ಭಾರತ ತಂಡದ ಕಳಂಕಿತ ಆಪಾದನೆ ಹೊತ್ತಿರುವ ಆಟಗಾರ ಎಸ್. ಶ್ರೀಶಾಂತ್ ಕೇರಳ ಹೈಕೋರ್ಟ್ ಮೂಲಕ ಬಿಸಿಸಿಐ'ಗೆ ನೋಟೀಸ್ ಕಳುಹಿಸಿದ್ದಾರೆ.

ತಾವು ಏಪ್ರಿಲ್'ನಿಂದ ಸ್ಕಾಟಿಶ್ ಕ್ಲಬ್'ನಲ್ಲಿ  ಆಡಲು ಅನುಮತಿ ನೀಡುವಂತೆ ಬಿಸಿಸಿಐಗೆ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ. ನ್ಯಾಯಮೂರ್ತಿ ಪಿವಿ ಆಶಾ ಅವರು ಕೇಂದ್ರ ಸರ್ಕಾರ ಹಾಗೂ ಬಿಸಿಸಿಐ'ಗೆ ನೋಟಿಸ್ ಕಳುಹಿಸಿದ್ದಾರೆ. 2013 ರಲ್ಲಿ ಐಪಿಎಲ್ 6ನೇ ಆವೃತ್ತಿಯಲ್ಲಿ ಶ್ರೀಶಾಂತ್ ಸೇರಿದಂತೆ 36 ಮಂದಿ ಆರೋಪಿಗಳು ಸ್ಪಾಟ್ ಫಿಕ್ಸಿಂಗ್'ನಲ್ಲಿ ಭಾಗಿಯಾಗಿಲ್ಲ ಎಂದು ಜುಲೈ 2015 ರಲ್ಲಿ ಪಾಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿತ್ತು. ಆದರೆ ಬಿಸಿಸಿಐ ಈ ತೀರ್ಪನ್ನು ನಿರಾಕರಿಸಿತ್ತು. ದೆಹಲಿ ಪೊಲೀಸರು ಕೂಡ ಈ ತೀರ್ಪಿನ ವಿರುದ್ಧ ಹೈಕೋರ್ಟ್'ಗೆ ಮೇಲ್ಮನವಿ ಸಲ್ಲಿಸಿದ್ದರು.

Latest Videos

ಅಲ್ಲದೆ ದೆಹಲಿ ಪೊಲೀಸರು ತಮ್ಮ ಮೇಲೆ ಅನಗತ್ಯವಾಗಿ ಸುಳ್ಳು ಆರೋಪ ಹೊರಿಸುತ್ತಿದ್ದು, ಅವರು ಸಲ್ಲಿಸಿರುವ ವರದಿ ಅವರೆ ಸೃಷ್ಟಿಸಿದ ವರದಿಗಳು. ಅಲ್ಲದೆ ಟ್ರಯಲ್ ಕೋರ್ಟ್ ಕೂಡ ತಾವು ಆರೋಪಿಯಲ್ಲ ಎಂದು ತೀರ್ಪು ನೀಡಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ತಮಗೆ ಸ್ಕಾಟಿಶ್ ಕ್ಲಬ್'ನಲ್ಲಿ ಆಡಲು ಅನುಮತಿ ನೀಡುವಂತೆ ಶ್ರೀಶಾಂತ್ ಬಿಸಿಸಿಐಗೆ ನೋಟಿಸ್ ನೀಡಿದ್ದಾರೆ. ಸ್ಕಾಟಿಶ್ ಕ್ಲಬ್'ನಲ್ಲಿ ಆಡಬೇಕಾದರೆ ಬಿಸಿಸಿಐ ಎನ್'ಒಸಿ ಪ್ರಮಾಣಪತ್ರ ನೀಡಬೇಕು. ಆದರೆ ಐತೀರ್ಪು ಬಂದಿರದ ಕಾರಣ ಈ ಪ್ರಮಾಣಪತ್ರವನ್ನು ನೀಡಲು ಭಾರತೀಯ ಕ್ರಿಕೆಟ್ ಮಂಡಳಿ ನಿರಾಕರಿಸುತ್ತಿದೆ.

click me!