
ಬೆಂಗಳೂರು(ಫೆ.17):ಟೆಸ್ಟ್ ಆಡಿದ ಮೂರನೇ ಪಂದ್ಯದಲ್ಲಿ ತ್ರಿಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದವರು ಕನ್ನಡಿಗ ಕರುಣ್ ನಾಯರ್. ಶತಕ ಹೊಡೆಯುವುದಕ್ಕಿಂತ ಮುನ್ನವೇ ತ್ರಿಶತಕ ದಾಖಲಿಸಿದ ವಿಶ್ವದ ಮೂರನೇ ಆಟಗಾರ ಕರುಣ್.
ಕರುಣ್ ದಾಖಲಿಸಿದ ಮೊದಲ ತ್ರಿಶತಕ ರನ್'ಗಳಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಬೃಹತ್ 759 ರನ್ ದಾಖಲಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈಗ ಮತ್ತೆ ಅವರು ಸುದ್ದಿಯಲ್ಲಿರುವುದು ಕಾರು ಖರೀದಿಯ ಕಾರಣಕ್ಕೆ. ಇದೇನಿದು ಕಾರನ್ನು ಸಾಮಾನ್ಯರು ಒಳಗೊಂಡು ಎಲ್ಲರು ಕೊಂಡುಕೊಳ್ಳುತ್ತಾರೆ. ಅದರಲ್ಲೇನಿದೆ ವಿಶೇಷ ಅಂತೀರಾ.
ಕಾರಿನಲ್ಲಿಯೇ ವಿಶೇಷವಿದೆ. ಕರುಣ್ ಫೋರ್ಡ್ ಮುಸ್ತಾಂಗ್ ಕಾರು ಖರೀದಿಸಿದ್ದು, ಅದರ ಬೆಲೆ 90 ಲಕ್ಷ ರೂ. ತುಂಬ ವಿಶೇಷವಾಗಿರುವುದು ಇನ್ನು ಇದೆ. ಅದು ಕಾರಿನ ನಂಬರ್.ಕರುಣ್ ಖರೀದಿಸಿರುವ ಕಾರಿನ ನಂಬರ್'ಗೂ ಅವರು ತ್ರಿಶತಕ ಮೊತ್ತ ಎರಡೂ ಒಂದೇ ಆಗಿದೆ. ಅವರು ದಾಖಲಿಸಿದ ಮೊತ್ತ 303 ಕರಣ್ ಕಾರಿನ ನಂಬರ್ 'KA 03 NA 303'. KA ಎಂದರೆ ಕರಣ್ 03 ಅಂದರೆ ಆಡಿರುವುದು ಕೇವಲ ಮೂರು ಟೆಸ್ಟ್'ಗಳು, NA ಯ ಅರ್ಥ ನಾಯರ್ 303 ಹೊಡೆದಿರುವ ರನ್.
ಭಾರತದಲ್ಲಿ ವೀರೇಂದ್ರ ಸೆಹ್ವಾಗ್ ನಂತರ ಕರುಣ್ ನಾಯರ್ ಮಾತ್ರ ತ್ರಿಶತಕ ದಾಖಲಿಸಿರುವುದು. ತಾವು ಖರೀದಿಸಿರುವ ಕಾರನ್ನು ತಮ್ಮ ಇನ್'ಸ್ಟಗ್ರಾಮ್'ನಲ್ಲಿ ಹಾಕಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.