
ಬೆಂಗಳೂರು: ಕೊರೋನಾ ಹೆಮ್ಮಾರಿ ಮಾಡಿದ ಅವಾಂತರ ಒಂದೆರಡಲ್ಲ. ಕೋವಿಡ್ 19 ವೈರಲ್ ಜಗತ್ತಿನ ಲಕ್ಷಾಂತರ ಜನರ ಜೀವ ತೆಗೆದಿದ್ದು ಒಂದು ಕಡೆಯಾದರೇ, ಕೋಟ್ಯಾಂತರ ಮಂದಿಯ ಬದುಕನ್ನೇ ಮುಳುಗಿಸಿದೆ. ಇದಕ್ಕೆ ಮತ್ತೊಂದು ಉದಾಹರಣೆ ಕರ್ನಾಟಕ ಟೇಬಲ್ ಟೆನಿಸ್ ಕೋಚ್ ಆಗಿದ್ದ ವ್ಯಕ್ತಿ ಇದೀಗ ಜೀವನ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿ ದಿನ ದೂಡುತ್ತಿದ್ದಾರೆ.
ಬೆಂಗಳೂರು ಒಂದು ರೀತಿ ಅವಕಾಶಗಳ ಆಗರ. ಇಲ್ಲಿ ದುಡಿಯುವ ಮನಸ್ಸಿದ್ದವರಿಗೆ ಒಂದಲ್ಲ ಒಂದು ಕೆಲಸ ಸಿಕ್ಕೇ ಸಿಗುತ್ತದೆ. ಒಂದು ಕಾಲದಲ್ಲಿ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಮೂರ್ತಿ ಎನ್ ಎನ್ನುವವರು ಇದೀಗ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಬದುಕು ಕಸಿದ ಕೊರೋನಾ:
ಕೊರೋನಾ ವಕ್ಕರಿಸುವ ಮುನ್ನ ಗುರುಮೂರ್ತಿ ಎನ್ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ತಂಡದ ಪೂರ್ಣಾವಧಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೊರೋನಾ ವಕ್ಕರಿಸಿದ ಬಳಿಕ ಹಲವರ ಬದುಕು ಚೆಲ್ಲಾಪಿಲ್ಲಿಯಾಯಿತು. ಅದಕ್ಕೆ ಗುರುಮೂರ್ತಿಯವರು ಹೊರತಾಗಲಿಲ್ಲ. ಕೋವಿಡ್‌ನಿಂದಾಗಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತವಾದವು. ಅದೇ ರೀತಿ ಗುರುಮೂರ್ತಿಯವರು ಕೆಲಸ ಕಳೆದುಕೊಂಡರು. ಆದರೆ ಜೀವನ ನಿರ್ವಹಣೆ ಮಾಡುವುದಕ್ಕಾಗಿ ಅವರು ಆರಿಸಿಕೊಂಡಿದ್ದು ಆಟೋ ಚಾಲಕನ ಕೆಲಸ.
ಕೋಚ್ ಆಗಲು ರೆಡಿ ಇದ್ದಾರೆ ಗುರುಮೂರ್ತಿ:
ಗುರುಮೂರ್ತಿ ಇದೀಗ ಆಟೋ ಚಾಲನೆ ಮಾಡುವುದರ ಜತೆಗೆ ಈಗಲೂ ಕೋಚ್ ಆಗಲು ತಯಾರಿದ್ದಾರೆ. ಈ ಕುರಿತಂತೆ ಆಟೋ ಚಾಲಕನ ಸೀಟ್ ಹಿಂಬದಿಯಲ್ಲಿ ತಮ್ಮ ಕಾಂಟ್ಯಾಕ್ಟ್ ನಂಬರ್ 7899210897 ಜತೆಗೆ ಬೆಂಗಳೂರಿನಲ್ಲಿ ಯಾರಾದರೂ ಟೇಬಲ್ ಟೆನಿಸ್ ಕಲಿಯಲು ಆಸಕ್ತರಿದ್ದರೇ, ಕ್ಲಬ್‌ನವರು, ಸ್ಕೂಲ್‌ನಲ್ಲಿ, ಅಪಾರ್ಟ್‌ಮೆಂಟ್‌ನಲ್ಲಿ ಟೇಬಲ್ ಟೆನಿಸ್ ಕೋಚ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.