ಮಿಥುನ್ ದಾಳಿಗೆ ದೆಹಲಿ ಧೂಳಿಪಟ: ರಾಜ್ಯಕ್ಕೆ 348 ರನ್ ಮುನ್ನಡೆ, ಡ್ರಾನತ್ತ ಸಾಗಿದ ಪಂದ್ಯ

By Suvarna Web DeskFirst Published Nov 12, 2017, 12:20 PM IST
Highlights

3ನೇ ದಿನದಾಟ ಅಂತ್ಯದಲ್ಲಿಶತಕ(135) ಗಳಿಸಿ ಅಜೇಯರಾಗಿ ಉಳಿಸಿದ್ದ ಆರಂಭಿಕ ಆಟಗಾರ ಗೌತಮ್ಗಂಭೀರ್ 144 ರನ್ ಗಳಿಸಿದ್ದಾಗ ಮಿಥುನ್ ಬೌಲಿಂಗ್'ನಲ್ಲಿಸಮರ್ಥ್'ಗೆ ಸ್ಟಂಪ್ ಔಟ್ ಆದರು.

ನೆಲಮಂಗಲ(ನ.12):  ಕರ್ನಾಟಕ ತಂಡವು ದೆಹಲಿ ವಿರುದ್ಧದ ಎ ಗ್ರೂಪಿನ 4ನೇ ರಣಜಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್'ನಲ್ಲಿ 348 ರನ್ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಂತ್ಯಕ್ಕೆ 84 ಓವರ್'ಗಳಲ್ಲಿ 4 ವಿಕೇಟ್ ನಷ್ಟಕ್ಕೆ 277 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದ್ದ ರಿಷಬ್ ಪಂತ್ ನೇತೃತ್ವದ ದೆಹಲಿ ಪಡೆ ಕೊನೆಯ ದಿನವಾದ ಇಂದು ಕೇವಲ 11 ಓವರ್'ಗಳು(95) ಆಗುವಷ್ಟರಲ್ಲಿ ತನ್ನೆಲ್ಲ ವಿಕೇಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆ ಸಾಧಿಸಿತು.

3ನೇ ದಿನದಾಟದ ಅಂತ್ಯದಲ್ಲಿ ಶತಕ(135) ಗಳಿಸಿ ಅಜೇಯರಾಗಿ ಉಳಿಸಿದ್ದ ಆರಂಭಿಕ ಆಟಗಾರ ಗೌತಮ್ ಗಂಭೀರ್ 144 ರನ್ ಗಳಿಸಿದ್ದಾಗ ಮಿಥುನ್ ಬೌಲಿಂಗ್'ನಲ್ಲಿ  ಸಮರ್ಥ್'ಗೆ ಸ್ಟಂಪ್ ಔಟ್ ಆದರು. 10 ರನ್'ನೊಂದಿಗೆ ಅಜೇಯರಾಗಿ ಉಳಿದಿದ್ದ ಮತ್ತೊಬ್ಬ ಆಟಗಾರ ಮಿಲಿಂದ್ ಕುಮಾರ್ ಕೂಡ ಆಟದ ಮೊದಲ ಓವರ್'ನಲ್ಲಿ ಮಿಥುನ್ ಬೌಲಿಂಗ್'ನಲ್ಲಿಯೇ ಔಟ್ ಆದರು. ಬೌಲರ್'ಗಳು ಒಳಗೊಂಡಂತೆ ಉಳಿದ ಆಟಗಾರರ್ಯಾರು ಹೆಚ್ಚು ಹೊತ್ತು ಕ್ರೀಸ್'ನಲ್ಲಿ ಉಳಿಯಲಿಲ್ಲ.

23 ಒವರ್'ಗಳಲ್ಲಿ 70 ರನ್ ನೀಡಿ 5 ವಿಕೇಟ್ ಪಡೆದ ವೇಗಿ ಅಭಿಮನ್ಯು ಮಿಥುನ್ ದೆಹಲಿಯ ಪತನದಲ್ಲಿ ಪ್ರಮುಖ ಕಾರಣರಾದರು. ಸ್ಟುವರ್ಟ್ ಬಿನ್ನಿ 39/2, ನಾಯಕ ವಿನಯ್ ಕುಮಾರ್ ಹಾಗೂ ಕೆ. ಗೌತಮ್ ತಲಾ ಒಂದು ವಿಕೇಟ್ ಪಡೆದರು.

2ನೇ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ವಿಕೇಟ್ ನಷ್ಟವಿಲ್ಲದೆ 72 ರನ್ ಪೇರಿಸಿದ್ದು,  ಕೆ.ಎಲ್.ರಾಹುಲ್(33) ಹಾಗೂ ಸಮರ್ಥ ಆರ್(35) ಆಜೇಯರಾಗಿ ಆಟವಾಡುತ್ತಿದ್ದಾರೆ. ರಾಜ್ಯ ತಂಡ ಒಟ್ಟು 420 ರನ್'ಗಳ ಮುನ್ನಡೆ ಸಾಧಿಸಿದೆ. ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗುವ ಸಾಧ್ಯತೆಯಿದೆ.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನ್ನಿಂಗ್ಸ್ 172.2 ಓವರ್ 649 ರನ್ ಆಲೌಟ್ ಹಾಗೂ 2ನೇ ಇಂನ್ನಿಗ್ಸ್ ವಿಕೇಟ್ ನಷ್ಟವಿಲ್ಲದೆ 72

ದೆಹಲಿ ಮೊದಲ ಇನ್ನಿಂಗ್ಸ್ 95  ಓವರ್  301/10
(ಗೌತಮ್ ಗಂಭೀರ್ 144, ಧ್ರುವ್ ಶೋರೀ 64, ರಿಶಬ್ ಪಂತ್ 41, ಉನ್ಮುಕ್ತ್ ಚಾಂದ್ 16 - ಅಭಿಮನ್ಯು ಮಿಥುನ್ 70/5, ಸ್ಟುವರ್ಟ್ ಬಿನ್ನಿ 39/2)

click me!