ಕನ್ನಡಿಗರ ದಾಳಿಗೆ ಮತ್ತೆ ಕುಸಿದ ರಾಜಸ್ಥಾನ; ಜಯದ ಹೊಸ್ತಿಲಲ್ಲಿ ಕರ್ನಾಟಕ

Published : Nov 15, 2016, 02:05 PM ISTUpdated : Apr 11, 2018, 01:10 PM IST
ಕನ್ನಡಿಗರ ದಾಳಿಗೆ ಮತ್ತೆ ಕುಸಿದ ರಾಜಸ್ಥಾನ; ಜಯದ ಹೊಸ್ತಿಲಲ್ಲಿ ಕರ್ನಾಟಕ

ಸಾರಾಂಶ

ನಾಳೆ ಪಂದ್ಯದ ಕೊನೆಯ ದಿನವಾಗಿದ್ದು, ರಾಜಸ್ಥಾನ ಇನ್ನೂ 407 ರನ್ ಗಳಿಸಬೇಕಿದೆ. ಇದು ಕಷ್ಟಸಾಧ್ಯವಾಗಿದ್ದು, ಕರ್ನಾಟಕಕ್ಕೆ ಗೆಲುವು ಬಹುತೇಕ ನಿಶ್ಚಿತವೆನಿಸಿದೆ.

ವೈಜಾಗ್(ನ. 15): ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ವಿನಯ್ ಕುಮಾರ್ ಮತ್ತು ಎಸ್.ಅರವಿಂದ್ ದಾಳಿಗೆ ರಾಜಸ್ಥಾನ ಎರಡನೇ ಇನ್ನಿಂಗ್ಸಲ್ಲೂ ಕುಸಿತ ಕಂಡಿದೆ. ಗೆಲ್ಲಲು 525 ರನ್'ಗಳ ಬೃಹತ್ ಮೊತ್ತದ ಗುರಿ ಪಡೆದ ರಾಜಸ್ಥಾನ ಮೂರನೇ ದಿನಾಂತ್ಯದಲ್ಲಿ ತನ್ನ ಎರಡನೇ ಇನ್ನಿಂಗ್ಸಲ್ಲಿ 118 ರನ್'ಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದೆ. ಮೊದಲ ಇನ್ನಿಂಗ್ಸಲ್ಲಿ ತಲಾ 4 ವಿಕೆಟ್ ಕಬಳಿಸಿದ್ದ ವಿನಯ್ ಮತ್ತು ಅರವಿಂದ್ ಈ ಇನ್ನಿಂಗ್ಸಲ್ಲಿ 3 ಮತ್ತು 2 ವಿಕೆಟ್ ಪಡೆದು ಎದುರಾಳಿ ಬ್ಯಾಟುಗಾರರಿಗೆ ಸಿಂಹಸ್ವಪ್ನರೆನಿಸಿದ್ದಾರೆ. ಪಂದ್ಯದ ಮೊದಲಿಂದಲೂ ಹಿಡಿತ ಸಾಧಿಸಿರುವ ಕರ್ನಾಟಕ ಬಹುತೇಕ ಗೆಲುವಿನ ಕ್ಷಣಗಣನೆಯಲ್ಲಿದೆ.

ಎರಡನೇ ದಿನದಂತ್ಯದಲ್ಲಿ ತನ್ನ ಎರಡನೇ ಇನ್ನಿಂಗ್ಸಲ್ಲಿ ವಿಕೆಟ್ ನಷ್ಟವಿಲ್ಲದೆ 78 ರನ್ ಗಳಿಸಿದ್ದ ಕರ್ನಾಟಕ ಇಂದು ರನ್ ಬೇಟೆ ಮುಂದುವರಿಸಿತು. ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ ಕೆಎಲ್ ರಾಹುಲ್ ಆಕರ್ಷಕ ಶತಕ ಭಾರಿಸುವ ಮೂಲಕ ಸೆಲಬ್ರೇಟ್ ಮಾಡಿದರು. ಆರ್.ಸಮರ್ಥ್, ಮಾಯಾಂಕ್ ಅಗರ್ವಾಲ್ ಅರ್ಧಶತಕಗಳನ್ನು ದಾಖಲಿಸಿದರು. ಕರ್ನಾಟಕ 6 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಎದುರಾಳಿಗೆ 525 ರನ್'ಗಳ ಗುರಿ ನೀಡಿತು.

ಇನ್ನು, ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ ತಂಡ ಆರಂಭಿಕ ಆಘಾತಕ್ಕೊಳಗಾಗಿ 67 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಸಲ್ಮಾನ್ ಖಾನ್ ಮತ್ತು ಚೇತನ್ ಬಿಶ್ತ್ ಅವರಿಬ್ಬರು ಮಾತ್ರ ಒಂದಷ್ಟು ಪ್ರತಿರೋಧ ತೋರಿದರು. ಮೂರನೇ ದಿನಾಂತ್ಯದಲ್ಲಿ ರಾಜಸ್ಥಾನ 118 ರನ್'ಗೆ 6 ವಿಕೆಟ್ ಕಳೆದುಕೊಂಡಿದೆ. ನಾಳೆ ಪಂದ್ಯದ ಕೊನೆಯ ದಿನವಾಗಿದ್ದು, ರಾಜಸ್ಥಾನ ಇನ್ನೂ 407 ರನ್ ಗಳಿಸಬೇಕಿದೆ. ಇದು ಕಷ್ಟಸಾಧ್ಯವಾಗಿದ್ದು, ಕರ್ನಾಟಕಕ್ಕೆ ಗೆಲುವು ಬಹುತೇಕ ನಿಶ್ಚಿತವೆನಿಸಿದೆ.

ಕರ್ನಾಟಕ ಮೊದಲ ಇನ್ನಿಂಗ್ಸ್ 99.1 ಓವರ್ 374 ರನ್ ಆಲೌಟ್
(ಮಾಯಾಂಕ್ ಅಗರ್ವಾಲ್ 81, ಕೆಎಲ್ ರಾಹುಲ್ 76, ಆರ್.ಸಮರ್ಥ್ 62, ಸ್ಟುವರ್ಟ್ ಬಿನ್ನಿ 37, ಸಿಎಂ ಗೌತಮ್ 35 ರನ್ - ತನ್ವೀರ್ ಉಲ್-ಹಕ್ 82/5, ಸಲ್ಮಾನ್ ಖಾನ್ 30/2, ಪಂಕಜ್ ಸಿಂಗ್ 82/2)

ರಾಜಸ್ಥಾನ ಮೊದಲ ಇನ್ನಿಂಗ್ಸ್ 54 ಓವರ್ 148 ರನ್ ಆಲೌಟ್
(ಸಿದ್ಧಾರ್ಥ್ ದೋಬಲ್ 47, ಪ್ರಣಯ್ ಶರ್ಮಾ 26, ರಾಜೇಶ್ ಬಿಶ್ನೋಯ್ 25 ರನ್ - ವಿನಯ್ ಕುಮಾರ್ 28/4, ಎಸ್.ಅರವಿಂದ್ 36/4)

ಕರ್ನಾಟಕ ಎರಡನೇ ಇನ್ನಿಂಗ್ಸ್ 62.1 ಓವರ್ 298/6(ಡಿಕ್ಲೇರ್)
(ಕೆಎಲ್ ರಾಹುಲ್ 106, ಮಾಯಾಂಕ್ ಅಗರವಾಲ್ 63, ಆರ್.ಸಮರ್ಥ್ 55, ರಾಬಿನ್ ಉತ್ತಪ್ಪ 39 ರನ್ - ರಾಜೇಶ್ ಬಿಶ್ನೋಯ್ 87/4)

ರಾಜಸ್ಥಾನ ಎರಡನೇ ಇನ್ನಿಂಗ್ಸ್ 33 ಓವರ್ 118/6
(ಸಲ್ಮಾನ್ ಖಾನ್ 39, ಚೇತನ್ ಬಿಸ್ತ್ 24 ರನ್ - ವಿನಯ್ ಕುಮಾರ್ 45/3, ಎಸ್.ಅರವಿಂದ್ 15/2)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?