ಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಜಯ; ರಣಜಿಯಲ್ಲಿ ರಾಜ್ಯಕ್ಕೆ ಶುಭಾರಂಭ

By Suvarna Web DeskFirst Published Oct 17, 2017, 1:39 PM IST
Highlights

ಅಸ್ಸಾಮ್ ತಂಡದ ಮೊದಲ ಇನ್ನಿಂಗ್ಸ್ 145 ರನ್'ಗೆ ಮುಕ್ತಾಯಗೊಂಡಿತು. ಆ ನಂತರ ಕರ್ನಾಟಕ ತಂಡ 7 ವಿಕೆಟ್ ನಷ್ಟಕ್ಕೆ 469 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆರ್.ಸಮರ್ಥ್ ಮತ್ತು ಕೆ.ಗೌತಮ್ ಅಮೋಘ ಶತಕ ಭಾರಿಸಿದರು. ಶ್ರೇಯಸ್ ಗೋಪಾಲ್ ಮತ್ತು ಸ್ಟುವರ್ಟ್ ಬಿನ್ನಿ ಕೂಡ ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆ 324 ರನ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆಡಿದ ಪ್ರವಾಸಿ ಅಸ್ಸಾಮ್ ತಂಡ ಸ್ವಲ್ಪವೂ ಪ್ರತಿರೋಧವಿಲ್ಲದೇ ಹೀನಾಯ ಸೋಲುಂಡಿತು.

ಮೈಸೂರು(ಅ. 17): ಕರ್ನಾಟಕ ಕ್ರಿಕೆಟ್ ತಂಡ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಇಲ್ಲಿಯ ಜಯಚಾಮರಾಜೇಂದ್ರ ಒಡೆಯರ್ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡ ಎ ಗುಂಪಿನ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಕರ್ನಾಟಕ ಇನ್ನಿಂಗ್ಸ್ ಮತ್ತು 121 ರನ್'ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ನಿನ್ನೆ ತನ್ನ 2ನೇ ಇನ್ನಿಂಗ್ಸಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ್ದ ಅಸ್ಸಾಂ ತಂಡ ಇಂದು ನಾಲ್ಕನೇ ದಿನದಾಟದಲ್ಲಿ 203 ರನ್'ಗೆ ಆಲೌಟ್ ಆಯಿತು. ಗೋಕುಲ್ ಶರ್ಮಾ ಮತ್ತು ಶಿಬಶಂಕರ್ ರಾಯ್ ಹೊರತುಪಡಿಸಿ ಉಳಿದವರಾರೂ ಪ್ರತಿರೋಧ ಒಡ್ಡಲು ವಿಫಲರಾದರು. ಕರ್ನಾಟಕದ ಕೆ.ಗೌತಮ್, ಅಭಿಮನ್ಯು ಮಿಥುನ್ ಮತ್ತು ಆರ್.ವಿನಯ್'ಕುಮಾರ್ ಅವರ ಮಾರಕ ಬೌಲಿಂಗ್ ದಾಳಿಗೆ ಅಸ್ಸಾಮ್ ಪಡೆ ತತ್ತರಿಸಿತು. ಮೊದಲ ಇನ್ನಿಂಗ್ಸಲ್ಲಿ ಭರ್ಜರಿ ಶತಕ ಭಾರಿಸಿದ್ದ ಆಫ್'ಸ್ಪಿನ್ನರ್ ಗೌತಮ್ ಒಟ್ಟಾರೆ 7 ವಿಕೆಟ್ ಪಡೆದು ಆಲ್'ರೌಂಡ್ ಪ್ರದರ್ಶನದೊಂದಿಗೆ ಗೆಲುವಿನ ರೂವಾರಿಯಾದರು.

ಇದಕ್ಕೆ ಮೊದಲು ಅಸ್ಸಾಮ್ ತಂಡದ ಮೊದಲ ಇನ್ನಿಂಗ್ಸ್ 145 ರನ್'ಗೆ ಮುಕ್ತಾಯಗೊಂಡಿತು. ಆ ನಂತರ ಕರ್ನಾಟಕ ತಂಡ 7 ವಿಕೆಟ್ ನಷ್ಟಕ್ಕೆ 469 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆರ್.ಸಮರ್ಥ್ ಮತ್ತು ಕೆ.ಗೌತಮ್ ಅಮೋಘ ಶತಕ ಭಾರಿಸಿದರು. ಶ್ರೇಯಸ್ ಗೋಪಾಲ್ ಮತ್ತು ಸ್ಟುವರ್ಟ್ ಬಿನ್ನಿ ಕೂಡ ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆ 324 ರನ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆಡಿದ ಪ್ರವಾಸಿ ಅಸ್ಸಾಮ್ ತಂಡ ಸ್ವಲ್ಪವೂ ಪ್ರತಿರೋಧವಿಲ್ಲದೇ ಹೀನಾಯ ಸೋಲುಂಡಿತು.

ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಗೆಲುವು ದಕ್ಕಿದ್ದರಿಂದ 1 ಬೋನಸ್ ಅಂಕ ಸೇರಿದಂತೆ ಒಟ್ಟು 7 ಪಾಯಿಂಟ್ ಪ್ರಾಪ್ತವಾಯಿತು. ಎ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಜಂಪ್ ಆಯಿತು.

ರಾಜ್ಯ ತಂಡ ತನ್ನ ಮುಂದಿನ ಪಂದ್ಯವನ್ನು ಅ.24ರಿಂದ ಹೈದರಾಬಾದ್ ವಿರುದ್ಧ ಆಡಲಿದೆ. ಶಿವಮೊಗ್ಗದಲ್ಲಿ ಆ ಪಂದ್ಯ ನಡೆಯಲಿದೆ.

ಸ್ಕೋರು ವಿವರ:

ಅಸ್ಸಾಮ್ ಮೊದಲ ಇನ್ನಿಂಗ್ಸ್ 59.1 ಓವರ್ 145 ರನ್ ಆಲೌಟ್
(ಗೋಕುಲ್ ಶರ್ಮಾ 55, ರಿಶವ್ ದಾಸ್ 26 ರನ್ - ಕೆ.ಗೌತಮ್ 20/4, ಶ್ರೇಯಸ್ ಗೋಪಾಲ್ 43/3, ವಿನಯ್'ಕುಮಾರ್ 17/2)

ಕರ್ನಾಟಕ ಮೊದಲ ಇನ್ನಿಂಗ್ಸ್ 126.4 ಓವರ್ 469/7(ಡಿಕ್ಲೇರ್)
(ಕೆ.ಗೌತಮ್ 149, ಆರ್.ಸಮರ್ಥ್ 123, ಶ್ರೇಯಸ್ ಗೋಪಾಲ್ 50, ಸ್ಟುವರ್ಟ್ ಬಿನ್ನಿ 41, ಮಯಂಕ್ ಅಗರ್ವಾಲ್ 31, ವಿನಯ್'ಕುಮಾರ್ 27 ರನ್ - ಅರುಪ್ ದಾಸ್ 113/4, ಎಸ್.ಪುರಕಾಯಸ್ಥ 80/3)

ಅಸ್ಸಾಮ್ ಎರಡನೇ ಇನ್ನಿಂಗ್ಸ್ 73.1 ಓವರ್ 203 ರನ್ ಆಲೌಟ್
(ಗೋಕುಲ್ ಶರ್ಮಾ 66, ಶಿಬಶಂಕರ್ ರಾಯ್ 44, ರಿಶವ್ ದಾಸ್ 21 ರನ್ - ಆರ್.ವಿನಯ್'ಕುಮಾರ್ 31/4, ಕೆ.ಗೌತಮ್ 39/3, ಅಭಿಮನ್ಯು ಮಿಥುನ್ 47/3)

click me!