
ದೆಹಲಿ(ಜೂ.18): ಕಬಡ್ಡಿ ಮಾಸ್ಟರ್ ದುಬೈ ಟೂರ್ನಿಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ. ಜೂನ್ 22 ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಮಹತ್ವದ ಟೂರ್ನಿಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಇದೀಗ ಭಾರತ ಸೇರಿದಂತೆ 6 ದೇಶಗಳು ಪಾಲ್ಗೊಳ್ಳುತ್ತಿರುವ ಮಹತ್ವದ ಟೂರ್ನಿಗೆ ತಂಡವನ್ನ ಪ್ರಕಟಿಸಲಾಗಿದೆ.
ಭಾರತ, ಪಾಕಿಸ್ತಾನ, ಇರಾನ್, ಕೊರಿಯಾ, ಅರ್ಜೇಂಟೀನಾ ಹಾಗೂ ಕೀನ್ಯಾ ತಂಡಗಳು ಈ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. 9 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿದೆ. ಹೀಗಾಗಿ ಬದ್ಧವೈರಿಗಳ ಮುಖಾಮುಖಿ ಇದೀಗ ಎಲ್ಲರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಕಬಡ್ಡಿ ಮಾಸ್ಟರ್ ದುಬೈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ
ಭಾರತ ತಂಡ:
ರೋಹಿತ್ ಕುಮಾರ್, ಮಂಜೀತ್ ಚಿಲ್ಲರ್, ಅಜಯ್ ಠಾಕೂರ್, ಮೋನು ಗೋಯತ್, ರಿಷಾಂಕ್ ದೇವಾಡಿಗ, ರಾಹುಲ್ ಚೌಧರಿ, ಪ್ರದೀಪ್ ನರ್ವಾಲ್, ದೀಪಕ್, ಸುರ್ಜೀತ್, ರಾಜು ಲಾಲ್ ಚೌಧರಿ, ಮೋಹಿತ್ ಚಿಲ್ಲರ್, ಸಂದೀಪ್, ಸುರೇಂದ್ರ ನಾಡಾ ಹಾಗೂ ಗಿರೀಶ್ ಮಾರುತಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.