ಬೂಮ್ರಾ ನಂ.1 ಟಿ20 ಬೌಲರ್!

Published : Oct 31, 2017, 10:49 PM ISTUpdated : Apr 11, 2018, 12:51 PM IST
ಬೂಮ್ರಾ ನಂ.1 ಟಿ20 ಬೌಲರ್!

ಸಾರಾಂಶ

ಪಾಕಿಸ್ತಾನದ ಇಮಾದ್ ವಸೀಂ ಒಂದು ಸ್ಥಾನ ಕೆಳಗಿಳಿದಿದ್ದು, ಬೂಮ್ರಾ ಅಗ್ರಸ್ಥಾನಕ್ಕೇರಲು ಸಹಕಾರಿಯಾಯಿತು.

ದುಬೈ(ಅ.31): ಭಾರತದ ಯುವ ವೇಗಿ ಜಸ್‌ಪ್ರೀತ್ ಬೂಮ್ರಾ ಮಂಗಳವಾರ ಪ್ರಕಟಗೊಂಡ ನೂತನ ಐಸಿಸಿ ಶ್ರೇಣಿ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.

ಸೋಮವಾರವಷ್ಟೇ ಏಕದಿನ  ಶ್ರೇಣಿಯಲ್ಲಿ 3ನೇ ಸ್ಥಾನಕ್ಕೇರಿ ವೃತ್ತಿಬದುಕಿನ ಶ್ರೇಷ್ಠ  ರಾಂಕಿಂಗ್ ಸಾಧಿಸಿದ ಬೂಮ್ರಾ, ಒಂದು ಸ್ಥಾನ ಏರಿಕೆ ಕಂಡು ನಂ.1 ಟಿ20 ಬೌಲರ್ ಎನಿಸಿಕೊಂಡರು. ಪಾಕಿಸ್ತಾನದ ಇಮಾದ್ ವಸೀಂ ಒಂದು ಸ್ಥಾನ ಕೆಳಗಿಳಿದಿದ್ದು, ಬೂಮ್ರಾ ಅಗ್ರಸ್ಥಾನಕ್ಕೇರಲು ಸಹಕಾರಿಯಾಯಿತು. ಇದೇ ವೇಳೆ ಸೋಮವಾರವಷ್ಟೇ ಏಕದಿನ ಬ್ಯಾಟ್ಸ್‌ಮನ್‌ಗಳ ರಾಂಕಿಂಗ್ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್‌ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದ ವಿರಾಟ್ ಕೊಹ್ಲಿ, ಟಿ20 ಬ್ಯಾಟ್ಸ್ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದರೊಂದಿಗೆ ಟಿ20 ಪಟ್ಟಿಯಲ್ಲಿ ಅಗ್ರ ಬ್ಯಾಟ್ಸ್‌ಮನ್ ಹಾಗೂ ಬೌಲರ್ ಸ್ಥಾನವನ್ನು ಭಾರತೀಯರೇ ಪಡೆದಂತಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿ ಕಾಲೆಳೆದ ಸಂಜಯ್ ಮಂಜ್ರೇಕರ್‌ಗೆ ಚಾಟಿ ಬೀಸಿದ ಹರ್ಭಜನ್ ಸಿಂಗ್!
ಆರ್‌ಸಿಬಿ ಮ್ಯಾಚ್ ಬೆಂಗಳೂರು ಬಿಟ್ ಎಲ್ಲಿಗೂ ಶಿಫ್ಟ್ ಆಗೊಲ್ಲ! ಮಹತ್ವದ ಅಪ್‌ಡೇಟ್ಸ್‌ ಕೊಟ್ಟ ಬೆಂಗಳೂರು ಫ್ರಾಂಚೈಸಿ