ಪ್ರೊ ಕಬಡ್ಡಿ ಲೀಗ್ ಟೂರ್ನಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಫಾರ್ಚೂನ್ ಜೈಂಟ್ಸ್ ಅಬ್ಬರದ ಆಟಕ್ಕೆ ಮುಂದಾಗಲಿಲ್ಲ. ಭರ್ಜರಿ ಅಂಕ ಸಂಪಾದಿಸಲಿಲ್ಲ. ಆದರೆ ಕಡಿಮೆ ಅಂಕವಾದರೂ ರೋಚಕ ಪಂದ್ಯ ಕುತೂಹಲ ಹೆಚ್ಚಿಸಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಅಹಮ್ಮದಾಬಾದ್(ಆ.16): ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಫೂರ್ಚೂನ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಅಂಕ ಭರಾಟೆ ಇರಲಿಲ್ಲ. ಆದರೆ ರೋಚಕತೆಗೆ ಯಾವುದೇ ಕೊರತೆಯಾಗಲಿಲ್ಲ. ಪ್ರೊ ಕಬಡ್ಡಿ ಲೀಗ್ ಟೂರ್ನಿ 44ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ 22-19 ಅಂಕಗಳ ಅಂತರದಲ್ಲಿ ಗುಜರಾತ್ ತಂಡವನ್ನು ಮಣಿಸಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಫಸ್ಟ್ ಹಾಫ್ ಆರಂಭದಲ್ಲೇ ಉಭಯ ತಂಡಗಳು ಡೆಫೆನ್ಸ್ ಆಟಕ್ಕೆ ಒತ್ತು ನೀಡಿತು. ಸಚಿನ್ ಯಶಸ್ವಿ ರೈಡ್‌ನಿಂದ ಗುಜರಾಜ್ ಅಂಕಖಾತೆ ತೆರೆಯಿತು. ಪಂಕರಾಜ್ ಅದ್ಭುತ ಟ್ಯಾಕಲ್ ಮೂಲಕ ಗುಜರಾತ್ 2-0 ಮುನ್ನಡೆ ಸಾಧಿಸಿತು. 2ನೇ ನಿಮಿಷದಲ್ಲಿ ಜೈಪುರ್ 2-2 ಅಂತದಲ್ಲಿ ಸಮಬಲ ಮಾಡಿತು. ಮೊದಲಾರ್ಧದಲ್ಲಿ ಸಮಬಲದ ಹೋರಾಟ, ಪಂದ್ಯದ ಕುತೂಹಲ ಹೆಚ್ಚಿಸಿತು. ಜೈಪುರ್ 10-9 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ಸೆಕೆಂಡ್ ಹಾಫ್‌ನಲ್ಲೂ ರೋಚಕ ಹೋರಾಟ ಮುಂದುವರಿಯಿತು. ಅಂಕಗಳ ಅಂತರ ಕಡಿಮೆಯಾದರೂ ಮುನ್ನಡೆ ಜೈಪುರ್ ತಂಡಕ್ಕೆ ನೆರವಾಯಿತು. ದೀಪಕ್ ಹೂಡ 7 ಅಂಕ ಕಬಳಿಸೋ ಮೂಲಕ ಜೈಪುರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅಂತಿಮ ಹಂತದಲ್ಲಿ ಜೈಪುರ 22-19 ಅಂಕಗಳಿಂದ ಗೆಲುವು ಸಾಧಿಸಿತು.