
ದುಬೈ(ಮಾ.21): ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಬಿಷನ್ ಸಿಂಗ್ ಬೇಡಿ, ಆರ್. ಅಶ್ವಿನ್ ನಂತರ ಟೆಸ್ಟ್ ಕ್ರಿಕೆಟ್'ನಲ್ಲಿ ಅಗ್ರಶ್ರೇಯಾಂಕಕ್ಕೇರಿದ ಭಾರತದ ಮೂರನೇ ಬೌಲರ್ ಎಂಬ ಶ್ರೇಯಕ್ಕೆ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ. ಹಾಲಿ ಸರಣಿಯಲ್ಲಿ 21 ಟೆಸ್ಟ್ ವಿಕೆಟ್ ಪಡೆದಿರುವ ಜಡೇಜಾ 899 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಇನ್ನು 862 ಅಂಕಗಳೊಂದಿಗೆ ಅಶ್ವಿನ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ರಾಂಚಿ ಟೆಸ್ಟ್ ದ್ವಿಶತಕ ಸಿಡಿಸಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಆರನೇ ಸ್ಥಾನದಿಂದ ಪ್ರಸ್ತುತ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಪ್ರಸ್ತುತ ಸರಣಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇನ್ನು ಆಲ್ರೌಂಡರ್ ವಿಭಾಗದಲ್ಲಿ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದರೆ, ಅಶ್ವಿನ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಡೇಜಾ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕಪಟ್ಟಿ:
ನಂ. ಬ್ಯಾಟ್ಸಮನ್ ಅಂಕಪಟ್ಟಿ
1. ಸ್ಟೀವ್ ಸ್ಮಿತ್ 941
2. ಚೇ. ಪೂಜಾರ 861
3. ಜೋ ರೂಟ್ 848
4. ವಿರಾಟ್ ಕೊಹ್ಲಿ 826
5. ಕೇನ್ ವಿಲಿಯಮ್ಸ್ 823
6. ಅಜರ್ ಅಲಿ 779
7. ಯೂನಿಸ್ ಖಾನ್ 772
8. ಡೇವಿಡ್ ವಾರ್ನರ್ 768
9. ಹಶೀಂ ಆಮ್ಲಾ 759
10. ಕ್ವಿಂಟನ್ ಡಿಕಾಕ್ 758
ಬೌಲರ್
ನಂ. ಬೌಲರ್ ಅಂಕಪಟ್ಟಿ
1. ಆರ್. ಜಡೇಜಾ 899
2. ಆರ್. ಅಶ್ವಿನ್ 862
3. ಆರ್. ಹೆರಾತ್ 854
4. ಜೋಸ್ ಹ್ಯಾಜಲ್'ವುಡ್ 842
5. ಜೇಮ್ಸ್ ಆ್ಯಂಡರ್'ಸನ್ 810
6. ಸ್ಟುವರ್ಟ್ ಬ್ರಾಡ್ 803
7. ಡೇಲ್ ಸ್ಟೇನ್ 803
8. ಕಗೀಸೋ ರಬಾಡ 802
9. ವೇರ್ನ್ ಫಿಲಾಂಡರ್ 767
10. ನೇಲ್ ವ್ಯಾಗ್ನರ್ 762
ಆಲ್ರೌಂಡರ್
ನಂ. ಆಟಗಾರ ಅಂಕಪಟ್ಟಿ
1. ಶಕಿಬ್-ಅಲ್-ಹಸನ್ 431
2. ಆರ್. ಅಶ್ವಿನ್ 407
3. ಆರ್. ಜಡೇಜಾ 387
4. ಬೆನ್ ಸ್ಟೋಕ್ಸ್ 327
5. ಮಿಚೆಲ್ ಸ್ಟಾರ್ಕ್ 325
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.