ಕ್ರಿಕೆಟ್‌ನಿಂದ ನಿವೃತ್ತಿಗೆ ಸಜ್ಜಾದ್ರಾ ಎಂ ಎಸ್ ಧೋನಿ ?

By Suvarna NewsFirst Published Jul 18, 2018, 1:25 PM IST
Highlights

ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಎಂ ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳ್ತಾರ? ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ಇಂತಹ ಮಾತು ಕೇಳಿಬಂದಿದ್ದೇಕೆ? ಇಲ್ಲಿದೆ ವಿವರ.

ಲೀಡ್ಸ್(ಜು.18): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಹೆಡಿಂಗ್ಲೆಯಲ್ಲಿ ನಡೆದ ಅಂತಿಮ ಏಕದಿನ ಪಂದ್ಯ ಸೋಲೋ ಮೂಲಕ ಭಾರತ 1-2 ಅಂತರದಲ್ಲಿ ಸರಣಿ ಕೈಚೆಲ್ಲಿತು.  

ಲಾರ್ಡ್ಸ್ ಹಾಗೂ ಲೀಡ್ಸ್ ಎರಡು ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಎಡವಿತ್ತು. ಅದರಲ್ಲೂ ಹಿರಿಯ ಬ್ಯಾಟ್ಸ್‌ಮನ್ ಎಂ ಎಸ್ ಧೋನಿ ನಿಧಾನಗತಿಯ ಬ್ಯಾಟಿಂಗ್‌ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಧೋನಿ ರನ್‌ಗಾಗಿ ಪರದಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. 

ಪರ ವಿರೋಧದ ನಡುವೆ ಟೀಂ ಇಂಡಿಯಾದ ಬೆಸ್ಟ್ ಫಿನೀಶರ್ ಎಂ ಎಸ್ ಧೋನಿ ಕ್ರಿಕೆಟ್ ನಿವೃತ್ತಿಗೆ ಸಜ್ಜಾದರಾ ಅನ್ನೋ ಅನುಮಾನ ಮೂಡಿದೆ. ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದ ಸೋಲಿನ ಬಳಿಕ ಎಂ ಎಸ್ ಧೋನಿ ಅಂಪೈರ್‌ ಬಳಿಯಿದ್ದ ಚೆಂಡನ್ನ ಪಡೆದಿದ್ದಾರೆ. ಇದೇ ಧೋನಿ ನಿವೃತ್ತಿಯ ಸೂಚನೆ ನೀಡಿದೆ.

 

Here's the video of the MS Dhoni taking the ball from umpires after the game. pic.twitter.com/C14FwhCwfq

— Sai Kishore (@KSKishore537)

 

ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್‌ನ ಅಂತಿಮ ಪಂದ್ಯದ ನೆನಪಿಗಾಗಿ ಚೆಂಡನ್ನ ಧೋನಿ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಅಂಪೈರ್ ಬಳಿಯಿದ್ದ ಚೆಂಡನ್ನ ಧೋನಿ ಪಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕರಿಯರ್‌ನ ಅಂತಿಮ ಟೆಸ್ಟ್ ಪಂದ್ಯ ಆಡಿದ ಎಂ ಎಸ್ ಧೋನಿ ಸ್ಟಂಪ್ ಸಂಗ್ರಹಿಸಿದ್ದರು. ಬಳಿಕ ಸುದ್ದಿಗೋಷ್ಢಿಯಲ್ಲಿ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. 

 

Is something big announcement coming? pic.twitter.com/wPtMdrr2tb

— MANJUNATH SAVYANAVAR (@CA_MANJUNATH)

 

ಲೀಡ್ಸ್ ಪಂದ್ಯದ ಬಳಿಕ ಚೆಂಡು ಸಂಗ್ರಹಿಸೋ ಮೂಲಕ 37 ವರ್ಷದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಈ ಕುರಿತು ಎಂ ಎಸ್ ಧೋನಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

click me!