ಭಾರತ-ಐರ್ಲೆಂಡ್ ಟಿ20: ಪಂದ್ಯಕ್ಕೂ ಮುನ್ನ ಐರ್ಲೆಂಡ್ ವೇಗಿ ಟೂರ್ನಿಯಿಂದಲೇ ಹಿಂದೆ ಸರಿದಿದ್ದೇಕೆ?

First Published Jun 29, 2018, 3:24 PM IST
Highlights

ಭಾರತ ವಿರುದ್ಧದ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದ ಐರ್ಲೆಂಡ್ ತಂಡಕ್ಕೆ ದಿಢೀರ್ ಶಾಕ್. ಪಂದ್ಯ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗಿ ಐರ್ಲೆಂಡ್ ಪ್ರಮುಖ ವೇಗಿ ಟೂರ್ನಿಯಿಂದ ಹಿಂದೆ ಸರಿಯೋದಾಗಿ ಹೇಳಿದ್ದಾರೆ. ಅಷ್ಟಕ್ಕೂ ಯುವ ವೇಗಿಯ ನಿರ್ಧಾರಕ್ಕೆ ಕಾರಣವೇನು?

ಡಬ್ಲಿನ್(ಜೂ.29): ಭಾರತ ವಿರುದ್ದದ ಮೊದಲ ಟಿ20 ಪಂದ್ಯದ ಸೋಲಿನಿಂದ ಚೇತರಿಸಿಕೊಳ್ಳದ ಐರ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. 2ನೇ ಹಾಗೂ ಅಂತಿಮ ಟಿ20 ಪಂದ್ಯ ಆರಂಭಕ್ಕೂ ಮುನ್ನ ಐರ್ಲೆಂಡ್ ತಂಡ ಪ್ರಮುಖ ವೇಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. 

ಐರ್ಲೆಂಡ್ ಯುವ ವೇಗಿ ಜೋಶುವಾ ಲಿಟಲ್ ತಾವೇ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇಂಜುರಿಯಿಂದ ಬಳಲುತ್ತಿರುವ ಜೋಶುವಾ ಅಂತಿಮ ಪಂದ್ಯದಿಂದ ಹೊರಗುಳಿಯೋದಾಗಿ ಸ್ಪಷ್ಟಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದ ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆಯಾಗರಿಲಿಲ್ಲ. ಇದೀಗ ಇಂಜುರಿಯಿಂದ ಚೇತರಿಸಿಕೊಳ್ಳದ ಕಾರಣ ತಾವೇ ಟೂರ್ನಿಯಿಂದ ಹೊರಗುಳಿಯೋದಾಗಿ ಜೋಶುವಾ ಲಿಟರ್ ಹೇಳಿದ್ದಾರೆ. 

ಅಂತಿಮ ಪಂದ್ಯಕ್ಕಾಗಿ ಜೋಶುವಾಗೆ ಬದಲಿ ಆಟಗಾರರನ್ನ ಆಯ್ಕೆ ಸಮಿತಿ ಘೋಷಿಸಿಲ್ಲ. ಐರ್ಲೆಂಡ್ ತಂಡ ಈಗಾಗಲೇ 20 ವರ್ಷದ ಡೇವಿಡ್ ಡಿಲೆನಿ ತಂಡದಲ್ಲಿದ್ದಾರೆ. ಹೀಗಾಗಿ ಬದಲಿ ಆಟಗಾರರನ್ನ ಆಯ್ಕೆ ಮಾಡಿಲ್ಲ ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.

click me!