
ಸರಾನ್ಸ್[ಜೂ.27]: ಒಬ್ಬೊಬ್ಬ ಕ್ರೀಡಾಪಟುವಿನ ಹಿಂದೆ ಒಂದೊಂದು ರೋಚಕ ಕಥೆ ಇರಲಿದೆ. ಅದೇ ರೀತಿ ವಿಶ್ವ ಶ್ರೇಷ್ಠ ಫುಟ್ಬಾಲಿಗ, ’ಪೆನಾಲ್ಟಿ ಕಿಂಗ್’ ಎಂದೇ ಪ್ರಖ್ಯಾತವಾದ ಕ್ರಿಸ್ಟಿಯಾನೋ ರೊನಾಲ್ಡೋ ಬಾರಿಸಿದ ಪೆನಾಲ್ಟಿಕಿಕ್ ತಡೆದು, ರಾತ್ರೋರಾತ್ರಿ ಜನಪ್ರಿಯತೆ ಗಿಟ್ಟಿಸಿರುವ ಇರಾನ್ ಗೋಲ್‌ಕೀಪರ್ ಅಲಿರೆಜಾ ಸಹ ಅಚ್ಚರಿಯ ಕಥೆ ಹೊಂದಿದ್ದಾರೆ.
ಕುರಿ ಕಾಯುತ್ತಾ ಬೆಳೆದ ಹುಡುದ, ಪಿಜ್ಜಾ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಬಳಿಕ ಕಾರ್ ತೊಳೆಯುವುದು, ರಸ್ತೆ ಬದಿಯಲ್ಲಿ ಕೆಲಸ ಮಾಡುವುದು ಆತನ ವೃತ್ತಿಯಾಗಿತ್ತು. ಫುಟ್ಬಾಲಿಗನಾಗಬೇಕೆಂದು ಮನೆಬಿಟ್ಟು ಬಂದ ಅಲಿರೆಜಾ, ಆರಂಭಿಕ ದಿನಗಳಲ್ಲಿ ಸ್ಟ್ರೈಕರ್ ಆಗಿದ್ದ ಆಟಗಾರ. ಅಕಸ್ಮಾತಾಗಿ ಗೋಲ್‌ಕೀಪರ್ ಆದ ಅಲಿ, ರೊನಾಲ್ಡೋಗೆ ಗೋಲು ತಡೆದು ಪ್ರಸಿದ್ಧಿ ಪಡೆದಿದ್ದಾರೆ.
ಅಲಿರೆಜಾ ಫುಟ್ಬಾಲ್ ಅನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಾಗ ಅವರ ತಂದೆ ವಿರೋಧಿಸಿದ್ದರಂತೆ. ಆದರೆ ಅಲಿರೆಜಾ ತಮ್ಮ ಸಂಬಂಧಿಕರ ಬಳಿ ಹಣ ಸಾಲ ಪಡೆದು ತೆಹ್ರಾನ್ ತೊರೆದಿದ್ದರಂತೆ. ಆ ಬಳಿಕ ಕೆಲಕಾಲ ಹಣವೂ ಇಲ್ಲದೇ, ಸರಿಯಾದ ವಸತಿಯೂ ಇಲ್ಲದೆ ತಾವು ಸೇರಿಕೊಂಡ ಫುಟ್ಬಾಲ್ ಕ್ಲಬ್’ನ ಕ್ಯಾಂಪ್’ನಲ್ಲಿಯೇ ಉಳಿದುಕೊಳ್ಳುತ್ತಿದ್ದರಂತೆ. ಇದೀಗ ವಿಶ್ವ ಶ್ರೇಷ್ಠ ಫುಟ್ಬಾಲಿಗ, ’ಪೆನಾಲ್ಟಿ ಕಿಂಗ್’ ಎಂದೇ ಪ್ರಖ್ಯಾತವಾದ ಕ್ರಿಸ್ಟಿಯಾನೋ ರೊನಾಲ್ಡೋ ಬಾರಿಸಿದ ಪೆನಾಲ್ಟಿಕಿಕ್ ತಡೆದು ಅಲಿರೆಜಾ ಒಂದೇ ದಿನದಲ್ಲಿ ಇರಾನ್ ಜನರ ಹೃದಯ ಗೆದ್ದಿದ್ದಾನೆ.
ಇರಾನ್ ಹಾಗೂ ಪೋರ್ಚುಗಲ್ ನಡುವಿನ ಪಂದ್ಯ 1-1 ಗೋಲುಗಳಿಂದ ರೋಚಕ ಡ್ರಾನಲ್ಲಿ ಅಂತ್ಯಗೊಂಡಿತ್ತು. ನಿರ್ಣಾಯಕ ಹಂತದಲ್ಲಿ ಇರಾನ್ ಗೋಲ್ ಕೀಪರ್ ಅಲಿರೆಜಾ ತಂಡದ ಸೋಲನ್ನು ತಪ್ಪಿಸಿದರಾದರೂ, ತಂಡವನ್ನು ನಾಕೌಟ್ ಹಂತಕ್ಕೇರಿಸಲು ವಿಫಲರಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.